||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪರಿಚಯ: ಯಕ್ಷಗಾನದ ನಾಟ್ಯ ಮಯೂರ ರಕ್ಷಿತ್ ಶೆಟ್ಟಿ ಪಡ್ರೆ

ಪರಿಚಯ: ಯಕ್ಷಗಾನದ ನಾಟ್ಯ ಮಯೂರ ರಕ್ಷಿತ್ ಶೆಟ್ಟಿ ಪಡ್ರೆ


ಕರಾವಳಿಗರ ಮನೆ ಮನಗಳಲ್ಲಿ ಯಕ್ಷಗಾನ ಕಲೆ ಬೆರೆತಿದೆ. ಕಿರಿಯ ವಯಸ್ಸಿನಿಂದಲೇ ಯಕ್ಷಗಾನ ಕಲೆ ಕರಗತ ಮಾಡಿಕೊಂಡು, ಇದೀಗ ಈ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸುತ್ತಿರುವ ಯುವ ಯಕ್ಷಗಾನ ಕಲಾವಿದ ನಾಟ್ಯ ಮಯೂರ ರಕ್ಷಿತ್ ಶೆಟ್ಟಿ ಪಡ್ರೆ.


ಶ್ರೀಮತಿ ಗೀತಾ ಶೆಟ್ಟಿ ಹಾಗೂ ರತ್ನಾಕರ ಶೆಟ್ಟಿ ಇವರ ಮಗನಾಗಿ 28.10.1991 ರಂದು ಇವರ ಜನನ.  ಎಂ ಎಸ್ಸಿ ಕಂಪ್ಯೂಟರ್ ಸೈನ್ಸ್ ಇವರ ವಿದ್ಯಾಭ್ಯಾಸ. ಇವರು ಯಕ್ಷಗಾನ ರಂಗಕ್ಕೆ ಬರಲು ಇವರ ತಾಯಿ ಪ್ರೇರಣೆ ಎಂದು ಹೇಳುವ ಪಡ್ರೆ ಅವರು ಗಣೇಶಪುರ ಗಿರೀಶ್ ನಾವಡ, ಲೋಕೇಶ್ ಕುಮಾರ್ ಕಟೀಲು, ದೇವಿಪ್ರಸಾದ್ ಕಟೀಲು ಇವರ ಶಿಷ್ಯ.


ರಂಗಕ್ಕೆ ಹೋಗುವ ಮೊದಲು ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರಿ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-

ಮೊದಲಾಗಿ ಪ್ರಸಂಗದ ಪದ್ಯಗಳನ್ನು ನೋಡಿಕೊಳ್ಳುತ್ತೇನೆ, ಸ್ತ್ರೀವೇಷದ ಮಾಹಿತಿಗಳನ್ನು ಎಂ.ಕೆ ಗುರುಗಳು, ಸಂತೋಷ್ ಕುಮಾರ್ ಹಿಲಿಯಾಣ ಹತ್ತಿರ ಕೇಳುತ್ತೇನೆ, ನನ್ನ ಎದುರು ಬರುವ ಪಾತ್ರಧಾರಿಗಳಲ್ಲಿ ಸಂಭಾಷಣೆಯ ಬಗ್ಗೆ ಕೇಳಿಕೊಳ್ಳುತ್ತೇನೆ, ಅನುಭವಿ ಕಲಾವಿದರಲ್ಲಿ ಆ ಪಾತ್ರದ ಬಗ್ಗೆ ಕೇಳಿ ಸಿದ್ಧಗೊಳ್ಳುತ್ತೇನೆ. ಪುರುಷ ಪಾತ್ರ ಹಾಗೂ ಇತರ ಪಾತ್ರಗಳ ಬಗ್ಗೆ ಮಾಹಿತಿಯನ್ನು ವಾಸುದೇವ ರಂಗಭಟ್, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ಪೆರ್ಲ ಜಗನ್ನಾಥ ಶೆಟ್ಟಿ, ದಿವಾಕರ ರೈ ಸಂಪಾಜೆ, ಪ್ರಜ್ವಲ್ ಕುಮಾರ್ ಗುರುವಾಯನಕೆರೆ ಅವರ ಬಳಿ ಕೇಳಿಕೊಳ್ಳುತ್ತೇನೆ ಎಂದು ಪಡ್ರೆ ಅವರು ಹೇಳುತ್ತಾರೆ.


ಮಾನಿಷಾದ, ವಿಶ್ವಾಮಿತ್ರ ಮೇನಕೆ, ಸುದರ್ಶನ ವಿಜಯ, ಪ್ರಮೀಳಾರ್ಜುನ, ಶುಕ್ರ ನಂದನೆ, ರಾಧಾವಿಲಾಸ, ಅಭಿಮನ್ಯು ಕಾಳಗ ಇತ್ಯಾದಿ ಇವರ ನೆಚ್ಚಿನ ಪ್ರಸಂಗಗಳು.

ಸುದರ್ಶನ, ಅಭಿಮನ್ಯು, ಮೇನಕೆ, ಭ್ರಮರ ಕುಂತಳೆ, ಸುಭದ್ರೆ, ಪ್ರಭಾವತಿ, ಕೃಷ್ಣ, ಶ್ರೀದೇವಿ, ಅಶ್ವತ್ಥಾಮ, ಸೀತೆ, ಮೋಹಿನಿ, ಮೀನಾಕ್ಷಿ ಇತ್ಯಾದಿ ಇವರ ನೆಚ್ಚಿನ ವೇಷಗಳು.

ಬಪ್ಪನಾಡು, ಸಸಿಹಿತ್ಲು, ಹೊಸನಗರ, ಎಡನೀರು ಮೇಳದಲ್ಲಿ ತಿರುಗಾಟವನ್ನು ಮಾಡಿ ಪ್ರಸ್ತುತ ಹನುಮಗಿರಿ ಮೇಳದಲ್ಲಿ ತಿರುಗಾಟವನ್ನು ಮಾಡುತ್ತಿದ್ದಾರೆ.


ಯಕ್ಷಗಾನದ ಇಂದಿನ ಸ್ಥಿತಿಗತಿ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:

ಸರಿಯಾದ ಯಕ್ಷಗಾನದ ಪ್ರಾರ್ಥಮಿಕ ಶಿಕ್ಷಣವೇ ಇಲ್ಲದೆ ಮುಖ್ಯಪಾತ್ರಗಳನ್ನು ಮಾಡುತ್ತಿರುವುದು, ಪೂರ್ವರಂಗ, ರಂಗ ಮಾಹಿತಿ ಪ್ರಸಂಗ ಮಾಹಿತಿ ಇಲ್ಲದೆ ಒಟ್ಟು ಮುಖ್ಯ ವೇಷವನ್ನು ನಿರ್ವಹಿಸುತ್ತಿರುವುದು ಬೇಸರದ ಸಂಗತಿ. ಹಂತಹಂತವಾಗಿ ಕಲಾವಿದ ಇತ್ತೀಚಿನ ದಿನಗಳಲ್ಲಿ ಬೆಳೆಯುತ್ತಿಲ್ಲ. ಸೋಶಿಯಲ್ ಮೀಡಿಯಾದ ಪ್ರಚಾರದಿಂದ ಕಲಾವಿದನ ಬೆಳವಣಿಗೆ ಆಗುತ್ತಿದೆ. ಹೆಚ್ಚಿನ ಕಲಾವಿದರು ಯೂಟ್ಯೂಬ್ ಅನ್ನು ಅವಲಂಬಿಸಿದ್ದಾರೆ ಎಂದು ಪಡ್ರೆ ಅವರು ಹೇಳುತ್ತಾರೆ.


ಇಂದಿನ ಯಕ್ಷಗಾನದ ಪ್ರೇಕ್ಷಕರ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಯಕ್ಷಗಾನದಲ್ಲಿ ಬೇರೆ ಬೇರೆ ತರಹದ ಪ್ರೇಕ್ಷಕರಿದ್ದಾರೆ. ಯಕ್ಷಗಾನ ಕಲೆಯನ್ನು ಆಸ್ವಾದಿಸುವ ಒಂದು ವರ್ಗ, ಹಿಮ್ಮೇಳದ ಕಲಾವಿದರನ್ನು ಮೆಚ್ಚಿಕೊಳ್ಳುವ ವರ್ಗ, ಮುಮ್ಮೇಳದ ಕಲಾವಿದರನ್ನು ಪ್ರೀತಿಸುವ ವರ್ಗ. ಅದು ಪ್ರೇಕ್ಷಕರ ಆಯ್ಕೆಗೆ ಬಿಟ್ಟದ್ದು. ಅಭಿಮಾನ ಎನ್ನುವುದು ಬೇಕು ಪ್ರತಿಯೊಬ್ಬ ಕಲಾವಿದನೂ ಬಯಸುತ್ತಾನೆ. ಹಾಗಂತ ಆ ಕಲಾವಿದ ಮಾಡಿದ ಎಲ್ಲವನ್ನು ಒಪ್ಪುವಂತಹ ಅಭಿಮಾನ ಇರಬಾರದು.

ತಪ್ಪಿದ್ದಲ್ಲಿ ಅದನ್ನು ತಪ್ಪು ಅಂತ ಹೇಳುವ ಅಭಿಮಾನಿಗಳು ಬೇಕು. ಆಗ ಕಲೆ ಕಲಾವಿದ ಉನ್ನತ ಮಟ್ಟವನ್ನು ಹೊಂದಬಹುದು ಎಂದು ಹೇಳುತ್ತಾರೆ ಪಡ್ರೆ.


ಯಕ್ಷಗಾನ ರಂಗದಲ್ಲಿ ಮುಂದಿನ ಯೋಜನೆಗಳ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:- ‌

ನನ್ನ ಹೊಸ ಕಲ್ಪನೆ ಯಕ್ಷಗಾನ ತರಗತಿ, ಯಕ್ಷಗಾನ ಡಾಕ್ಯುಮೆಂಟೇಶನ್ ಗಳು ಯಕ್ಷಗಾನದಲ್ಲಿ ಹೊಸತನ ಯಕ್ಷ ರೂಪಕಗಳು, ಸಮಾಜಕ್ಕೆ ಸಂದೇಶವನ್ನು ಕೊಡುವ ಯಕ್ಷಗಾನ ಕಾನ್ಸೆಪ್ಟ್ ಗಳು, ಇತ್ಯಾದಿ ಮಾಡಬೇಕು ಎಂಬ ಯೋಜನೆ ಇದೆ ಎಂದು ಹೇಳುತ್ತಾರೆ.


ಎಸ್.ಡಿ.ಎಂ ಯಕ್ಷೋತ್ಸವ ಉತ್ತಮ ಪುಂಡುವೇಷ ಪ್ರಶಸ್ತಿ ಮೂರು ಬಾರಿ, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಯಕ್ಷಗಾನ ಬಾಲಪ್ರತಿಭೆ, ನಾಟ್ಯಮಯೂರಿ ಪ್ರಶಸ್ತಿ, ಯಕ್ಷ ಚೈತನ್ಯ ಪ್ರಶಸ್ತಿ, ಪಣಂಬೂರು ಸಂಕ್ರಾಂತಿ ಉತ್ಸವ ಚಿನ್ನದ ಪದಕ ರೋಟರಿ ಸಂಸ್ಥೆ ಹಾಗೂ ಇತ್ಯಾದಿ ಸಂಘ-ಸಂಸ್ಥೆಗಳು ಇವರ ಪ್ರತಿಭೆಯನ್ನು ನೋಡಿ ಸನ್ಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಯಕ್ಷಗಾನ ತರಗತಿ ಮಾಡುವುದು, ಭರತನಾಟ್ಯ, ಗ್ಲಾಸ್ ಪೇಂಟಿಂಗ್, ರಂಗೋಲಿ, ಶಟಲ್ ಆಡುವುದು ಇವರ ಹವ್ಯಾಸಗಳು.


17.02.2021 ರಂದು ಶಬರಿ ಶೆಟ್ಟಿ ಅವರನ್ನು ವಿವಾಹವಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ. ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

Photos by:

Sudarshan Mandrathi, Yaksha Prasanna, Chandrika Bhat Movvar, Ashok Danderangadi, Manjunath Bairy.


-ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

8971275651


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post