ಲೇಖಕರು-ಪ್ರಭಾಕರ್ ನೀರ್ ಮಾರ್ಗ
ಪುಸ್ತಕದ ಪುಟ-252
ಬೆಲೆ- ರೂ. 125
ಪ್ರಕಾಶಕರು-ಹೇಮಾವತಿ ಪ್ರಕಾಶನ, ನೀರ್ ಮಾರ್ಗ
ಮೊದಲ ಮುದ್ರಣ- 2008
ತುಳುನಾಡಿನಲ್ಲಿ ಅನಾದಿಕಾಲದಿಂದಲೂ ಚಾಲ್ತಿಯಲ್ಲಿರುವ ಅಳಿಯಕಟ್ಟು ಎಂಬ ಸಂಪ್ರದಾಯದಿಂದಾಗಿ ಎರಡು ಮನೆತನದವರ ನಡುವೆ ಉಂಟಾದ ದ್ವೇಷದಿಂದಾಗಿ ಸಂಭವಿಸಿದ ಅನಾಹುತಗಳ ಕುರಿತು ಪ್ರಭಾಕರ್ ನೀರ್ ಮಾರ್ಗ ರಚಿಸಿರುವ ಸಾಮಾಜಿಕ ಕಾದಂಬರಿಯೇ "ಮದಿಪು".
ಪ್ರಾಣಸ್ನೇಹಿತರಂತಿದ್ದ ವೆಂಕಪ್ಪಯ್ಯ ಮತ್ತು ಕುಪ್ಪಯ್ಯ ಎಂಬ ವ್ಯಕ್ತಿಗಳು ಅಚಾನಕ್ಕಾಗಿ ನಡೆದ ಒಂದು ಘಟನೆಯಿಂದಾಗಿ ಪರಮ ಶತ್ರುಗಳಾದರು.
ವೆಂಕಪ್ಪಯ್ಯನ ಮಗಳಾದ ಗೋಪಿಯ ಸಾವು ಈ ಎರಡು ಕುಟುಂಬಗಳ ನಡುವಿನ ವೈರತ್ವಕ್ಕೆ ಕಾರಣವಾದ ವಿಚಾರ ಮತ್ತು ಇದರಿಂದಾಗಿ ಉಂಟಾದ ದ್ವೇಷದ ಕಿಡಿಯ ಜ್ವಾಲೆಯನ್ನು ಪ್ರಭಾಕರ್ ರವರು ಮದಿಪು ಕಾದಂಬರಿಯಲ್ಲಿ ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ.
ಪುರುಷ ಸಹಜವಾದ ಆಸ್ತಿ ಪಡೆಯುವ ತುಡಿತ ಒಂದೆಡೆಯಾದರೆ, ಅದಕ್ಕೆದುರಾಗಿ ಮಾತೃತ್ವದ ಮಮತೆ ಮತ್ತು ತ್ಯಾಗ. ಇವುಗಳೆಲ್ಲವೂ ಒಂದು ಸುಂದರವಾದ ಪ್ರೇಮ ಕತೆಯ ಮೂಲಕ ಮದಿಪು ಕಾದಂಬರಿಯಲ್ಲಿ ಓದುಗರೆದುರು ಮೂಡಿಬಂದಿದೆ.
-ಸರೋಜ ಪಿ ಜೆ ನೆಲ್ಯಾಡಿ
ತೃತೀಯ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ