ಶತಮಾನದ ಹೊಸ್ತಿಲಲ್ಲಿರುವ ಕರ್ಣಾಟಕ ಬ್ಯಾಂಕ್ ನಿಂದ 'ಸಾಮಾಜಿಕ ಆರ್ಥಿಕ ಕ್ರಾಂತಿಯ ಚಳವಳಿ': ಮಹಾಬಲೇಶ್ವರ ಎಂಎಸ್

Upayuktha
0


 

ಮಂಗಳೂರು: ಕರ್ಣಾಟಕ ಬ್ಯಾಂಕ್‌ ಇಂದು ಕೇವಲ ಬ್ಯಾಂಕ್‌ ಆಗಿ ಉಳಿದಿಲ್ಲ, ಬದಲಾಗಿ ಇದೊಂದು ಸಾಮಾಜಿಕ-ಆರ್ಥಿಕ ಕ್ರಾಂತಿಯ ಚಳುವಳಿ. ಇದೀಗ ಶತಮಾನ ಸಂಭ್ರಮದ ಹೊಸ್ತಿಲಲ್ಲಿರುವ ಕರ್ಣಾಟಕ ಬ್ಯಾಂಕ್‌ ಸಮಾಜದ ಜೊತೆ ಬೆಸೆಯುವ ಧ್ಯೇಯ ಹೊಂದಿಕೊಂಡಿದೆ ಎಂದು ಕರ್ಣಾಟಕ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಮಹಾಬಲೇಶ್ವರ ಎಂ.ಎಸ್ ಅವರು ಹೇಳಿದ್ದಾರೆ.


ನಗರದ ಕೆನರಾ ಕಾಲೇಜಿನ ಸುಧೀಂದ್ರ ಸಭಾಂಗಣದಲ್ಲಿ ಭಾನುವಾರ ನಡೆದ ನಮ್ಮ ಕುಡ್ಲ ವಾಹಿನಿ ಪ್ರಸ್ತುತಿಯ ಕರ್ಣಾಟಕ ಬ್ಯಾಂಕ್‌ 'ಬಿಸಿನೆಸ್ ಟಾನಿಕ್‌' ಕಾರ್ಯಕ್ರಮದ 150ನೇ ಸಂಚಿಕೆಯ ಸಮಾರಂಭಕ್ಕೆ ಚಾಲನೆ ನೀಡಿ  ಮಾತನಾಡಿದ ಅವರು, ಈಗಿನ ಟಿವಿ ಮಾಧ್ಯಮದಲ್ಲಿ ಸದಭಿರುಚಿಯ ಕಾರ್ಯಕ್ರಮಗಳು ಕಡಿಮೆ ಪ್ರಸಾರವಾಗುತ್ತಿದೆ. ಆದರೆ ನಮ್ಮ ಕುಡ್ಲ ವಾಹಿನಿ ಸದಭಿರುಚಿಯ ಸಮಾಜಮುಖಿ ಕಾರ್ಯಕ್ರಮಗಳನ್ನು ನೀಡುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದ ಅವರು ಇಂತಹ ಕಾರ್ಯಕ್ರಮ ನಿರಂತರವಾಗಿ ಮುಂದುವರಿಯುತ್ತಿರಲಿ ಎಂದರು.


ಶತಮಾನದ ಹೊಸ್ತಿಲ ಸಂಭ್ರಮದಲ್ಲಿರುವ ಕರ್ಣಾಟಕ ಬ್ಯಾಂಕ್‌ ಇಂತಹ ಸದಭಿರುಚಿಯ ಇನ್ನಷ್ಟು ಕಾರ್ಯಕ್ರಮಗಳಿಗೆ ಬೆಂಬಲ ನೀಡಲಿದೆ. ಎಲ್ಲಿಯವರೆಗೆ ಇಂತಹ ಸಹಸ್ರಾರು ವೀಕ್ಷಕರು ಅಪೇಕ್ಷೆ ಪಡುತ್ತಾರೆಯೇ ಅಲ್ಲಿಯವರೆಗೆ ನಮ್ಮ ಬೆಂಬಲ ಇದ್ದೇ ಇದೆ ಎಂದರು.


ಕರ್ಣಾಟಕ ಬ್ಯಾಂಕಿನ ಅಧ್ಯಕ್ಷ ಪ್ರದೀಪ್‌ ಕುಮಾರ್ ಅವರು ಮುಖ್ಯ ಅತಿಥಿಯಾಗಿ ವರ್ಚುವಲ್‌ ಆಗಿ ಭಾಗವಹಿಸಿ ಮಾತನಾಡಿ, ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳು ಇನ್ನಷ್ಟು ಕಾರ್ಯಚಟುವಟಿಕೆಗಳನ್ನು ಹೆಚ್ಚಿಸುವ ಮೂಲಕ ಬ್ಯಾಂಕ್‌ ವಲಯ ಸೇರಿದಂತೆ ಇಡೀ ಆರ್ಥಿಕ ರಂಗಕ್ಕೆ ಚೈತನ್ಯ ತುಂಬ ಬಲ್ಲ ಶಕ್ತಿಯಾಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.


ವೇದಿಕೆಯಲ್ಲಿ ಇಸ್ಕಾನ್‌ ಸಂಸ್ಥೆ ಮಂಗಳೂರು ಇದರ ಕಾರ್ಯದರ್ಶಿ ಸನಂದನ ದಾಸ, ಫೀಝಾ ಗ್ರೂಪ್‌ ಆಫ್‌ ಕಂಪೆನಿಸ್‌ ಬೆಂಗಳೂರು ಇದರ ಅಧ್ಯಕ್ಷ, ಉದ್ಯಮಿ ಬಿ.ಎಂ ಫಾರೂಕ್‌, ದ.ಕ ಹಾಲು ಉತ್ಪಾಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ಹ್ಯಾಂಗ್ಯೋ ಐಸ್ ಕ್ರೀಂ ಲಿಮಿಟೆಡ್‌ನ ಎಂಡಿ ಪ್ರದೀಪ್‌ ಜಿ. ಪೈ, ಸಂಪನ್ಮೂಲ ವ್ಯಕ್ತಿಗಳಾದ ಸಿಎ ರುದ್ರಮೂರ್ತಿ, ಸಿ ಎ ಅನಿಲ್‌ ಭಾರದ್ವಾಜ್‌, ಕಾರ್ಯಕ್ರಮ ಮುಖ್ಯ ನಿರೂಪಕ ಹಾಗೂ ಸಮನ್ವಯಕಾರ ಸಿಎ.ಎಸ್‌.ಎಸ್‌ ನಾಯಕ್‌ ಮೊದಲಾದವರು ವೇದಿಯಲ್ಲಿದ್ದರು.


ಸಮಾರಂಭದಲ್ಲಿ ಕರ್ಣಾಟಕ ಬ್ಯಾಂಕಿನ ಎಂಡಿ ಮಹಾಬಲೇಶ್ವರ ಎಂ ಎಸ್ ಮತ್ತು ಬಿಸಿನೆಸ್‌ ಟಾನಿಕ್ ಕಾರ್ಯಕ್ರಮ ನಿರ್ದೇಶಕ ಸಿಎ.ಎಸ್.ಎಸ್ ನಾಯಕ್‌ ಅವರನ್ನು ಸನ್ಮಾನಿಸಲಾಯಿತು.

ಇದೇ ವೇಳೆ ಡಾ.ಸುರೇಶ ನೆಗಳಗುಳಿ ಅವರ 'ಧೀರತಮ್ಮನ ಕಬ್ಬ' ಇದರ 3 ನೇ ಸಂಪುಟ ಲೋಕಾರ್ಪಣೆಗೊಂಡಿತು.

   

ನಮ್ಮ ಕುಡ್ಲ ವಾಹಿನಿ ನಿರ್ದೇಶಕರಾದ ಹರೀಶ್ ಬಿ ಕರ್ಕೇರಾ, ಲೀಲಾಕ್ಷ ಬಿ ಕರ್ಕೇರಾ, ಮೋಹನ್ ಬಿ ಕರ್ಕೇರಾ ಸಹೋದರರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಮುರಳೀಧರ್‌ ಶೆಣೈ ಪ್ರಾರ್ಥನೆಗೈದರು. ಸಿಎ ಯಶಸ್ವಿನಿ ಹಾಗೂ ನಿತಿನ್‌ ಸಾಲಿಯಾನ್‌ ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top