ಆಳ್ವಾಸ್ ಕಾಲೇಜಿನ ಎನ್‌ಸಿಸಿ ಘಟಕದಿಂದ ನುಡಿನಮನ

Upayuktha
0

 

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಎನ್‌ಸಿಸಿಯ ಮೂರು ಘಟಕಗಳ ವತಿಯಿಂದ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಭಾರತ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹಾಗೂ 13 ಜನ ಸಹವರ್ತಿಗಳಿಗೆ ನುಡಿ ನಮನ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ ಆಳ್ವ ಮೇಣದ ಬತ್ತಿ ಉರಿಸುವ ಮೂಲಕ ಜನರಲ್ ಬಿಪಿನ್ ರಾವತ್ ಹಾಗೂ ಅವರ ಜತೆ ಮಡಿದ 13 ಜನರ ಆತ್ಮಕ್ಕೆ ಶಾಂತಿ ಕೋರಿದರು. ಜನರಲ್ ಬಿಪಿನ್ ರಾವತ್ ನಡೆದು ಬಂದ ದಾರಿಯನ್ನು ಸ್ಮರಿಸಿದ ಅವರು, ಇಂತಹ ಧೀರನ ಅನುಪಸ್ಥಿತಿ ನಮ್ಮ ಸೈನ್ಯಕ್ಕೆ ಸದಾ ಕಾಡುತ್ತದೆ. ಅವರ ಜಾಗಕ್ಕೆ ಮತ್ತೊಬ್ಬ ಅವರಷ್ಟೇ ಧೈರ್ಯವಂತ ಹಾಗೂ ನಿಷ್ಟಾವಂತ ಅಧಿಕಾರಿ ಬರಲಿ ಎಂದರು. ಕಾರ್ಯಕ್ರಮದಲ್ಲಿ ಪುಷ್ಪ ನಮನ, ದೀಪ ಪ್ರಜ್ವಲನೆ ಹಾಗೂ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.


ಕಾರ್ಯಕ್ರಮದಲ್ಲಿ ಬೇಸ್ ಫೌಂಡೇಶನ್‌ನ ಮುಖ್ಯಸ್ಥ ಶರತ್.ವಿ.ಹರಿದಾಸ್, ಆಳ್ವಾಸ್ ಕಾಲೇಜಿನ ಭಾಷಾ ವಿಭಾಗದ ಡೀನ್ ಡಾ. ರಾಜೀವ್.ಸಿ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ ಚಂದ್ರಶೇಖರ ಮಯ್ಯ, ಆಳ್ವಾಸ್ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ಡೀನ್ ವೇಣುಗೋಪಾಲ ಶೆಟ್ಟಿ, ಎಎನ್‌ಒ ಕ್ಯಾಪ್ಟನ್ ಡಾ. ರಾಜೇಶ್ ಬಿ , ಸಬ್ ಲೆಫ್ಟಿನೆಂಟ್ ನಾಗರಾಜ್ ಹಾಗೂ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top