||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅನುಭವಗಳು ಜೀವನ ಪಾಠ ಕಲಿಸುತ್ತದೆ: ರಕ್ಷಿತ್ ವಿ

ಅನುಭವಗಳು ಜೀವನ ಪಾಠ ಕಲಿಸುತ್ತದೆ: ರಕ್ಷಿತ್ ವಿ

 


ಪುತ್ತೂರು ಡಿ.21: ರೇಂಜರ್ಸ್ ರೋವರ್ಸ್ ಕ್ಯಾಂಪ್‌ಗಳಲ್ಲಿನ ಸಿಗುವ ಅನುಭವ ಸಮಾಜದಲ್ಲಿ ನಾವು ಹೇಗೆ ಇರಬೇಕು ಎಂಬುವುದನ್ನು ಕಲಿಸುತ್ತದೆ. ನಾವು ಸಕ್ರಿಯವಾಗಿ ಭಾಗವಹಿಸಿದರೆ ಮಾತ್ರ ಇದರ ಅನುಭವಗಳು ಮತ್ತು ಲಾಭಗಳು ದೊರೆಯುವುದು. ಗುರುಗಳು ನಮಗೆ ನೀಡುವ ಸಲಹೆಯನ್ನು ಪಡೆದುಕೊಂಡು ಮುಂದಿನ ಹೆಜ್ಜೆಗಳನ್ನು ನಾವೇ ಇಡಬೇಕು ಎಂದು ರಾಷ್ಟ್ರಪತಿ ಪುರಸ್ಕಾರ ವಿಜೇತ ರೋವರ್, ಸುಬ್ರಹ್ಮಣ್ಯದ ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್‌ನ ಅಧಿಕಾರಿ, ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯ ರೋವರ್ಸ್ ರೇಂಜರ್ಸ್ ಘಟಕದ ಹಿರಿಯ ವಿದ್ಯಾರ್ಥಿ ರಕ್ಷಿತ್ ವಿ. ಹೇಳಿದರು.


ಇವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ರೋವರ್ಸ್ ಮತ್ತು ರೇಂಜರ್ಸ್ ಘಟಕದಿಂದ ಆಯೋಜಿಸಲಾದ ಘಟಕದ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಮಂಗಳವಾರ ಮಾತನಾಡಿದರು.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ರೋವರ್ಸ್ ಮತ್ತು ರೇಂಜರ್ಸ್ ನಂತಹ ಸಂಘಗಳಿಗೆ ಸೇರಿದಾಗ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯಾಗುವುದು. ಸೇವೆಯೆ ನಮ್ಮ ಗುರಿ. ಸೇವೆ ಮಾಡುವಾಗ ಶಿಸ್ತಿನಿಂದ ಶ್ರದ್ಧೆಯಿಂದ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.


ಹಿರಿಯ ವಿದ್ಯಾರ್ಥಿಗಳು 3 ವರ್ಷದಿಂದ ಕಲಿತ ಸಂಸ್ಥೆಯ ನೆನಪಿಗಾಗಿ ಸೂಚನ ಫಲಕವನ್ನು ನೀಡಿದರು. ಕೋಲಾರದ ರಾಷ್ಟ್ರೀಯ ಭಾವೈಕ್ಯ ಸ್ವಚ್ಛತಾ ಶಿಬಿರದಲ್ಲಿ ಭಾಗವಹಿಸಿದ ಸೌರಬ್, ನಿತಿನ್ ಕುಮಾರ್, ಆಶ್ರಯ್, ಹರ್ಷಿತ್ ಪಿ ಎಸ್ ಇವರಿಗೆ ಪ್ರಶಸ್ತಿಯನ್ನು ನೀಡಲಾಯಿತು.


ಕಾರ್ಯಕ್ರಮದಲ್ಲಿ ರೋವರ್ ಸ್ಕೌಟ್ ನಾಯಕ ಹಾಗೂ ವಾಣಿಜ್ಯ ವಿಭಾಗದ ಉಪನ್ಯಾಸಕ ಪುನೀತ್ ಮತ್ತು ರೇಂಜರ್ ನಾಯಕಿ ಹಾಗೂ ಪ್ರಾಣಿಶಾಸ್ತ್ರ ವಿಭಾಗದ ಉಪನ್ಯಾಸಕಿ ದಿವ್ಯಶ್ರೀ ಜಿ. ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರೋವರ್ ಸ್ಕೌಟ್ ನಾಯಕ ಹಾಗೂ ಪ್ರಾಣಿಶಾಸ್ರ‍್ತ ವಿಭಾಗದ ಮುಖ್ಯಸ್ಥ ಡಾ.ಈಶ್ವರ್ ಪ್ರಸಾದ್ ಸ್ವಾಗತಿಸಿ, ರೇಂಜರ್ ನಾಯಕಿ ಹಾಗೂ ವ್ಯವಹಾರ ಆಡಳಿತ ವಿಭಾಗದ ಉಪನ್ಯಾಸಕಿ ದೀಪಿಕಾ ಎಸ್ ವಂದಿಸಿದರು. ದ್ವಿತೀಯ ಬಿಎಸ್ಸಿ ವಿದ್ಯಾರ್ಥಿ ಅಪೇಕ್ಷ ಮತ್ತು ವೈಭವಿ ಕಾರ್ಯಕ್ರಮವನ್ನು ನಿರೂಪಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post