ಮೂಡುಬಿದಿರೆ: ಚೆನ್ನೈನ ಎಸ್.ಆರ್.ಎಮ್. ವಿಶ್ವವಿದ್ಯಾನಿಲಯ ಆಶ್ರಯದಲ್ಲಿ ಫೌಂಡರ್ಸ್ ಡೇ ಪ್ರಯುಕ್ತ ಜರುಗಿದ ಅಖಿಲ ಭಾರತ ಆಹ್ವಾನಿತ ಅಂತರ್ ಕಾಲೇಜು ಬಾಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮೂಡಬಿದಿರೆ ಆಳ್ವಾಸ್ ಕಾಲೇಜಿನ ಮಹಿಳಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ರಾಷ್ಟ್ರದ 16 ತಂಗಳು ಭಾಗವಹಿಸಿದ್ದ ಈ ಟೂರ್ನಿಯ ಲೀಗ್ ಹಂತದಲ್ಲಿ ಎಲ್ಲಾ ಪಂದ್ಯಗಳನ್ನು ಗೆಲ್ಲುವುದಲ್ಲದೆ ಸೆಮಿಫೈನಲ್ಸ್ ಸೂಪರ್ ಲೀಗ್ ಪಂದ್ಯಗಳಲ್ಲಿ ಚೆನ್ನೈನ ಎಮ್.ಒ.ಪಿ. ವೈಷ್ಣವ ಹಾಗೂ ಮಧುರೈನ ಎಮ್.ಡಿ.ಸಿ ಕಾಲೇಜು ತಂಡಗಳನ್ನು ನೇರ ಸೆಟ್‌ಗಳಿಂದ ಸೋಲಿಸಿತು. ಅಂತಿಮ ಹಣಾಹಣಿಯಲ್ಲಿ ಆಳ್ವಾಸ್ ತಂಡ ಅತಿಥೇಯ ಎಸ್.ಆರ್.ಎಮ್. ವಿವಿ ತಂಡವನ್ನು 35-16 ಹಾಗೂ 35-25 ನೇರ ಸೆಟ್‌ಗಳಿಂದ ಸೋಲಿಸಿ ಫೌಂಡರ್ಸ್ ಡೇ ಅಖಿಲ ಭಾರತ ಆಹ್ವಾನಿತ ಅಂತರ್ ಕಾಲೇಜು ಬಾಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ