ಎಸ್.ಡಿ.ಎಂ ಕಾಲೇಜಿಗೆ ನೂತನ ಪ್ರಾಂಶುಪಾಲರ ನೇಮಕ

Upayuktha
0

 

ಉಜಿರೆ: ಉಜಿರೆ ಎಸ್.ಡಿ.ಎಂ ಕಾಲೇಜಿಗೆ ನೂತನ ಪ್ರಾಂಶುಪಾಲರಾಗಿ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಉದಯ ಚಂದ್ರ ನೇಮಕಗೊಂಡದ್ದಾರೆ. ಕಾಲೇಜಿನ ಪ್ರಾಂಶುಪಾಲರಾಗಿದ್ದ ಡಾ. ಸತೀಶ್ಚಂದ್ರ ವಯೋಸಹಜ ನಿವೃತ್ತಿ ಹೊಂದಿದ್ದರಿಂದ ಈ ನೇಮಕಾತಿ ನಡೆಯಿತು.


ಕಾಲೇಜಿನ ಸಂಸ್ಥಾಪಕ ಪ್ರಾಂಶುಪಾಲರು ಹಾಗೂ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಪ್ರೊ. ಪ್ರಭಾಕರ್ ರವರು ನಿವೃತ್ತಿ ಹೊಂದಿದ ಪ್ರಾಂಶುಪಾಲರಿಗೆ ಶುಭಕೋರಿ, ನೂತನವಾಗಿ ನೇಮಕವಾದ ಪ್ರಾಂಶುಪಾಲರಿಗೆ ಅಧಿಕಾರ ಹಸ್ತಾಂತರಿಸಿದರು.


ಡಾ. ಉದಯ ಚಂದ್ರಾವರು ತಮ್ಮ ಮೂವತ್ತಾರು ವರ್ಷಗಳ ಸೇವೆಯಲ್ಲಿ ಐದಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪಿಎಚ್ಡಿ ಮಾರ್ಗದರ್ಶಕರಾಗಿದ್ದು, ಎಂಟು ಸಂಶೋಧನಾ ಲೇಖನಗಳನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಕಟಿಸಿದ್ದಾರೆ.


ಪದವಿ ಮಕ್ಕಳಿಗಾಗಿ ವಾಣಿಜ್ಯ ಶಾಸ್ತ್ರದಲ್ಲಿ ಹನ್ನೆರಡು ಪಠ್ಯ ಪುಸ್ತಕಗಳನ್ನು ಬರೆದಿರುವ ಇವರಿಗೆ ಐ.ಸಿ.ಎಸ್.ಎಸ್.ಆರ್.ಸಂಸ್ಥೆಯ ಮೇಜರ್ ರಿಸರ್ಚ್ ಪ್ರಾಜೆಕ್ಟ್ ಲಭಿಸಿ, ಕಾರ್ಯ ಪ್ರವೃತ್ತರಾಗಿದ್ದಾರೆ.


ಅಧಿಕಾರ ಸ್ವೀಕರಿಸಿದ ಡಾ. ಉದಯ ಚಂದ್ರರವರು ನಿವೃತ್ತರಾದ ಡಾ. ಸತೀಶ್ಚಂದ್ರರವರ ಬಿಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ, ಕಾಲೇಜಿನ ಜವಾಬ್ದಾರಿಯನ್ನು ಸಮರ್ಥವಾಗಿ ಮುನ್ನಡೆಸುವ ಮಾತನಾಡಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top