ಮಣಿಕರ್ಣಿಕ ಮಾತುಗಾರರ ವೇದಿಕೆಯಲ್ಲಿ ಯೋಧರಿಗೆ ನಮನ

Upayuktha
0

 

ಯೋಧನಿಲ್ಲದ ಬದುಕನ್ನು ಊಹಿಸುವುದು ಅಸಾಧ್ಯ: ಲೆ.ಭಾಮಿ ಅತುಲ್ ಶೆಣೈ


ಪುತ್ತೂರು: ದೇಶಕ್ಕಾಗಿ ಹೋರಾಡುವ ಪ್ರತಿಯೊಬ್ಬ ವ್ಯಕ್ತಿಯು ಯೋಧನೇ ಆಗಿರುವನು. ನಮ್ಮ ಗಡಿಯನ್ನು ಕಾಯುವ ಯೋಧನಿಲ್ಲದೆ ಬದುಕನ್ನು ಊಹಿಸುವುದು ಅಸಾಧ್ಯವಾಗಿದೆ ಎಂದು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಎನ್ ಸಿ ಸಿ ಅಧಿಕಾರಿ, ವಾಣಿಜ್ಯ ವಿಭಾಗದ ಉಪನ್ಯಾಸಕ ಲೆ. ಭಾಮಿ ಅತುಲ್ ಶೆಣೈ ಹೇಳಿದರು.


ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ತೃತೀಯ ಬಿ.ಎ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಆಯೋಜಿಸುವ ಮಣಿಕರ್ಣಿಕ ಮಾತುಗಾರ ವೇದಿಕೆಯಲ್ಲಿ 'ಜೈ ಜವಾನ್' ಎಂಬ ವಿಷಯದ ಕುರಿತು ಬುಧವಾರ ಅವರು ಮಾತನಾಡಿದರು.


ಯೋಧರು ನೋಡಲು ಸಿಕ್ಕಾ ಸಂದರ್ಭದಲ್ಲಿ ಸೆಲ್ಯೂಟ್ ನೀಡುವುದಕ್ಕಿಂತ ಅವರೊಂದಿಗೆ ಮಾತನಾಡಿ ಅವರಿಗೆ ಸಂತೋಷವಾಗುತ್ತದೆ. ಆವರ ಮುಖದಲ್ಲಿರುವ ನಗುವಿಗೆ ನಾವು ಕಾರಣೀಕರ್ತರಾಗುತ್ತೇವೆ. ಅದು ಹೆಚ್ಚಿನ ಗೌರವವನ್ನು ತೋರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.


ಕಾರ್ಯಕ್ರಮದ ಸಂಯೋಜಕಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯ ಪಿ. ಆರ್. ನಿಡ್ಪಳ್ಳಿ ಮಾತನಾಡಿ, ಮಿಲಿಟರಿಯಿಂದ ನಿವೃತ್ತಿ ಪಡೆದಿರುವ ವ್ಯಕ್ತಿಗಳ ಸಂದರ್ಶನ ಮಾಡಬೇಕು. ಅವರ ಸಾಧನೆಗಳನ್ನು ಜನರಿಗೆ ತಿಳಿಸಬೇಕು. ಎಲ್ಲರಲ್ಲೂ ದೇಶ ಸೇವೆ ಮಾಡುವ ಮನಸ್ಸು ಮೂಡಬೇಕು. ಹಾಗೆಯೇ ತಾನೊಬ್ಬ ಯೋಧ ಎನಿಸಿಕೊಳ್ಳುವ ಹೆಮ್ಮೆ ಮತ್ತೆಲ್ಲೂ ಸಿಗದು ಎಂದು ನುಡಿದರು.


ವೇದಿಕೆಯಲ್ಲಿ ಕಾರ್ಯಕ್ರಮದ ಕಾರ್ಯದರ್ಶಿ ಸಂದೀಪ್ ಮಂಚಿಕಟ್ಟೆ ಉಪಸ್ಥಿತರಿದ್ದರು. "ಜೈ ಜವಾನ್" ಎಂಬ ವಿಷಯದ ಕುರಿತು ಪತ್ರಿಕೋದ್ಯಮ ವಿದ್ಯಾರ್ಥಿಗಳು ಅನಿಸಿಕೆ ಹಂಚಿಕೊಂಡರು. ದ್ವಿತೀಯ ಪತ್ರಿಕೋದ್ಯಮ ವಿದ್ಯಾರ್ಥಿ ಕಾರ್ತಿಕ್ ಪೈ 'ವಾರದ ಉತ್ತಮ ಮಾತುಗಾರ' ಹಾಗೂ ಪ್ರಥಮ ಬಿಎ ವಿದ್ಯಾರ್ಥಿಗಳು 'ವಾರದ ಉತ್ತಮ ಮಾತುಗಾರರ ತಂಡ'ವಾಗಿ ಬಹುಮಾನವನ್ನು ಪಡೆದುಕೊಂಡರು.


ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ ಧನ್ಯ ಸ್ವಾಗತಿಸಿ, ಆಶಾ ಮಯ್ಯ ವಂದಿಸಿದರು. ಮಾನಸ ಕುಂಬಡ್ಕ ಕಾರ್ಯಕ್ರಮ ನಿರೂಪಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top