ಕುಂದೇಶ್ವರ: ಭಾಗವತ ಮಯ್ಯರಿಗೆ ಶ್ರೀಕುಂದೇಶ್ವರ ಸಮ್ಮಾನ್‌ ಪ್ರಶಸ್ತಿ ಪ್ರದಾನ

Upayuktha
0

ಭಾಗವತ ರಾಘವೇಂದ್ರ ಮಯ್ಯ ಹಾಲಾಡಿ ಅವರಿಗೆ ಶ್ರೀಕುಂದೇಶ್ವರ ಸಮ್ಮಾನ್‌ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪಲ್ಲವಿ ಮಯ್ಯ ಇದ್ದರು. (ಚಿತ್ರ: ಶ್ರೀಗುರು ಸ್ಟುಡಿಯೊ)


ಕಾರ್ಕಳ: ಹಿರ್ಗಾನ ಶ್ರೀ ಕುಂದೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವ ಸಂದರ್ಭ ಬಡಗುತಿಟ್ಟಿನ ಮೇರು ಕಲಾವಿದ ರಾಘವೇಂದ್ರ ಮಯ್ಯ ಹಾಲಾಡಿ ಅವರಿಗೆ ಶ್ರೀ ಕುಂದೇಶ್ವರ ಸಮ್ಮಾನ್‌-2022 ಪ್ರಶಸ್ತಿ ಪ್ರದಾನ ಮಾಡಲಾಯಿತು.


ಸನ್ಮಾನ ಸ್ವೀಕರಿಸಿ ಮಾತನಾಡಿದ ಮಯ್ಯ ಅವರು, ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ್ದಕ್ಕೆ ಇದು ಸಿಕ್ಕ ಮಹಾನ್‌ ಗೌರವ. ಇದನ್ನು ನಾರ್ಣಪ್ಪ ಉಪ್ಪೂರರಿಗೆ ಅರ್ಪಿಸುತ್ತೇನೆ. ಬಡಗು ತೆಂಕು ಪರಿಭೇದ ಇಲ್ಲದೆ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಮಾದರಿ. ಮುಂದೆಯೂ ಕಲಾವಿದರಿಗೆ ಈ ರೀತಿಯ ಪ್ರೋತ್ಸಾಹ ಸಿಗುವ ಮೂಲಕ ಯಕ್ಷಗಾನಕ್ಕೆ ಮನ್ನಣೆ ದೊರಕಲಿ ಎಂದರು. ಶ್ರೀಕುಂದೇಶ್ವರ ದೇವರ ಕುರಿತಾದ ಪದ್ಯ ರಚಿಸಿ, ಹಾಡಿ ರಂಜಿಸಿದರು.


‌ಕಾರ್ಯಕ್ರಮ ಸಂಯೋಜಕ ಜಿತೇಂದ್ರ ಕುಂದೇಶ್ವರ ಅಭಿನಂದಿಸಿ ಮಾತನಾಡಿ, ಮಾಣಿಕ್ಯ ಮಣಿ ಬಿರುದಾಂಕಿತ, ಅಭಿನವ ಕಾಳಿಂಗ ನಾವಡ ಎಂದೇ ಪ್ರಸಿದ್ಧರಾದ ಮಯ್ಯ ಅವರು, ನಾಲ್ಕು ದಶಕಗಳ ಕಾಲ ಬಡಗು ತಿಟ್ಟಿನಲ್ಲಿ ಮೇರು ಭಾಗವತರಾಗಿ ಮೆರೆದವರು. ಅನೇಕ ಕಲಾವಿದರಿಗೆ ಪ್ರೇರಣೆಯಾಗಿರುವ ಮಹಾನ್‌ ಭಾಗವತರಿಗೆ ಸನ್ಮಾನಿಸುವ ಮೂಲಕ ಯಕ್ಷಗಾನಕ್ಕೆ ಗೌರವ ಅರ್ಪಿಸುತ್ತಿದ್ದೇವೆ ಎಂದರು.


ಯಕ್ಷಗುರು ಕದ್ರಿ ರಾಮಚಂದ್ರ ಭಟ್‌ ಎಲ್ಲೂರು ಮಾತನಾಡಿ, ಯಕ್ಷಗಾನದ ಪ್ರಾತಃ ಸ್ಮರಣೀಯರಲ್ಲಿ ಒಬ್ಬರಾಗಿರುವ ಮಯ್ಯ ಅವರು, ಬಡಗು ಮೇಳಗಳಲ್ಲಿ ಮಾತ್ರವಲ್ಲದೆ ತೆಂಕಿನ ದೇಂತಡ್ಕ ಮೇಳದಲ್ಲಿಯೂ ಭಾಗವತರಾಗಿಯೂ ಹೆಸರು  ಮಾಡಿದ್ದಾರೆ ಎಂದರು.


ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946


ದಿ.ರಾಘವೇಂದ್ರ ಭಟ್‌ ಅವರ ಧರ್ಮಪತ್ನಿ ಗಂಗಾ ಆರ್.ಭಟ್‌, ಧರ್ಮದರ್ಶಿ ಕೃಷ್ಣ ರಾಜೇಂದ್ರ ಭಟ್‌, ವೇದಮೂರ್ತಿ ರವೀಂದ್ರ ಭಟ್‌, ಸುಧೀಂದ್ರ ಭಟ್‌, ಸುಜ್ಞೇಂದ್ರ ಭಟ್, ರೆಂಜಾಳ ಸೋದೆ ಮಠದ ಧರ್ಮದರ್ಶಿ ಸುಬ್ರಹ್ಮಣ್ಯ ಭಟ್‌, ಕುಂಜತ್ತೋಡಿ ವಾಸುದೇವ ಭಟ್‌ ಕದ್ರಿ, ಪ್ರಗತಿಪರ ಕೃಷಿಕ ಸತೀಶ್‌ ಭಟ್, ಛಾಯಾಗ್ರಾಹಕರ ಸಂಘದ ಉಪಾಧ್ಯಕ್ಷ ಪದ್ಮಪ್ರಸಾದ್‌ ಜೈನ್‌, ಉದ್ಯಮಿ ಸಂತೋಷ್‌ ಕುಮಾರ್ ಜೈನ್‌ ರೆಂಜಾಳ, ಪಲ್ಲವಿ ಮಯ್ಯ ಇದ್ದರು.


ಭೂ ದಾನಿಗಳಿಗೆ ಸನ್ಮಾನ: ದೇವಸ್ಥಾನ ಮತ್ತು ಊರಿನ ಸಂಪರ್ಕ ರಸ್ತೆಗಾಗಿ ಭೂಮಿಯನ್ನು ನೀಡಿದ ಥಾಮಸ್‌, ಗ್ರೀಗೊರಿ ವಾಸ್‌ ಅವರ ಪುತ್ರ ವಿನ್ಸಂಟ್‌, ಭಂಡಾರಿ ಮನೆತನದ ಪರವಾಗಿ ಸುರೇಶ್‌ ಭಂಡಾರಿ ಅವರನ್ನು ಸನ್ಮಾನಿಸಲಾಯಿತು. ಉದ್ಯಮಿ ಸಿರಿಯಣ್ಣ ಶೆಟ್ಟಿ, ನಿವೃತ್ತ ಮುಖ್ಯೋಪಾಧ್ಯಾಯ ರತ್ನಾಕರ ರಾವ್‌, ಗಂಗಮ್ಮ, ಯುವ ಉದ್ಯಮಿ ಸತೀಶ್‌ ಭಟ್‌ ಕುಂದೇಶ್ವರ ದಾನಿಗಳನ್ನು ಅಭಿನಂದಿಸಿದರು. ಜಿತೇಂದ್ರ ಕುಂದೇಶ್ವರ ನಿರೂಪಿಸಿದರು, ರವೀಂದ್ರ ಭಟ್‌ ವಂದಿಸಿದರು.


ಯಕ್ಷಗಾನ: ರಂಜಿನಿ ಲಕ್ಷ್ಮೀನಾರಾಯಣ ರಾವ್‌, ರಂಗಿಣಿ ಉಪೇಂದ್ರ ರಾವ್‌, ಪ್ರತಿಜ್ಞಾ, ವೈಶಾಲಿ, ನಮಿತ, ನಮ್ರತಾ, ರಿಶಿಕಾ ಕುಂದೇಶ್ವರ ಅವರಿಂದ ಸುಗಮ ಸಂಗೀತ ನಡೆಯಿತು. ಕದ್ರಿ ಯಕ್ಷಕೂಟದ ಸಂಚಾಲಕ ರಾಮಚಂದ್ರ ಭಟ್‌ ಎಲ್ಲೂರು ಅವರಿಂದ ಯೋಗೀಶ್‌ ಅವರ ಭಾಗವತಿಕೆ ಮತ್ತು ರಂಜಿತಾ ಎಲ್ಲೂರು ಪ್ರಧಾನ ಭೂಮಿಕೆಯಲ್ಲಿ ರಾಣಿ ಶಶಿಪ್ರಭೆ ಯಕ್ಷಗಾನ ಪ್ರದರ್ಶನಗೊಂಡಿತು.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top