ಮೂಡುಬಿದಿರೆ: ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಯೋಗಾಮೃತ ಸ್ವಾಸ್ಥ್ಯ ಕೇಂದ್ರ - ಯೋಗ ಸಭಾಂಗಣ, ಮರ್ಮ ಚಿಕಿತ್ಸೆ ಹಾಗೂ ಕ್ರೀಡಾ ಔಷಧಿ ಹೊರರೋಗಿ ವಿಭಾಗದ ಉದ್ಘಾಟನಾ ಸಮಾರಂಭ ಮಂಗಳವಾರ ನಡೆಯಿತು.
ಈ ಉದ್ಘಾಟನಾ ಕಾರ್ಯಕ್ರಮವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಅವರು ದೀಪ ಬೆಳಗಿಸುವುದರೊಂದಿಗೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಜಿತ್ ಎಂ, ವೈದ್ಯಕೀಯ ಅಧೀಕ್ಷಕರಾದ ಡಾ. ಮಂಜುನಾಥ್ ಭಟ್ ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮವನ್ನು ಸ್ವಸ್ಥ ವೃತ್ತ ವಿಭಾಗದ ಪ್ರಾಧ್ಯಾಪಕಿ ಡಾ. ಸ್ಮಿತಾ ಭಟ್ ನೆರೆವೇರಿಸಿದರು. ಯೋಗಾಮೃತ ಸ್ವಾಸ್ಥ್ಯ ಕೇಂದ್ರ - ಯೋಗ ಸಭಾಂಗಣದಲ್ಲಿ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆಯ ಎಲ್ಲಾ ಹೊರ ರೋಗಿ ಮತ್ತು ಒಳರೋಗಿಗಳಿಗೆ ನುರಿತ ತಜ್ಞ ವೈದ್ಯರಿಂದ ಯೋಗಾಸನ, ಪ್ರಾಣಾಯಾಮ ಧ್ಯಾನ, ವಿಶ್ರಾಮ ಚಿಕಿತ್ಸೆ ನೀಡಲಾಗುವುದು. ಮರ್ಮ ಚಿಕಿತ್ಸೆ ಮತ್ತು ಕ್ರೀಡಾ ಔಷಧಿ ಹೊರರೋಗಿ ವಿಭಾಗದಲ್ಲಿ ನುರಿತ ವೈದ್ಯರಿಂದ ವಿವಿಧ ಚಿಕಿತ್ಸೆಗಳನ್ನು ನೀಡಲಾಗುವುದು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ