ಕಡಬ ಗೃಹರಕ್ಷಕದಳ ನೂತನ ಘಟಕಾಧಿಕಾರಿಯಾಗಿ ತೀರ್ಥೇಶ್ ಪದೋನ್ನತಿ, ಪ್ರಮಾಣ ಪತ್ರ ಹಸ್ತಾಂತರ

Upayuktha
0

ಕಡಬ: ಕಡಬ ಗೃಹರಕ್ಷಕ ದಳದ ಪ್ರಭಾರ ಘಟಕಾಧಿಕಾರಿ ತೀರ್ಥೇಶ್ ಅಮೈ ಅವರಿಗೆ ಪ್ಲಟೂನ್ ಕಮಾಂಡರ್ ಹುದ್ದೆಗೆ ಪದೋನ್ನತಿ ನೀಡಲಾಗಿದೆ. ಈ ಸಂಬಂಧ ಪ್ರಮಾಣ ಪತ್ರವನ್ನು ಇಂದು (ಜ.4) ಹಸ್ತಾಂತರಿಸಲಾಯಿತು. ಜಿಲ್ಲಾ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ಅವರು ಪ್ರಮಾಣಪತ್ರವನ್ನು ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಅನಿತಾ, ಕಡಬ ಘಟಕದ ಗೃಹರಕ್ಷಕರಾದ ರವಿ, ಉಮೇಶ್, ಪವಿತ್ ಹಾಗೂ ಮಂಗಳೂರು ಘಟಕದ ಸುಲೋಚನ, ಜಯಲಕ್ಷ್ಮಿ, ಮಹೇಶ್ ಪ್ರಸಾದ್‌ ಹಾಗೂ ದುಷ್ಯಂತ್ ರೈ ಭಾಗವಹಿಸಿದ್ದರು.

ತೀರ್ಥೇಶ್ (ಸಾರ್ಜೆಂಟ್ ಮೆಟಲ್ ನಂ 489), ಇವರು ಪ್ರಭಾರ ಘಟಕಾಧಿಕಾರಿಯಾಗಿದ್ದು, ಗೃಹರಕ್ಷಕದಳದಲ್ಲಿ ದಿನಾಂಕ 01-04-1997 ರಂದು ಸೇವೆಗೆ ಸೇರಿದ್ದರು. ಸುಮಾರು 24 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಪ್ರವಾಹ ರಕ್ಷಣಾ ಕರ್ತವ್ಯ, ಚುನಾವಣಾ ಕರ್ತವ್ಯ, ಬಂದೋಬಸ್ತ್ ಕರ್ತವ್ಯಗಳಲ್ಲಿ ಪೂರ್ಣಪ್ರಮಾಣ ತೊಡಗಿಸಿಕೊಂಡಿರುತ್ತಾರೆ.


ಇವರ ಸೇವಾ ಹಿರಿತನ ಮತ್ತು ದಕ್ಷತೆಯನ್ನು ಆಧರಿಸಿ ಇವರಿಗೆ ಪದೋನ್ನತಿ ನೀಡಲು ಮಾನ್ಯ ಡಿಜಿಪಿ ಅವರು ಶಿಫಾರಸ್ಸು ಸಲ್ಲಿಸಿರುತ್ತಾರೆ. ಇದೀಗ ಮಾನ್ಯ ಡಿಜಿಪಿ ಅವರ ಆದೇಶ ಮತ್ತು ಅನುಮತಿಯೊಂದಿಗೆ ದಿನಾಂಕ 29-12-2021 ರಿಂದ ತೀರ್ಥೇಶ್ ಅವರಿಗೆ ಸಾಜೆಂಟ್ ಹುದ್ದೆಯಿಂದ ಪ್ಲಟೂನ್ ಕಮಾಂಡರ್ ಹುದ್ದೆಗೆ ಭಡ್ತಿ ಹೊಂದಿದ್ದಾರೆ. 

ಕಂಪ್ಯೂಟರ್ ಹಸ್ತಾಂತರ:



ಇದೇ ಸಂದರ್ಭದಲ್ಲಿ ಇನ್‌ಫೋಸಿಸ್ ವತಿಯಿಂದ ನೀಡಲಾದ ಕಂಪ್ಯೂಟರ್ ಅನ್ನು ಕಡಬ ಘಟಕಕ್ಕೆ ಹಸ್ತಾಂತರಿಸಲಾಯಿತು. ಸಮಾದೇಷ್ಟರಾದ ಡಾ. ಚೂಂತಾರು ಅವರು ಕಡಬ ಘಟಕಾಧಿಕಾರಿ ತೀರ್ಥೇಶ್ ಅಮೈ ಅವರಿಗೆ ಹಸ್ತಾಂತರಿಸಿ, ಘಟಕವನ್ನು ಕಾಗದ ರಹಿತ ಕಚೇರಿಯಾಗಿ ಪರಿವರ್ತಿಸುವಂತೆ ಸೂಚನೆ ನೀಡಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top