ದ.ಕ ಜಿಲ್ಲಾ ಕಸಾಪ ಪದಾಧಿಕಾರಿಗಳ ಪಟ್ಟಿ ಪ್ರಕಟ

Upayuktha
0

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್‍ನ ಅಧ್ಯಕ್ಷರಾಗಿ ಡಾ. ಎಂ.ಪಿ. ಶ್ರೀನಾಥ್ ಅವರು ಈಗಾಗಲೇ ಚುನಾಯಿತರಾಗಿದ್ದು, ಜಿಲ್ಲಾ ಕಾರ್ಯಕಾರಿ ಸಮಿತಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.


ವಿವರ ಇಂತಿದೆ:

ಡಾ. ಎಂ.ಪಿ. ಶ್ರೀನಾಥ್ ಅಧ್ಯಕ್ಷರು, ಎಸ್. ಪ್ರದೀಪ್ ಕುಮಾರ ಕಲ್ಕೂರ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷರು, ರಾಜೇಶ್ವರಿ ಎಂ, ಬೆಳ್ತಂಗಡಿ, ಎಚ್. ವಿನಯ ಆಚಾರ್ಯ ಗೌರವ ಕಾರ್ಯದರ್ಶಿಗಳಾಗಿ ಹಾಗೂ ಪೂತ್ತೂರು ಬಿ. ಐತ್ತಪ್ಪ ನಾಯ್ಕ್ ಗೌರವ ಕೋಶಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.


ತಾಲೂಕು ಅಧ್ಯಕ್ಷರ ವಿವರಗಳು:

ಮಂಗಳೂರು ತಾಲೂಕು ಅಧ್ಯಕ್ಷರಾಗಿ ಡಾ. ಮಂಜುನಾಥ್ ಎಸ್. ರೇವಣಕರ್, ಬೆಳ್ತಂಗಡಿ ತಾಲೂಕಿಗೆ ಡಿ. ಯದುಪತಿ ಗೌಡ, ಸುಳ್ಯ ತಾಲೂಕಿಗೆ ಚಂದ್ರಶೇಖರ ಪೇರಾಲು, ಪುತ್ತೂರು ತಾಲೂಕಿಗೆ ಉಮೇಶ್ ನಾಯಕ್, ಬಂಟ್ವಾಳ ತಾಲೂಕಿಗೆ ವಿಶ್ವನಾಥ ಬಂಟ್ವಾಳ, ಕಡಬ ತಾಲೂಕಿಗೆ ಸೇಸಪ್ಪ ರೈ, ಮೂಡಬಿದ್ರೆ ತಾಲೂಕಿಗೆ ವೇಣುಗೋಪಾಲ ಶೆಟ್ಟಿ ಕೆ., ಮೂಲ್ಕಿ ತಾಲೂಕಿಗೆ ಗಾಯತ್ರಿ ಎಸ್. ಉಡುಪ ಹಾಗೂ ಉಳ್ಳಲಕ್ಕೆ ಡಾ. ಧನಂಜಯ ಕುಂಬ್ಳೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.


ಇತರೆ ಸದಸ್ಯರ ವಿವರಗಳು:

ಮಹಿಳಾ ಪ್ರತಿನಿಧಿಗಳಾಗಿ ಅರುಣಾಕುಮಾರಿ ಹಾಗೂ ತೇಜಸ್ವಿ, ಪರಿಶಿಷ್ಟ ಜಾತಿ ಪ್ರತಿನಿಧಿಯಾಗಿ ಪೂವಪ್ಪ ನೇರಳಕಟ್ಟೆ, ರಾಮಚಂದ್ರ ಪಲ್ಲತಡ್ಕ, ಪರಿಶಿಷ್ಟ ಪಂಗಡದ ಪ್ರತಿನಿಧಿಯಾಗಿ ಸುಂದರ ನಾಯ್ಕ, ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿ ಮೋಹನದಾಸ ಸುರತ್ಕಲ್ ಹಾಗೂ ಜಿಲ್ಲಾ ವಾರ್ತಾಧಿಕಾರಿ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರು ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Advt Slider:
To Top