'ಮನಃಶಾಸ್ತ್ರದ ಮೂಲ ಭಗವದ್ಗೀತೆ' ವಿಶೇಷ ಉಪನ್ಯಾಸ ಕಾರ್ಯಕ್ರಮ

Upayuktha
0

ಉಜಿರೆ: ಸಾರ್ವಕಾಲಿಕ ಸತ್ಯವಾದ ನುಡಿಯೇ ಭಗವದ್ಗೀತೆ. ಇದು ಕೇವಲ ಅಧ್ಯಾತ್ಮ ಗ್ರಂಥವಾಗಿರದೆ ಎಲ್ಲರ ಮನಸ್ಸು ಹಾಗೂ ಬುದ್ಧಿಯನ್ನು ಶುದ್ಧಗೊಳಿಸುವ ಶ್ರೀಕೃಷ್ಣನ ನಲ್ನುಡಿ. ಸವಾಲುಗಳನ್ನು ಮೆಟ್ಟಿ ನಿಲ್ಲಲು ಹಾಗೆಯೇ ಸದ್ಗುಣಗಳ ಪೋಷಣೆಗೆ ಇದು ಸಹಕಾರಿಯಾಗಿದೆ. ಶ್ರೀಕೃಷ್ಣ ಇಲ್ಲಿ ಒಬ್ಬ ಆಪ್ತ ಸಮಾಲೋಚಕನಾಗಿ ಅರ್ಜುನನ ಎಲ್ಲಾ ಮನಸ್ಸಿನ ಗೊಂದಲ ನಿವಾರಿಸಿದ. ಇಂದು ಭಗವದ್ಗೀತೆಯನ್ನು ಅಧ್ಯಯನ ಮಾಡುವುದರೊಂದಿಗೆ ನಮ್ಮ ಮನಸ್ಸಿನ ಗೊಂದಲಗಳನ್ನು ನಿವಾರಿಸಿಕೊಳ್ಳಬಹುದು. ಇದು ಮನಃಶಾಸ್ತ್ರಕ್ಕೆ ಬುನಾದಿಯಾದ ಗ್ರಂಥ ಎಂದು ಉಜಿರೆಯ ಯೋಗ ಹಾಗೂ ಪ್ರಕೃತಿ ಚಿಕಿತ್ಸಾ ವಿದ್ಯಾಲಯ ಯೋಗ ಪ್ರಾಧ್ಯಾಪಕರಾದ ಉದಯಸುಬ್ರಹ್ಮಣ್ಯ ಹೇಳಿದರು.


ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಸಂಸ್ಕೃತ ಸಂಘ ಹಾಗೂ ಸಾಮಾಜಿಕ ಜವಾಬ್ದಾರಿ ಉಪಕ್ರಮಗಳ ವೇದಿಕೆಗಳ ಜಂಟಿ ಆಶ್ರಯದಲ್ಲಿ ನಡೆದ 'ಮನಃಶಾಸ್ತ್ರದ ಮೂಲ ಭಗವದ್ಗೀತೆ' ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.


ಕಾಲೇಜಿನ ಪ್ರಾಚಾರ್ಯ ಪ್ರೊ. ದಿನೇಶ ಚೌಟ ಅವರು ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳು ಭಗವದ್ಗೀತೆಯ ಎಲ್ಲ ವಿಷಯ ಅರಿಯುವುದರೊಂದಿಗೆ ಮನಸ್ಸನ್ನು ಏಕಾಗ್ರ ಮಾಡಿಕೊಂಡು ಗುರಿ ಸಾಧಿಸಬೇಕು ಎಂದು ಕರೆ ನೀಡಿದರು. ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನಕುಮಾರ ಐತಾಳ್ ಉಪಸ್ಥಿತರಿದ್ದರು.


ವಂಶಿಈಶ್ವರ ಭಟ್ ಸ್ವಾಗತಿಸಿ , ಸಂಸ್ಕೃತ ಸಂಘದ ಅಧ್ಯಕ್ಷ ಕಾರ್ತಿಕ್ ಕಾರಂತ್ ಧನ್ಯವಾದ ಅರ್ಪಿಸಿದರು. ಧರಿತ್ರಿ ಭಿಡೆ ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top