||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಎಲುಬಿನ ಸಾಂದ್ರತೆ ತಿಳಿದುಕೊಳ್ಳುವುದು ಅತ್ಯಗತ್ಯ: ಡಾ. ಕೇಶವರಾಜ್

ಎಲುಬಿನ ಸಾಂದ್ರತೆ ತಿಳಿದುಕೊಳ್ಳುವುದು ಅತ್ಯಗತ್ಯ: ಡಾ. ಕೇಶವರಾಜ್


 ಮಂಗಳೂರು: ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನ ಶೈಲಿ, ಆಹಾರ ಪದ್ಧತಿ, ವಾತಾವರಣದ ಕಲ್ಮಷತೆ, ಮತ್ತು ಕೆಲಸದ ಒತ್ತಡ ಇತ್ಯಾದಿಗಳಿಂದ ಮೂಳೆಗಳ ಆರೋಗ್ಯ ಸಣ್ಣ ವಯಸ್ಸಿನಲ್ಲಿಯೇ ಹದಗೆಡುತ್ತಿದೆ. ಐವತ್ತು ಅರುವತ್ತರ ವಯಸ್ಸಿನಲ್ಲಿ ಬರುವ ಅಸ್ಥಿರಂದ್ರತೆ, ಗಂಟುನೋವು, ಸಂಧಿವಾತ ಮುಂತಾದ ರೋಗಗಳು ಮೂವತ್ತು ನಲುವತ್ತರ ಹರಯದಲ್ಲಿಯೇ ಬರುತ್ತದೆ. ಇದು ಅತ್ಯಂತ ಕಳವಳಿಕಾರಿ ವಿಚಾರವಾಗಿದೆ. ಎಲುಬಿನ ಆರೋಗ್ಯಕ್ಕೆ ಪೂರಕವಾದ ಆಹಾರಗಳಾದ ಬೆಲ್ಲ, ರಾಗಿ, ಖರ್ಜೂರ, ಹಾಲು, ಮೊಟ್ಟೆ, ಹಸಿ ತರಕಾರಿಗಳನ್ನು ಹೆಚ್ಚು ಸೇವಿಸಬೇಕು. ಒತ್ತಡ ರಹಿತ ಜೀವನ ಶೈಲಿ ಅಳವಡಿಸಿಕೊಳ್ಳಬೇಕು. ನಿರಂತರವಾಗಿ ದೈಹಿಕ ವ್ಯಾಯಾಮ ಮಾಡಿದಲ್ಲಿ ಎಲುಬಿನ ಆರೋಗ್ಯ ವೃದ್ಧಿಸುತ್ತದೆ ಎಂದು ಖ್ಯಾತ ಆಯುರ್ವೇದಿಕ್ ಫಿಸಿಷಿಯನ್ ಶ್ರೀ ವೇದಮಾಯು ಆಯುರ್ವೇದ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ|| ಕೇಶವರಾಜ್ ಅಭಿಪ್ರಾಯಪಟ್ಟರು.


ದಿನಾಂಕ 23-12-2021ನೇ ಗುರುವಾರದಂದು ನಗರದ ಮೇರಿಹಿಲ್‌ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಕಛೇರಿಯಲ್ಲಿ ದಕ್ಷಿಣ ಕನ್ನಡ ಗೃಹರಕ್ಷಕದಳ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೌರರಕ್ಷಣಾ ಪಡೆ ಇದರ ವತಿಯಿಂದ, ಲಯನ್ಸ್ ಕ್ಲಬ್ ಮಂಗಳೂರು, ಲಿಯೋ ಕ್ಲಬ್ ಮಂಗಳೂರು ಹಾಗೂ ಶ್ರೀ ವೇದಮಾಯು ಆಸ್ಪತ್ರೆ, ಪದವು ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಗೃಹರಕ್ಷಕರಿಗೆ 'ಉಚಿತ ಎಲುಬು ಸಾಂದ್ರತೆ ತಪಾಸಣಾ ಶಿಬಿರ' ಜರುಗಿತು.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಮುಖ್ಯ ಅಥಿತಿಯಾಗಿ ಭಾಗವಹಿಸಿದ ಲಯನ್ಸ್ ಕ್ಲಬ್ ಮಂಗಳೂರು ಇದರ ಅಧ್ಯಕ್ಷರಾದ ಬಿ ಸತೀಶ್ ರೈ ಅವರು ಮಾತನಾಡಿ, ಸಮಾಜದ ಆರೋಗ್ಯ ಕಾಪಾಡುವ ಗೃಹರಕ್ಷಕರ ಆರೋಗ್ಯವನ್ನು ಕಾಯುವುದು ನಮ್ಮೆಲ್ಲರ ಹೊಣೆಗಾರಿಕೆ ಆಗಿರುತ್ತದೆ. ಈ ನಿಟ್ಟಿನಲ್ಲಿ ಅಯನ್ಸ್ ಸೇವಾ ಸಂಸ್ಥೆ ಯಾವತ್ತೂ ಗೃಹರಕ್ಷಕ ದಳದ ಜೊತೆ ಕೈ ಜೋಡಿಸುತ್ತದೆ. ಮುಂದೆಯೂ ಅವರ ಸೇವೆಗೆ ನಾವು ಸದಾ ಸಿದ್ದರಿದ್ದೇವೆ ಎಂದು ನುಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಮಾತನಾಡಿ, ಗೃಹರಕ್ಷಕರ ಆರೋಗ್ಯದ ಹಿತದೃಷ್ಟಿಯಿಂದ ಈ ಶಿಬಿರ ಆಯೋಜನೆ ಮಾಡಲಾಗಿದೆ. ಮಹಿಳೆಯರಲ್ಲಿ ರಸದೂತದ ವೈಪರೀತ್ಯದ ಕಾರಣದಿಂದಾಗಿ ಎಲುಬಿನ ತೊಂದರೆ, ಸ್ನಾಯು ಸೆಳೆತ, ಗಂಟುನೋವು, ಪಾದ ನೋವು, ಸೊಂಟ ನೋವು ಕಂಡುಬರುತ್ತದೆ. ಇದಕ್ಕೆಲ್ಲ ಮೂಲ ಕಾರಣ ಕ್ಯಾಲ್ಸಿಯಂ ಕೊರತೆ. ಕ್ಯಾಲ್ಸಿಯಂ ಕೊರತೆ ಇದ್ದಲ್ಲಿ ಎಲುಬಿನ ಸವೆತ ಜಾಸ್ತಿಯಾಗಿ, ಸ್ನಾಯುಗಳು ದುರ್ಬಲವಾಗಿ ಹಲವಾರು ಸಮಸ್ಯೆಗಳು ತಲೆದೋರುತ್ತದೆ. ಈ ಕಾರಣದಿಂದ ಎಲ್ಲಾ ಗೃಹರಕ್ಷಕರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಿ ಎಂದು ನುಡಿದರು.


ಮಂಗಳೂರು ಘಟಕದ ಘಟಕಾಧಿಕಾರಿ ಮಾರ್ಕ್ ಶೇರಾ ಅವರು ವಂದನಾರ್ಪಣೆ ಮಾಡಿದರು. ಲಯನ್ಸ್ ಕ್ಲಬ್‌ನ ಸೇವಾ ಚಟುವಟಿಕೆ ಸಂಯೋಜಕರಾದ ರಿಚರ್ಡ್ ಲೋಬೊ, ಹಿರಿಯ ಗೃಹರಕ್ಷಕರಾದ ನವೀನ್, ರಾಜಶ್ರೀ, ಭಾರತಿ, ರಾಜೇಶ್ ಗಟ್ಟಿ, ಮಧುಮತಿ, ದಿವಾಕರ್, ದುಶ್ಯಂತ್ ಮುಂತಾದವರು ಉಪಸ್ಥಿತರಿದ್ದರು. ಸುಮಾರು 50 ಮಂದಿ ಗೃಹರಕ್ಷಕರು ಮತ್ತು 50 ಮಂದಿ ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post