|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹುತಾತ್ಮರಾದ ಸೈನಿಕರನ್ನು ಸ್ಮರಿಸೋಣ: ಡಾ. ಚೂಂತಾರು

ಹುತಾತ್ಮರಾದ ಸೈನಿಕರನ್ನು ಸ್ಮರಿಸೋಣ: ಡಾ. ಚೂಂತಾರು

ಮಂಗಳೂರು: ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ, ಬಲಿದಾನ ಮಾಡಿದ ಸೈನಿಕರನ್ನು ವರ್ಷದಲ್ಲಿ ಒಮ್ಮೆ ನೆನಸಿಕೊಂಡರೆ ಸಾಲದು. ಅವರ ತ್ಯಾಗ ಬಲಿದಾನಗಳನ್ನು ನಮ್ಮ ಮಕ್ಕಳಿಗೆ ಮತ್ತು ಯುವಕರಿಗೆ ದೇಶಪ್ರೇಮ ಮತ್ತು ದೇಶಭಕ್ತಿ ಮೂಡಿಸಲು ಪ್ರೇರಣೆಯಾಗಬೇಕು. ಹೆಚ್ಚು ಹೆಚ್ಚು ಜನರು ಸೇನೆಗೆ ಸೇರುವಂತಾಗಬೇಕು. ಸೈನಿಕರ ತ್ಯಾಗ ಬಲಿದಾನಗಳನ್ನು ಕೊಂಡಾಡುವುದರ ಜೊತೆಗೆ, ಜನರಲ್ಲಿ ದೇಶದ ಬಗ್ಗೆ ಅಭಿಮಾನ ಮತ್ತು ಭಕ್ತಿ ಮೂಡಿಸುವ ಕಾರ್ಯ ನಿರಂತರವಾಗಿ ದಿನನಿತ್ಯ ನಡೆಯಬೇಕಾಗಿದೆ. ಹಾಗಾದರೆ ಮಾತ್ರ ವಿಜಯ ದಿವಸದ ಆಚರಣೆಗೆ ಹೆಚ್ಚಿನ ಮೌಲ್ಯ ಬರುತ್ತದೆ ಎಂದು ದಕ್ಷಿಣಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಮತ್ತು ಪೌರರಕ್ಷಣಾ ಪಡೆಯ ಮುಖ್ಯಪಾಲಕರಾದ ಡಾ. ಮರಲೀ ಮೋಹನ್ ಚೂಂತಾರು ಅಭಿಪ್ರಾಯಪಟ್ಟರು.


ದಿನಾಂಕ 16-12-2021ನೇ ಗುರುವಾರದಂದು ನಗರದ ಮೇರಿಹಿಲ್‌ನಲ್ಲಿರುವ ಗೃಹರಕ್ಷಕ ದಳದ ಕಚೇರಿಯಲ್ಲಿ, ಭಾರತ 1971 ಡಿಸೆಂಬರ್ 16 ರಂದು ಬಾಂಗ್ಲಾದೇಶ ವಿಮೋಚನಾ ಯುದ್ದದಲ್ಲಿ, ಪಾಕಿಸ್ತಾನ ವಿರುದ್ದ ಸಾಧಿಸಿದ ಗೆಲುವಿನ 50ನೇ ವರ್ಷಗಳ ಸಂಭ್ರಮಾಚರಣೆ ಹಾಗೂ ಹುತಾತ್ಮ ಯೋಧರಿಗೆ ಪುಷ್ಪ ನಮನ ಕಾರ‍್ಯಕ್ರಮ ಜರುಗಿತು. ಮುಖ್ಯ ಅತಿಥಿಗಳಾದ ಲಯನ್ಸ್ ಕ್ಲಬ್ ಮಂಗಳೂರು ಇದರ ಅಧ್ಯಕ್ಷ ಲಯನ್ ಬಿ.ಸತೀಶ್ ರೈ ಹಾಗೂ ಸದಸ್ಯೆ ಶ್ರೀಮತಿ ಹೇಮಾರಾವ್ ಇದ್ದರು.


ಲಯನ್ ಸತೀಶ್ ರೈ ಮಾತನಾಡಿ ಜನರಲ್ಲಿ ದೇಶಭಕ್ತಿ ಮೂಡಿಸುವ ಕಾರ‍್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಹೆಚ್ಚು ಹೆಚ್ಚು ಯುವ ಜನರು ದೇಶಕ್ಕಾಗಿ ಸೇವೆ ಸಲ್ಲಿಸಲು ಸೇನೆಗೆ ಸೇರುವಂತಾಗಬೇಕು ಎಂದು ನುಡಿದರು. ಉಪ ಸಮಾದೇಷ್ಟರಾದ ರಮೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳೂರು ಘಟಕದ ಘಟಕಾಧಿಕಾರಿ ಮಾರ್ಕ್ ಶೇರಾ ಅವರು ವಂದನಾರ್ಪಣೆ ಮಾಡಿದರು. ಕಛೇರಿ ಅಧೀಕ್ಷಕ ರತ್ನಾಕರ ಹಾಗೂ ಸುಮಾರು 50 ಮಂದಿ ಗೃಹರಕ್ಷಕರು ಉಪಸ್ಥಿತರಿದ್ದರು. ಮೊದಲಾಗಿ ಸಮಾದೇಷ್ಟರು ಅಗಲಿದ ಯೋಧರಿಗೆ ಪುಷ್ಪ ನಮನ ಸಲ್ಲಿಸಿ ಗೌರವ ವಂದನೆ ನೀಡಿದರು. ಆ ಬಳಿಕ ಎಲ್ಲಾ ಗೃಹರಕ್ಷಕರು ಪುಷ್ಪ ನಮನ ಸಲ್ಲಿಸಿದರು.


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post