ಪ್ರಧಾನಿ ನರೇಂದ್ರ ಮೋದಿ ಆರೋಗ್ಯ ಮತ್ತು ಆಯುಷ್ಯ ವೃದ್ಧಿಗಾಗಿ ಧರ್ಮಸ್ಥಳದಲ್ಲಿ ಮೃತ್ಯುಂಜಯ ಹೋಮ

Upayuktha
0

ಉಜಿರೆ: ಪ್ರಧಾನಿ ನರೇಂದ್ರ ಮೋದಿಯವರ ಆರೋಗ್ಯ ಮತ್ತು ಆಯುಷ್ಯ ವೃದ್ಧಿಗಾಗಿ ಸೋಮವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಮೃತ್ಯುಂಜಯ ಹೋಮ ನಡೆಯಿತು.


ಸುರತ್ಕಲ್‌ನ ವೇದಮೂರ್ತಿ ನಾಗೇಂದ್ರ ಭಾರದ್ವಾಜ್ ಪ್ರಧಾನ ಪೌರೋಹಿತ್ಯದಲ್ಲಿ ಏಳು ಕುಂಡಗಳಲ್ಲಿ ನಡೆದ ಮೃತ್ಯುಂಜಯ ಹೋಮದಲ್ಲಿ 108 ಮಂದಿ ಅರ್ಚಕರು ಭಾಗವಹಿಸಿದರು.


ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ನಡೆದ ಮೃತ್ಯುಂಜಯ ಹೋಮದಲ್ಲಿ ಶಾಸಕ ಹರೀಶ್ ಪೂಂಜ ಮತ್ತು ಡಾ.ಸ್ವೀಕೃತಿ ಹರೀಶ್ ಪೂಂಜ ಭಾಗವಹಿಸಿ ಪುಣ್ಯಭಾಗಿಗಳಾದರು.




ಸಚಿವರುಗಳಾದ ಕೆ.ಎಸ್. ಈಶ್ವರಪ್ಪ, ಶಶಿಕಲಾ ಜೊಲ್ಲೆ, ಸಿ.ಸಿ ಪಾಟೀಲ್ ಮತ್ತು ಎಸ್. ಅಂಗಾರ ಉಪಸ್ಥಿತರಿದ್ದು ತಾಲ್ಲೂಕಿನ ಸಮಸ್ತ ಜನತೆಯ ಪರವಾಗಿ ಶಾಸಕ ಹರೀಶ್ ಪೂಂಜ ಆಯೋಜಿಸಿದ ಮೃತ್ಯುಂಜಯ ಹೋಮಕ್ಕೆ ಶ್ಲಾಘಿಸಿ ಅಭಿನಂದಿಸಿದರು.


ಬೆಳಿಗ್ಯೆ 7 ಗಂಟೆಗೆ ಆರಂಭವಾದ ಮೃತ್ಯುಂಜಯ ಹೋಮ, ಚತುರ್ವೇದ ಪಾರಾಯಣ, ಗೋಪೂಜೆ ಮತ್ತು ಮಹಾಗಣಪತಿ ಹೋಮದ ಬಳಿಕ ಮಧ್ಯಾಹ್ನ ಒಂದು ಗಂಟೆಗೆ ಮಹಾಮಂಗಳಾರತಿ, ಪೂರ್ಣಾಹುತಿಯೊಂದಿಗೆ ಸಮಾಪನಗೊಂಡಿತು.


ಶುಭ ಹಾರೈಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಶಾಸಕ ಹರೀಶ್ ಪೂಂಜರ ಸೇವಾ ಕಾರ್ಯವನ್ನು ಶ್ಲಾಘಿಸಿ ಅಭಿನಂದಿಸಿ ಪ್ರಧಾನಿಯವರ ಆಯುಷ್ಯ ಮತ್ತು ಆರೋಗ್ಯ ವೃದ್ಧಿಯಾಗಿ, ಸಕಲ ಸನ್ಮಂಗಲ ಉಂಟಾಗಲಿ ಎಂದು ಹಾರೈಸಿ ಶಾಸಕ ಹರೀಶ್ ಪೂಂಜ ಮತ್ತು ಡಾ.ಸ್ವೀಕೃತಿ ಹರೀಶ್ ಪೂಂಜ ದೆಹಲಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರಸಾದ ನೀಡಲಿದ್ದಾರೆ ಎಂದು ಹೇಳಿದರು.


ವಿಧಾನ್ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹಷೇಂದ್ರ ಕುಮಾರ್, ಶ್ರೇಯಸ್‌ ಕುಮಾರ್ ಮತ್ತು ನಿಶ್ಚಲ್‌ ಕುಮಾರ್ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
To Top