||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕವನ: ಜಡನಿದ್ದೆ ಬಿಟ್ಟೆದ್ದು ಬನ್ನಿ

ಕವನ: ಜಡನಿದ್ದೆ ಬಿಟ್ಟೆದ್ದು ಬನ್ನಿ

 ಸಿಡಿಲ ಸಂತ ಸ್ವಾಮಿ ವಿವೇಕಾನಂದರಿಗೆ ನುಡಿ ನಮನಏಳಿ ಎದ್ದೇಳಿ ಕೆಚ್ಚೆದೆಯ ಕುವರರೇ

ಜಡನಿದ್ದೆ ಸಾಕಿನ್ನು ಎಚ್ಚೆತ್ತು ಬನ್ನಿ

ಕೇಳಿರೆಲ್ಲರು ಈಗ ತಾಯ ಮಕ್ಕಳು ನಾವು

ಪೊಡಮಡುತ ಸೇವೆಗಣಿಯಾಗೋಣ ಬನ್ನಿ||೧||


ಸಂಘರ್ಷ ಸಂತಾಪ ಮಾಡದೆಯೆ ಸಾಗುತಿರೆ

ಭಂಗವಿರೆ ನಡೆಯುತಿಹ ಹಾದಿಯೆಡೆಗೆ

ಹೊಂಗನಸ  ಬಿತ್ತುತ್ತ ಹೃದಯವನು ಕೂಡಿಸುತ

ಹಂಗಿರದ ಬಾಳುವೆಯ ಸತ್ಪಥದಕಡೆಗೆ ||೨||


ನಾಯಕನ ನುಡಿಗೆಂದು ಕಾಯದಿರು ನೀನೆಂದು

ನ್ಯಾಯ ಹಾದಿಯನರಸಿ ನೀ ಸಾಗು ಮುಂದೆ

ಜಾಯಮಾನದ ಗುಣವ ಮೆಚ್ಚಲದು ಬಹುಮಂದಿ

ಕಾಯುತಿಹ ಕರೆಯನ್ನು ಸ್ವೀಕರಿಸುತ||೩||


ನೂರಾರು ವರುಷಗಳು ಸಂದಿಹುದು ದಾಸ್ಯದಲಿ

ಬೇರೂರಿ ಬಿಟ್ಟಿಹುದು ಅಂಧಕಾರದ ಕಡಲು

ಪಾರು ಮಾಡಲೇ ಬೇಕು ಬನ್ನಿರೈ ಸೋದರರೇ

ಸೇರುತ್ತ ಎಲ್ಲರೂ ಭಾರತಾಂಬೆಯ ಮಡಿಲು ||೪||


ಸಿಡಿಲಬ್ಬರದ ಮಾತು ಕಣ್ಣ ಕೋಲ್ಮಿಂಚು

ಬಡಿದೆಚ್ಚರಿಸಿ ಬೆಳಕು ಪ್ರವಹಿಸುತಿರಲು

ಅಡಿಗೆರಗಿ ಧಾವಿಸುತ ನಿಂದರು ಕೈಜೋಡಿಸಿ

ನುಡಿದಂತೆ ನಡೆಯುತ್ತ ಮಾತೆ ಭಾರತಿಯ ಪೊರೆಯಲು||೫||

- ಲಕ್ಷ್ಮೀ ವಿ ಭಟ್

ತಲಂಜೇರಿ, ಮಂಜೇಶ್ವರ

ಕಾಸರಗೋಡು
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post