BOOK SHELF: ತುಳುನಾಡಿನ ಸಂಸ್ಕೃತಿಯ ಅನಾವರಣ-'ಬಾರಣೆ' ಕಾದಂಬರಿಯಲ್ಲಿ..

Upayuktha
0

ಹಿಂದಿನ ತುಳುನಾಡಿನ ಜನರ ಆಚರಣೆ ನಂಬಿಕೆಯ ಚಿತ್ರಣವನ್ನು ಅಕ್ಷರದ ಮೂಲಕ ಓದುಗರಿಗೆ ಉಣಬಡಿಸಿದ್ದು ಪ್ರಭಾಕರ್ ನೀರ್ ಮಾರ್ಗ ಇವರ 'ಬಾರಣೆ' ಎಂಬ ಸಾಮಾಜಿಕ ಕಾದಂಬರಿ. ರಾಜ್ಯದಲ್ಲಿ ಸಾಂಸ್ಕೃತಿಕ ಕೇಂದ್ರವಾಗಿರುವ ತುಳುನಾಡಿನಲ್ಲಿ ವಿಶೇಷ ಆಚರಣೆಗಳು ಮತ್ತು ನಂಬಿಕೆಗಳು ಜನರ ಬದುಕಿನೊಂದಿಗೆ ಹಾಸುಹೊಕ್ಕಾಗಿದೆ.


ತುಳುನಾಡಿನ ಜನರ ಆರಾಧನೆಗೆ ಮೂಲವಾಗಿರುವ ಭೂತ-ದೈವಗಳ ಕಾರಣಿಕದ ಜೊತೆಗೆ ಇಲ್ಲಿನ ಪ್ರಕೃತಿ ಸೊಬಗನ್ನು ಪ್ರಭಾಕರ್ ನೀರ್ ಮಾರ್ಗರವರು ಇಲ್ಲಿ ಸೊಗಸಾಗಿ ಚಿತ್ರಿಸಿದ್ದಾರೆ. ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಈ ತುಳುನಾಡಿನಲ್ಲಿ ಆಧುನಿಕ ದಿನಗಳಲ್ಲಿ ಇಲ್ಲಿನ ಸಂಸ್ಕೃತಿಯು ಅಳಿವಿನಂಚಿಗೆ ಹೋಗಿರುವ ಕಾರಣವನ್ನು ಅಥ೯ಪೂಣ೯ವಾಗಿ ವಿವರಿಸಿದ್ದಾರೆ. ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946  


ವಿನಾಶದ ಅಂಚಿಗೆ ಹೋಗುತ್ತಿರುವ ಇಲ್ಲಿನ ಸಂಸ್ಕೃತಿಯನ್ನು ಕಾಪಾಡಿಕೊಂಡು ಹೋಗಬೇಕು ಎಂಬುದು ಈ ಕಾದಂಬರಿಯ ಆಶಯ.

-ಸರೋಜ ಪಿ ಜೆ ನೆಲ್ಯಾಡಿ

ತೃತೀಯ ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
To Top