ಪುತ್ತೂರು ಜ.20: ಇಲ್ಲಿನ ವಿವೇಕಾನಂದ ಪದವಿ ಕಾಲೇಜು, ರಾಜ್ಯದಲ್ಲಿಯೇ ಅತೀ ಹೆಚ್ಚು ಯುವ ಮತದಾರರನ್ನು ನೊಂದಾಯಿಸಿದ ಕಾಲೇಜು ಎಂದು ಗುರುತಿಸಲ್ಪಡುವ ಮೂಲಕ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.
ಕಾಲೇಜಿನ ಐಕ್ಯೂಎಸಿ ಘಟಕ ಮತ್ತು ಮತದಾರರ ಸಾಕ್ಷರತಾ ಘಟಕದ ಆಶ್ರಯದಲ್ಲಿ ಯುವ ಮತದಾರರ ನೊಂದಾವಣೆ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ವಿವೇಕಾನಂದ ಪದವಿ ಕಾಲೇಜು, ವೋಟರ್ ಹೆಲ್ಪ್ ಲೈನ್ ಅಪ್ಲಿಕೇಶನ್ ಮುಖೇನವಾಗಿ ಅತಿ ಹೆಚ್ಚು ಯುವ ಮತದಾರರನ್ನು ನೊಂದಾಯಿಸಿಕೊಂಡಿದೆ.
ಕಾಲೇಜಿನ ಮತದಾರರ ಸಾಕ್ಷರತಾ ಘಟಕದ ಸಂಯೋಜಕರಾಗಿ ಡಾ. ವಿಷ್ಣುಕುಮಾರ್ ಹಾಗೂ ಡಾ. ಪ್ರಮೋದ್ ಕಾರ್ಯ ನಿರ್ವಹಿಸಿದರೆ, ವ್ಯವಹಾರ ಅಡಳಿತ ವಿಭಾಗದ ಉಪನ್ಯಾಸಕಿ ದೀಪಿಕಾ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ