ನಿಸ್ವಾರ್ಥದಿಂದ ಮಾಡುವ ಯಾವುದೇ ಕೆಲಸಗಳು ದೇಶಸೇವೆ ಎನಿಸಿಕೊಳ್ಳುತ್ತವೆ: ಪ್ರಕಾಶ್ ನಂಜಪ್ಪ

Upayuktha
0


ಶೇಷಾದ್ರಿಪುರಂ (ಬೆಂಗಳೂರು): ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜಿನಲ್ಲಿ ನಡೆದ 10 ಮೀಟರ್‌ಗಳ “ಏರ್ ರೈಫಲ್ ಶೂಟಿಂಗ್ ಅಕಾಡೆಮಿ”ಯನ್ನು ಅರ್ಜುನ ಪ್ರಶಸ್ತಿ ಪುರಸ್ಕೃತರೂ ಹಾಗೂ ಒಲಂಪಿಯನ್ ಅಂತರಾಷ್ಟ್ರೀಯ ರೈಫಲ್ ಶೂಟಿಂಗ್ ಕ್ರೀಡಾಪಟು ಪ್ರಕಾಶ್ ನಂಜಪ್ಪ ಉದ್ಘಾಟಿಸಿದರು.


ಶೇಷಾದ್ರಿಪುರಂ ಶಿಕ್ಷಣದತ್ತಿ ಸಭ್ಹಾಂಗಣದಲ್ಲಿ ಆಯೋಜಿಸಲಾಗಿದ್ದ 73ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಅವರು ಮಾತನಾಡುತ್ತಾ, ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜಿನ ವಿದ್ಯಾರ್ಥಿಗಳು ಈಗಾಗಲೇ ಕ್ರೀಡಾ ವಿಭಾಗದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ. ಇಲ್ಲಿ ಇಂದು ಸ್ಥಾಪಿಸಲಾಗಿರುವ 10 ಮೀಟರ್‌ಗಳ “ಏರ್ ರೈಫಲ್ ಶೂಟಿಂಗ್ ಅಕಾಡೆಮಿ”ಯು ಇದೇ ಮೊದಲು ಶಿಕ್ಷಣ ಸಂಸ್ಥೆಯಲ್ಲಿ ಸ್ಥಾಪಿಸಲಾಗಿರುವುದು. ಬೇರೆ ಎಲ್ಲೂ ಇಲ್ಲ ಹಾಗಾಗಿ ಶೇಷಾದ್ರಿಪುರಂ ಶಿಕ್ಷಣದತ್ತಿಯ ಗೌರವ ಪ್ರಧಾನ ಕಾರ್ಯದರ್ಶಿ ನಾಡೋಜ ವೂಡೇ ಪಿ ಕೃಷ್ಣ ಅವರಿಗೆ, ಧರ್ಮದರ್ಶಿ ಡಬ್ಲ್ಯು.ಡಿ ಅಶೋಕ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಹಾಗೂ ಪ್ರಾಂಶುಪಾಲ ಪ್ರೊ.ಎನ್.ಎಸ್. ಸತೀಶ್ ಅವರಿಗೆ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಕ್ಯಪ್ಟನ್ ಚಿಕ್ಕರಂಗಸ್ವಾಮಿ ಅವರಿಗೆ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ ಎಂದರು.


ಏಕೆಂದರೆ ಶಿಕ್ಷಣ ಸಂಸ್ಥೆಯ ಮುನ್ನಡೆಸುವವರ ಕಾಳಜಿ ಮತ್ತು ದೂರ ದೃಷ್ಟಿ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುತ್ತದೆ. ನಿಸ್ವಾರ್ಥದಿಂದ ಮಾಡುವ ಇಂತಹ ಐತಿಹಾಸಿಕ ಕೆಲಸಗಳು ದೇಶಸೇವೆಯೇ ಆಗಿವೆ ಎಂದರು.


ಕಾರ್ಯಕ್ರಮದಲ್ಲಿ ಕರ್ನಾಟಕ ಕ್ರಿಕೆಟ್ ಅಸೋಸಿಯೆಷನ್ ಗೌರವ ಕಾರ್ಯದರ್ಶಿ ಸಂತೋಷ್ ಮೆನನ್ ಅವರು ಧ್ವಜಾರೋಹಣ ನೆರವೇರಿಸಿಕೊಟ್ಟರು. ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಅಧ್ಯಕ್ಷ ಎನ್.ಆರ್. ಪಂಡಿತಾರಾಧ್ಯ, ಗೌರವ ಪ್ರಧಾನ ಕಾರ್ಯದರ್ಶಿಗಳಾದ ಶಿಕ್ಷಣ ತಜ್ಞ ನಾಡೋಜ ಡಾ ವೂಡೇ ಪಿ ಕೃಷ್ಣ, ಹಾಗೂ ಧರ್ಮದರ್ಶಿ ಡಬ್ಲ್ಯು ಡಿ. ಅಶೋಕ್, ಪ್ರಾಂಶುಪಾಲ ಪ್ರೊ. ಎನ್.ಎಸ್. ಸತೀಶ್, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಕ್ಯಾಪ್ಟನ್ ಚಿಕ್ಕರಂಗಸ್ವಾಮಿ ಮೊದಲಾದವರು ಭಾಗವಹಿಸಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




إرسال تعليق

0 تعليقات
إرسال تعليق (0)
Advt Slider:
To Top