|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮೌತ್ ಮಾಸ್ಕ್ ಮರೆಯದಿರಿ ಅಭಿಯಾನ

ಮೌತ್ ಮಾಸ್ಕ್ ಮರೆಯದಿರಿ ಅಭಿಯಾನ

 

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಛೇರಿ ಮೇರಿಹಿಲ್, ಮಂಗಳೂರು ಇಲ್ಲಿ ಜ.1 ಬುಧವಾರದಂದು ಮೌತ್ ಮಾಸ್ಕ್ ಮರೆಯದಿರಿ ಅಭಿಯಾನವು ನಡೆಯಿತು. ಕೊರೋನಾ ವೈರಾಣುವಿನಿಂದ ಹರಡುವ ಕೋವಿಡ್-19 ರೋಗ ಸಮುದಾಯದಲ್ಲಿ ಹೆಚ್ಚುತ್ತಲೇ ಇದೆ. ಸಾಮಾಜಿಕ ಅಂತರ, ಮುಖ ಕವಚ ಧರಿಸುವಿಕೆ, ಸ್ಯಾನಿಟೈಸರ್ ಮತ್ತು ಸಾಬೂನಿನ ಬಳಕೆಯನ್ನು ಇನ್ನಷ್ಟು ದಿನಗಳ ಕಾಲ ಬಳಸುವುದು ಸೂಕ್ತ. ಇದರ ಮುಖಾಂತರವೇ ರೋಗವನ್ನು ನಿಯಂತ್ರಿಸಲು ಸಾಧ್ಯ ಈ ನಿಟ್ಟಿನಲ್ಲಿ ನಾವೆಲ್ಲರೂ ಇನ್ನಷ್ಟು ಜಾಗೃತರಾಗಿ ವ್ಯವಹರಿಸಬೇಕಾಗಿದೆ. ಎಲ್ಲಾ ಗೃಹರಕ್ಷಕರು ಹಾಗೂ ಸಾರ್ವಜನಿಕರು ಎರಡು ಡೋಸ್ ಲಸಿಕೆ ಪಡೆದ 9 ತಿಂಗಳ ನಂತರ ಬೂಸ್ಟರ್ ಡೋಸ್ ಕಡ್ಡಾಯವಾಗಿ ಪಡೆದುಕೊಳ್ಳುವಂತೆ ಸೂಚಿಸಿದರು. ರೋಗ ನಿಯಂತ್ರಣದಲ್ಲಿ ಲಸಿಕೆ ಬಹುಮುಖ್ಯ ಭೂಮಿಕೆ ವಹಿಸುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ನುಡಿದರು.


ಲಯನ್ಸ್ ಕ್ಲಬ್ ಮಂಗಳೂರು, ಇದರ ಅಧ್ಯಕ್ಷ ಲಯನ್ ಬಿ. ಸತೀಶ್ ರೈ ಇವರು ಮಾತನಾಡಿ ಗೃಹರಕ್ಷಕರ ಚಟುವಟಿಕೆಗಳಿಗೆ ನಾವು ಎಂದಿಗೂ ಸಹಕಾರ ನೀಡುತ್ತೇವೆ. ಯಾವುದೇ ಸಮಾಜಮುಖಿ ಕೆಲಸಗಳಿಗೆ ಲಯನ್ ಸೇವಾ ಸಂಸ್ಥೆ ಜೊತೆಯಾಗಿಯೇ ಇರುತ್ತದೆ ಎಂದು ನುಡಿದರು ಹಾಗೂ ಕಛೇರಿಯ ಸಿಬ್ಬಂದಿಗಳಿಗೆ ಮತ್ತು ಗೃಹರಕ್ಷಕರಿಗೆ ಉಚಿತವಾಗಿ ಮೌತ್ ಮಾಸ್ಕ್ ವಿತರಿಸಿದರು.


ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಟರಾದ ಶ್ರೀ ರಮೇಶ್, ಕಛೇರಿ ಅಧೀಕ್ಷಕರಾದ ಶ್ರೀ ರತ್ನಾಕರ, ಪ್ರಥಮ ದರ್ಜೆ ಸಹಾಯಕಿ ಅನಿತಾ ಟಿ.ಎಸ್, ಸುಬ್ರಹ್ಮಣ್ಯ ಘಟಕದ ಪ್ರಭಾರ ಘಟಕಾಧಿಕಾರಿ ಶ್ರೀ ಹರೀಶ್ಚಂದ್ರ, ಜಯಂತ, ಉಪ್ಪಿನಂಗಡಿ ಘಟಕದ ಪ್ರಭಾರ ಘಟಕಾಧಿಕಾರಿ ಶ್ರೀ ದಿನೇಶ್, ಮುಲ್ಕಿ ಘಟಕದ ಪ್ರಭಾರ ಘಟಕಾಧಿಕಾರಿ ಶ್ರೀ ಲೋಕೇಶ್, ಗೃಹರಕ್ಷಕರಾದ ಸುನೀಲ್ ಕುಮಾರ್, ದಿವಾಕರ್, ಸುಲೋಚನಾ, ಜಯಲಕ್ಷ್ಮಿ ಹಾಗೂ ಲಯನ್ಸ್ ಕ್ಲಬ್‌ನ ಉಪಾಧ್ಯಕ್ಷರು ಗುರುಪ್ರೀತ್ ಆಳ್ವ, ಲಯನ್ಸ್ ಕ್ಲಬ್‌ನ ಸೇವಾ ಚಟುವಟಿಕೆ ಸಂಯೋಜಕರಾದ ಶ್ರೀ ರಿಚರ್ಡ್ ಲೋಬೊ, ಮುಂತಾದವರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم