|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪ್ರತಿಯೊಂದು ವಿಷಯದಲ್ಲೂ ಗಣಿತವಿದೆ, ಅದರಲ್ಲೇ ಉತ್ತರವಿದೆ: ಡಾ.ಶೋಭಾ

ಪ್ರತಿಯೊಂದು ವಿಷಯದಲ್ಲೂ ಗಣಿತವಿದೆ, ಅದರಲ್ಲೇ ಉತ್ತರವಿದೆ: ಡಾ.ಶೋಭಾ

ವಿವಿ ಕಾಲೇಜಿನಲ್ಲಿ ಶ್ರೀನಿವಾಸ ರಾಮಾನುಜನ್ ಜನ್ಮ ದಿನಾಚರಣೆ ಪ್ರಯುಕ್ತ ರಸಪ್ರಶ್ನೆ,  ಒಗಟು ಸ್ಪರ್ಧೆ


ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಇನ್ನೋವೇಶನ್ ಕ್ಲಬ್ ಮತ್ತು ಸಸ್ಯಶಾಸ್ತ್ರ ವಿಭಾಗಗಳು ಜಂಟಿಯಾಗಿ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನದ ಅಂಗವಾಗಿ ಗುರುವಾರ ರಸಪ್ರಶ್ನೆ ಮತ್ತು ಮನರಂಜನಾಗಣಿತ, ಒಗಟು ಸ್ಪರ್ಧೆ ಆಯೋಜಿಸಿದ್ದವು.


ಇದು ನೂತನ ರಾಷ್ಟ್ರೀಯ ಶಿಕ್ಷಣ ಪದ್ಧತಿ (ಎನ್ಇಪಿ ) 2020 ಬ್ಯಾಚ್ ನ ವಿದ್ಯಾರ್ಥಿಗಳಿಗೆ ಮೊದಲ ಚಟುವಟಿಕೆ ಆಧಾರಿತ ಕಾರ್ಯಕ್ರಮವಾಗಿದ್ದು, ವಿದ್ಯಾರ್ಥಿಗಳು ತಾವೇ ರಸಪ್ರಶ್ನೆ ಮತ್ತು ಒಗಟುಗಳನ್ನು ಸಿದ್ಧಪಡಿಸಿ ಸ್ಪರ್ಧೆ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಶೋಭಾ ಮಾತನಾಡಿ, ಗಣಿತ ಎಲ್ಲೆಲ್ಲೂಇದೆ. ಪ್ರತಿ ಪ್ರದೇಶದಲ್ಲಿರುವ ಸಸ್ಯಗಳ ಸಂಖ್ಯೆ, ಬೆಳೆ ಇಳುವರಿ, ಪ್ರತಿ ಮರಕ್ಕೆ ಹಣ್ಣುಗಳ ಸಂಖ್ಯೆ, ಹೂ, ಕೇಸರ, ಅಂಡಾಶಯ, ಸಸ್ಯವರ್ಗ, ದೇಶದಲ್ಲಿರುವ ಅರಣ್ಯ ಶೇಕಡಾ ಇತ್ಯಾದಿ. ಎಲ್ಲವನ್ನೂ ಸಂಖ್ಯೆಯಲ್ಲಿಯೇ ಅಳೆಯಲಾಗುತ್ತದೆ ಎಂದರು.


ಕಾರ್ಯಕ್ರಮದ ಉದ್ದೇಶಗಳನ್ನು ವಿವರಿಸಿದ ಸಂಚಾಲಕ ಡಾ.ಸಿದ್ದರಾಜು ಎಂ.ಎನ್, ಇದು ವಿದ್ಯಾರ್ಥಿಗಳಿಗೆ ಕಲಿಕೆಯೆಡೆಗಿನ ಉತ್ಸಾಹ ವೃದ್ಧಿಸಲು ಹಾಗೂ ಅವರಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ, ಪ್ರದರ್ಶಿಸಲು ವೇದಿಕೆ ನೀಡುತ್ತದೆ. ಬಳಿಕ, ವಿದ್ಯಾರ್ಥಿಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಿ ಪ್ರತಿ ಗುಂಪಿಗೂ ಗಣಿತದ ಒಗಟು ಮತ್ತು ರಸಪ್ರಶ್ನೆಗಳನ್ನು ತಯಾರಿಸಲು ಹೇಳಲಾಯಿತು. ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.


ಕಾರ್ಯಕ್ರಮ ಪ್ರಗತಿಯವರ ಪ್ರಾರ್ಥನೆ ಮತ್ತು ದೇವಿಕಾರ ಸ್ವಾಗತದಿಂದ ಆರಂಭವಾಗಿ, ಲೇಖನ್ ಅವರ ಧನ್ಯವಾದದೊಂದಿಗೆ ಮುಕ್ತಾಯವಾಯಿತು. ರಸಪ್ರಶ್ನೆ ಮತ್ತು ಒಗಟು ಕಾರ್ಯಕ್ರಮವನ್ನು ಸ್ವಾತಿ ನಾಯಕ್, ಖುಷಿಶೆಟ್ಟಿ, ಭಾಗ್ಯಲಕ್ಷ್ಮಿ, ಗುರುನಾಥ್, ಅಫ್ರಾ, ಮತ್ತು ಭಾಗ್ಯಶ್ರೀ ನಿರ್ವಹಿಸಿದರು. ಅನ್ವೇಷಣಾ ಸಂಘದ ಸದಸ್ಯರಾದ ವೇದಾಶಿನಿ ಮತ್ತು ಚೇತನ್ ಕಾರ್ಯಕ್ರಮ ನಡೆಸಿಕೊಟ್ಟರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post