ರಾಯಪುರ: ಮಹಾತ್ಮಗಾಂಧಿ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ ಮತ್ತು ಅವರ ಹತ್ಯೆಗೆ ಕಾರಣವಾದ ನಾಥುರಾಮ್ ಗೋಡ್ಸೆಯನ್ನು ಹೊಗಳಿದ ಕಾರಣ ರಾಯಪುರ ಪೊಲೀಸರು ಕಾಳಿಚರಣ್ ಮಹಾರಾಜ್ ಅವರನ್ನು ಬಂಧಿಸಿದ್ದಾರೆ.
ಛತ್ತೀಸ್ ಗಢದಲ್ಲಿ ಡಿಸೆಂಬರ್ 26 ರಂದು ನಡೆದ ಧರ್ಮ ಸಂಸದ್ ನಲ್ಲಿ ಗಾಂಧೀಜಿ ಅವರನ್ನು ಹತ್ಯೆ ಮಾಡಿದ ನಾಥೂರಾಂ ಗೋಡ್ಸೆ ಅವರನ್ನು ಹೊಗಳುವಾಗ ಗಾಂಧೀಜಿಯನ್ನು ಕಾಳಿಚರಣ್ ನಿಂದಿಸಿದ್ದರು. ಆದ್ದರಿಂದ ಅವರನ್ನು ಖುಜುರಾಹೋದಲ್ಲಿ ಬಂಧಿಸಲಾಗಿದೆ.
ನೌಪದ್ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿರುವ ಮಹಾರಾಷ್ಟ್ರದ ಸಚಿವ ಜಿತೇಂದ್ರ ಅವಧ್, ರಾಷ್ಟ್ರಪಿತ ಗಾಂಧೀಜಿ ವಿರುದ್ಧ ಕಾಳಿಚರಣ್ ನೀಡಿರುವ ಹೇಳಿಕೆ ಅಸಮಂಜಸವಾದದ್ದು ಎಂದು ಹೇಳಿದ್ದಾರೆ.