ಇನ್ಸ್ಟ್ರಾಗ್ರಾಂ ವೀಡಿಯೋ ಪೋಸ್ಟ್ ಮಾಡುವಾಗ ಒಂದು ಕ್ಲಿಪ್ 15 ಸೆಕೆಂಡ್ ಗಳ ಸಮಯದ ಮಿತಿಯನ್ನು ನಿರ್ಧರಿಸಿತ್ತು. 15 ಸೆಕೆಂಡ್ ಗಳಿಗಿಂತ ಹೆಚ್ಚಿನ ಅವಧಿಯ ಕ್ಲಿಪ್ ಗಳನ್ನು ಸ್ವಯಂಚಾಲಿತವಾಗಿ ಉಳಿದ ಭಾಗವನ್ನು ಮತ್ತೊಂದು ಕ್ಲಿಪ್ ಗಳಾಗಿ ವಿಭಜಿಸಬೇಕಿತ್ತು.
ಆದರೆ ಇನ್ನು ಮುಂದೆ ಇಂತಹ ಸಮಸ್ಯೆ ಇರುವುದಿಲ್ಲ. ಈ ಸಮಯದ ಮಿತಿಯನ್ನು 60 ಸೆಕೆಂಡ್ ಗಳವರೆಗೆ ವಿಸ್ತರಿಸಲು ಕಂಪನಿ ಯೋಜಿಸುತ್ತಿದೆ. ಇಡೀ ಒಂದು ನಿಮಿಷದ ಫೈಲ್ ಗಳನ್ನು ಅಪ್ಲೋಡ್ ಮಾಡಲು ಇನ್ನು ಮುಂದೆ ಎಲ್ಲಾ ಸಾಧ್ಯತೆಗಳು ಇರಲಿವೆ.
ಇದರ ಜೊತೆಗೆ ರೀಲ್ಸ್ ವಿಷ್ಯುಯಲ್ ಪ್ರತ್ಯುತ್ತರ ವೈಶಿಷ್ಟ್ಯದಂತಹ ಯೋಜನೆಗಳನ್ನು ಸೇರ್ಪಡೆ ಮಾಡುವ ಪ್ಲಾನ್ ಕೂಡ ಇದೆ. ಅಷ್ಟೇ ಅಲ್ಲದೆ ಒಂದು ರೀಲ್ಸ್ ನ ಕಮೆಂಟ್ ಗೆ ಮತ್ತೊಂದು ರೀಲ್ಸ್ ನಿಂದ ಪ್ರತಿಕ್ರಿಯಿಸುವ ಅವಕಾಶ ಕೂಡ ಇದೆ. ಈ ಎಲ್ಲಾ ವೈಶಿಷ್ಟ್ಯಗಳು ತಾಂತ್ರಿಕವಾಗಿ ಪರೀಕ್ಷಾ ಹಂತದಲ್ಲಿರುವುದರಿಂದ ಇನ್ನೂ ಖಚಿತವಾಗಿಲ್ಲ.