ಸಂಘಧ್ಯೇಯ ಕಿರುಚಿತ್ರ ಬಿಡುಗಡೆ

Upayuktha
0


 ಪುತ್ತೂರು: ಎಯು ಕ್ರಿಯೇಷನ್ಸ್ ಅರ್ಪಿಸುವ, ಅಚಲ್ ಉಬರಡ್ಕ ನಿರ್ದೇಶಿಸಿರುವ ಸಂಘಧ್ಯೇಯ ಕಿರುಚಿತ್ರ ರಾಷ್ಟ್ರೀಯ ಯುವ ದಿನದ ಪ್ರಯುಕ್ತ ಜ.12ರಂದು AU Creations ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಂಡಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರೇರಣೆಯೊಂದಿಗೆ ರಕ್ತದಾನದ ಮಹತ್ವವನ್ನು ತಿಳಿಸುವ ಕಥಾಹಂದರವನ್ನು ಈ ಕಿರುಚಿತ್ರ ಹೊಂದಿದೆ. ರೈ ಮತ್ತು ಚಂದ್ರಶೇಖರ್ ಶೆಟ್ಟಿಯವರ ಛಾಯಾಗ್ರಹಣ ಹಾಗೂ ಪ್ರಸೀದ ಕೃಷ್ಣ ಕಲ್ಲೂರಾಯ ಇವರ ಸಂಕಲನದಲ್ಲಿ ಮೂಡಿ ಬಂದ ಈ ಚಿತ್ರದಲ್ಲಿ ನವನೀತ ಕೃಷ್ಣ ಜೋಗಿಯಡ್ಕ, ಶ್ರೀವತ್ಸ ಭಾರದ್ವಾಜ, ಕಿರಣ್ ಕುಮಾರ್ ಶಾಂತಿನಗರ ನಟಿಸಿದ್ದಾರೆ.


ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಧ್ಯೇಯವನ್ನು ಇಟ್ಟುಕೊಂಡು ರಕ್ತದಾನ ಶ್ರೇಷ್ಠದಾನ ಎಂಬ ಸಂದೇಶ ಸಾರುವ ಕಿರುಚಿತ್ರಕ್ಕೆ ಅಶ್ವಿನ್ ಬಾಬಣ್ಣ ಹಿನ್ನಲೆ ಸಂಗೀತ ನೀಡಿದ್ದು, ಚಿದು ಪಾಂಗಲ್ಪಾಡಿ ಮತ್ತು ಶಿಶಿರ್ ಎಸ್ ದೇವಾಡಿಗ ಹಾಡಿರುತ್ತಾರೆ. ಅಚಲ್ ಉಬರಡ್ಕ ಕಥೆ, ಸಂಭಾಷಣೆ, ನಿರ್ದೇಶನದಲ್ಲಿ ಬಂದ ಚಿತ್ರಕ್ಕೆ ಕಿರಿಕ್ ಕಾರ್ತಿಕ್ ಹಿನ್ನಲೆ ಧ್ವನಿ ನೀಡಿದ್ದಾರೆ.


AU Creations ಯೂಟ್ಯೂಬ್ ಚಾನೆಲ್ ನಲ್ಲಿ ಈ ಕಿರುಚಿತ್ರವನ್ನು ವೀಕ್ಷಿಬಹುದಾಗಿದೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top