ಮುಕ್ತ ವಿ.ವಿ ಪರೀಕ್ಷಾ ಶುಲ್ಕ ಪಾವತಿಗೆ ಸೂಚನೆ

Upayuktha
0


ಉಡುಪಿ: ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2001-02 ರಿಂದ 2014-15 ಹಾಗೂ 2018-19, 2019-20 ಸ್ನಾತಕ ಪದವಿ, ಎಲ್.ಎಲ್.ಎಂ, ಎಂ.ಬಿ.ಎ (ಲಾ), ಎಂ.ಟಿ.ಎಂ ಪದವಿಯ ಪುನಾರಾವರ್ತಿತ ವಿದ್ಯಾರ್ಥಿಗಳು ಹಾಗೂ 2020-21 ನೇ ಶೈಕ್ಷಣಿಕ ಸಾಲಿನಲ್ಲಿ (ಜನವರಿ ಆವೃತ್ತಿ) ಪ್ರವೇಶಾತಿ ಪಡೆದ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳಾದ ಬಿ.ಎ, ಬಿ.ಕಾಂ, ಬಿ.ಲಿಬ್, ಐ.ಎಸ್ಸಿ, ಎಂ.ಎ, ಎಂ.ಕಾಂ, ಎಂ.ಬಿ.ಎ, ಎಂ.ಲಿಬ್.ಐ.ಎಸ್ಸಿ, ಎಲ್ಲಾ ಎಂ.ಎಸ್ಸಿ ಮತ್ತು ಎಲ್ಲಾ ಸ್ನಾತಕ, ಸ್ನಾತಕೋತ್ತರ ಡಿಪ್ಲೋಮಾ, ಸರ್ಟಿಫಿಕೇಟ್ ಕಾರ್ಯಕ್ರಮಗಳ ವಿದ್ಯಾರ್ಥಿಗಳು ವಾರ್ಷಿಕ ಅಥವಾ ಸೆಮಿಸ್ಟರ್ ಪರೀಕ್ಷೆಗಳಿಗೆ ಪರೀಕ್ಷಾ ಶುಲ್ಕವನ್ನು ಆನ್‌ಲೈನ್ ಮೂಲಕ ದಂಡ ಶುಲ್ಕವಿಲ್ಲದೇ ಪಾವತಿಸಲು ಜನವರಿ 24 ಹಾಗೂ 200 ರೂ. ದಂಡ ಶುಲ್ಕದೊಂದಿಗೆ ಪಾವತಿಸಲು ಫೆಬ್ರವರಿ 7 ಕೊನೆಯ ದಿನವಾಗಿದೆ.


ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯದ ವೆಬ್‌ಸೈಟ್ WWW.ksoumysuru.ac.in ಅಥವಾ ಸಹಾಯವಾಣಿ ಸಂಖ್ಯೆ: 8800335638 ಅನ್ನು ಸಂಪರ್ಕಿಸುವಂತೆ ಕ.ರಾ.ಮು.ವಿ ಪ್ರಾದೇಶಿಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

إرسال تعليق

0 تعليقات
إرسال تعليق (0)
To Top