||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪಿಪಿಸಿ ಉಡುಪಿಯಲ್ಲಿ 'ಫಾರ್‌ ದ ಲವ್‌ ಆಫ್‌ ಫಿಸಿಕ್ಸ್‌': ಒಂದು ದಿನದ ವಿಶೇಷ ಪ್ರಾಯೋಗಿಕ ಕಾರ್ಯಕ್ರಮ

ಪಿಪಿಸಿ ಉಡುಪಿಯಲ್ಲಿ 'ಫಾರ್‌ ದ ಲವ್‌ ಆಫ್‌ ಫಿಸಿಕ್ಸ್‌': ಒಂದು ದಿನದ ವಿಶೇಷ ಪ್ರಾಯೋಗಿಕ ಕಾರ್ಯಕ್ರಮ


ಉಡುಪಿ: ಪೂರ್ಣಪ್ರಜ್ಞ ಕಾಲೇಜು, ಉಡುಪಿ, ಇದರ ಭೌತಶಾಸ್ತ್ರ ವಿಭಾಗವು, 2021 ರ ಡಿಸೆಂಬರ್ 31ರಂದು "ಫಾರ್ ದ ಲವ್ ಆಫ್ ಫಿಸಿಕ್ಸ್" ಎಂಬ ಒಂದು ದಿನದ ಭೌತಶಾಸ್ತ್ರ ಪ್ರಾಯೋಗಿಕ ಕಾರ್ಯಕ್ರಮವನ್ನು, ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು, ಉಡುಪಿ ಇಲ್ಲಿಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಆಯೋಜಿಸಿತ್ತು.


ವಿಜ್ಞಾನದ ಅನೇಕ ವಿಭಾಗಗಳ 320 ವಿದ್ಯಾರ್ಥಿಗಳೊಂದಿಗೆ ಪದವಿಪೂರ್ವ ಕಾಲೇಜಿನ ಅಧ್ಯಾಪಕರು ಇದರಲ್ಲಿ ಪಾಲ್ಗೊಂಡಿದ್ದರು. 320 ವಿದ್ಯಾರ್ಥಿಗಳನ್ನು ಮೂರು ಗುಂಪುಗಳಾಗಿ ವಿಭಾಗಿಸಿ ಅವರನ್ನು ಭೌತಶಾಸ್ತ್ರದ ಮೂರು  ಅವಧಿಗಳಿಗೆ ಸರದಿಯ ಪ್ರಕಾರ ಕಳುಹಿಸಲಾಗಿತ್ತು.


ಒಂದು ಅವಧಿಯಲ್ಲಿ ವಿಭಾಗದ ಪ್ರಾಧ್ಯಪಕರಾದ ಡಾ. ರಾಮು ಎಲ್. ಇವರು ಭೌತಶಾಸ್ತ್ರದಲ್ಲಿ ಉನ್ನತ ಶಿಕ್ಷಣದ ಬಗ್ಗೆ ವಿವರಿಸುವುದರೊಂದಿಗೆ ತದನಂತರದ ವೃತ್ತಿ ಅವಕಾಶಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು.


ವಿಭಾಗದ ಇನ್ನೋರ್ವ ಪ್ರಾಧ್ಯಪಕರಾದ ಅತುಲ್ ಭಟ್ ಇವರು ಭೌತಶಾಸ್ತ್ರದ ವಿವಿಧ ಪರಿಕಲ್ಪನೆಗಳನ್ನು ಪ್ರಾಯೋಗಿಕ ಪ್ರಾತ್ಯಕ್ಷಿಕೆಗಳೊಂದಿಗೆ ಸರಳವಾಗಿ ವಿವರಿಸಿ ಇನ್ನೊಂದು ಅವಧಿಯನ್ನು ನಡೆಸಿದರು. ಬೆಳಕು ಹಾಗೂ ವಿದ್ಯುತ್ ಪ್ರಯೋಗಗಳನ್ನೊಳಗೊಂಡ ಅವಧಿಯು ವಿಭಾಗದ ಇತರ ಅಧ್ಯಾಪಕರಾದ ಡಾ. ಬಿ. ಲಕ್ಷ್ಮೀಶ ರಾವ್, ಶ್ರೀಮತಿ ದಿವ್ಯ ವಸಂತಕುಮಾರ್ ಹಾಗೂ ಕುಮಾರಿ ಚೈತ್ರ ಇವರ ಉಪಸ್ಥಿತಿಯಲ್ಲಿ ನಡೆಯಿತು. ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ವಿದ್ಯಾರ್ಥಿಗಳು ದೂರದರ್ಶಕದ ಮೂಲಕ ಸೌರಕಲೆಗಳನ್ನು ತೋರಿಸಿದರು.


ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆಯಾದ ಶ್ರೀಮತಿ ಪ್ರತಿಭಾ ಸಿ. ಆಚಾರ್ಯ ಕಾರ್ಯಕ್ರಮವನ್ನು ನಿರ್ವಹಿಸಿ, ಭಾಗವಹಿಸಿದ ಪ್ರತಿಯೊಬ್ಬ ವಿದ್ಯಾರ್ಥಿಗೂ ಭೌತಶಾಸ್ತ್ರದ ಅರಿವು ತಲುಪುವಂತೆ ನೋಡಿಕೊಂಡರು. ಪೂರ್ಣಪ್ರಜ್ಞ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿಯವರು ಈ ಕಾರ್ಯಕ್ರಮಕ್ಕೆ ಆಗಮಿಸಿ, ವಿದ್ಯಾರ್ಥಿಗಳನ್ನು ಹರಸಿ, ಭೌತಶಾಸ್ತ್ರ ವಿಭಾಗವು ಆಯೋಜಿಸಿದ ಈ ಅಪರೂಪದ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ಪ್ರಕಾಶ್ ರಾವ್ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ0 Comments

Post a Comment

Post a Comment (0)

Previous Post Next Post