||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕವನ: ಅಹಂ ಬ್ರಹ್ಮಾಸ್ಮಿ... !!

ಕವನ: ಅಹಂ ಬ್ರಹ್ಮಾಸ್ಮಿ... !!ನಾನು ಸರ್ವಾಂತರ್ಯಾಮಿ...!

ನಾನು ಎಲ್ಲೆಡೆ ಇರುವೆ... 

ನಾನು ಅವಿನಾಶಿ....

ನನಗೆ ಸಾವಿಲ್ಲ ;ನಾನು ಅಮರ... 

ಅನಲ ನನ್ನ ಸುಡದು... 

ಸಲಿಲ ಎನ್ನ ತೋಯಿಸದು... 

ಅನಿಲ ನನ್ನ ಶುಷ್ಕಗೊಳಿಸದು;ಹಾರಿಸದು ಬೀಳಿಸದು... 

ನಾನು ಅಭೇದ್ಯ ... 

ಯಾರೂ ನನ್ನ ಭೇದಿಸಲಾರರು... 

ನಾನು ಅವಧ್ಯ... 

ಯಾರೂ ನನ್ನ ಕೊಲ್ಲಲಾರರು.... 

ನಾನು ಅಖಂಡ ಅವಿಚ್ಛಿನ್ನ...!

ಯಾವ ನಿಶಿತ ಖಡ್ಗವೂ 

ನನ್ನ ತುಂಡರಿಸಲಾರದು.... 

ನಾನು ನಿರ್ಗುಣ ನಿರಾಕಾರನೂ ಹೌದು...! 

ನಾನು ಸಗುಣ ಸಾಕಾರನೂ ಹೌದು... !

ನಾನು ಮೃಣ್ಮಯ ಕಾಯವಲ್ಲ... 

ನಾನು ಸಚ್ಚಿದಾನಂದ ಚಿನ್ಮಯ.... 

ನಾನು ಅದ್ವಿತೀಯ... !

ನನ್ನ ಹೊರತಾಗಿ ಮತ್ತೇನೂ ಇಲ್ಲ....!

ನಾನು ಘಟದೊಳಗಿನ ಬಿಂದುವೂ ಹೌದು... !

ಬಿಂದುವಿನಿಂದಾದ ಸಿಂಧುವೂ ಹೌದು....!

ಜಡದಲ್ಲಿ ಜಡತ್ವವಾಗಿಯೂ 

ಚೇತನದಲ್ಲಿ ಚೈತನ್ಯವಾಗಿಯೂ ಇರುವೆ... 

ಹಿಂದೆಯೂ ಇದ್ದೆ....

ಈಗಲೂ ಇರುವೆ.... 

ಮುಂದೆಯೂ ಅನಂತಕಾಲದವರೆಗೂ ಕಾಲಗರ್ಭದಲ್ಲಿ ಹುದುಗಿರುವೆ.... 

ನಾನು ಸದಾ ಸರ್ವದಾ ಇರುವೆ.....

ಅಹಂ ಬ್ರಹ್ಮಾಸ್ಮಿ...! 

ಅಹಂ ಬ್ರಹ್ಮಾಸ್ಮಿ...! 


(ವಿವೇಕವೀರರ ಚಿಂತನೆಗಳನ್ನು ಆಧರಿಸಿ ನನ್ನಲ್ಲಿ ಮೂಡಿದ ಕವಿತೆ)


-ಎಸ್. ಎಲ್. ವರಲಕ್ಷ್ಮೀ ಮಂಜುನಾಥ್.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post