ಪಂಕಜಾ.ಕೆ. ಮುಡಿಪು ಇವರ ಲೇಖನ ಸಂಕಲನ 'ಗೊಂಚಲು' ಕೃತಿ ಬಿಡುಗಡೆ

Upayuktha
0


ಮಂಗಳೂರು: ಕುರ್ನಾಡು ಗ್ರಾಮದ ಮುಡಿಪುವಿನ ಪಂಕಜಾ ಕೆ ರಾಮಭಟ್ ಇವರ ಲೇಖನ ಸಂಕಲನ 'ಗೊಂಚಲು' ಕೃತಿ ಬಿಡುಗಡೆ ಸಮಾರಂಭ ಸೋಮವಾರ (ಜ.10) ನಡೆಯಿತು.


ಮಂಗಳೂರಿನ ವುಡ್‌ಲ್ಯಾಂಡ್ಸ್‌ ಹೋಟೆಲ್ ನ ಸಭಾಂಗಣದಲ್ಲಿ ಕಥಾ ಬಿಂದು ಪ್ರಕಾಶನದ ಪಿ. ವಿ.ಪ್ರದೀಪ್ ಕುಮಾರ್ ಅವರು ಆಯೋಜಿಸಿದ ಕವಿಗೋಷ್ಠಿಯ ಸಂದರ್ಭದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಕೃತಿ ಬಿಡುಗಡೆ ಮಾಡಿದರು.


ಈ ಸಂದರ್ಭದಲ್ಲಿ ಶ್ರೀಮತಿ ಪಂಕಜಾ ಹಾಗೂ ಅವರ ಪತಿ ಶ್ರೀ ಕೆ ಎಸ್.ರಾಮ ಭಟ್ ಅವರನ್ನು ಸ್ಮರಣಿಕೆ ನೀಡಿ ಶಾಲು ಹೊದೆಸಿ ಸನ್ಮಾನಿಸಿ ಗೌರವಿಸಲಾಯಿತು.


ಶ್ರೀಮತಿ ಪಂಕಜಾ ಅವರು ಈಗಾಗಲೇ ತಮ್ಮ ಕವನ ಸಂಕಲನವನ್ನು 'ಸಾವಿತ್ರಿ' ಎಂಬ ಹೆಸರಿನಿಂದ ಪ್ರಕಟಿಸಿದ್ದು, ಇದು ಅವರ ಎರಡನೇ ಕೃತಿ ಮುಂದಕ್ಕೆ ಕಥಾ ಸಂಕಲನವನ್ನು ಪ್ರಕಟಿಸುವ ಆಶಯವನ್ನು ಲೇಖಕಿ ಹೊಂದಿದ್ದಾರೆ.


ಇದೇ ಸಂದರ್ಭದಲ್ಲಿ ಆಯೋಜಿಸಿದ ಕವಿಗೋಷ್ಠಿಯಲ್ಲಿ ಸುಮಾರು 18 ಕವಿ ಕವಯಿತ್ರಿಯರು ಭಾಗವಹಿಸಿ ತಮ್ಮ ಕವನ ವಾಚನ ಮಾಡಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top