ವಿವೇಕಾನಂದ ಕಾಲೇಜಿನಲ್ಲಿ ನೇಚರ್ ಕ್ಲಬ್‌ನ ವಾರ್ಷಿಕ ಚಟುವಟಿಕೆಗಳಿಗೆ ಚಾಲನೆ

Upayuktha
0

 

ಪುತ್ತೂರು: ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ನೇಚರ್ ಕ್ಲಬ್‌ನ 2021-22 ನೇ ಶೈಕ್ಷಣಿಕ ವರ್ಷದ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಲಾಯಿತು.


ವಿಶ್ವ ಪರ್ವತಗಳ ದಿನದಂದು ನೇಚರ್ ಕ್ಲಬ್‌ನ ವಾರ್ಷಿಕ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದ ನಿಸರ್ಗಶಾಸ್ತ್ರಜ್ಞ ಮತ್ತು ವನ್ಯಜೀವಿ ಛಾಯಾಗ್ರಾಹಕ ಅರವಿಂದ ಕುಡ್ಲ, ಪ್ರಕೃತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವಲ್ಲಿ ಅವಲೋಕನದ ಮಹತ್ವವನ್ನು ತಿಳಿಸಿ, ಕೋವಿಡ್ ನಿರ್ಬಂಧದ ದಿನಗಳಲ್ಲಿ ಪಕ್ಷಿ ವೀಕ್ಷಣೆಯಲ್ಲಿ ತೊಡಗಿಸಿಕೊಂಡ ತಮ್ಮ ಅನುಭವಗಳನ್ನು ಹಂಚಿಕೊಂಡರು.


ಕಾಲೇಜು ಆಡಳಿತ ಮಂಡಳಿ ಸದಸ್ಯರಾದ ಶಂಕರ್ ಜೋಯಿಸ ಎರ್ಮುಂಜ ಅವರು 2020-21 ನೇ ಸಾಲಿನ ನೇಚರ್ ಕ್ಲಬ್ ಚಟುವಟಿಕೆ ವರದಿಯನ್ನು ಬಿಡುಗಡೆ ಮಾಡಿದರು ಮತ್ತು ಜೀವ ವೈವಿಧ್ಯತೆ ಮತ್ತು ಪರಿಸರ ಮಾಲಿನ್ಯದ ಬಗ್ಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.


ಕಾಲೇಜು ಪ್ರಾಂಶುಪಾಲರಾದ ಪ್ರೊ.ವಿಷ್ಣುಗಣಪತಿ ಭಟ್ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಕಲಿಕೆಯೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಮತ್ತು ಇದು ಅವರ ಸರ್ವಾಂಗೀಣ ಪ್ರಗತಿಗೆ ಸಹಕಾರಿಯಾಗುತ್ತದೆ ಎಂದು ನುಡಿದರು.


ನೇಚರ್ ಕ್ಲಬ್‌ನ ಸಂಚಾಲಕಿ ಡಾ. ಸ್ಮಿತಾ ಪಿ. ಜಿ. ಅವರು ಕ್ಲಬ್‌ನ ಚಟುವಟಿಕೆಗಳಿಗೆ ನೂತನ ವಿದ್ಯಾರ್ಥಿಗಳಿಗೆ ಪರಿಚಯಿಸಿದರು. ಈ ಸಂದರ್ಭದಲ್ಲಿ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಶ್ರೀಕೃಷ್ಣ ಗಣರಾಜ ಭಟ್, ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು. ಈ ಶೈಕ್ಷಣಿಕ ಸಾಲಿನ ನೇಚರ್ ಕ್ಲಬ್ ಅಧ್ಯಕ್ಷರಾಗಿ ಸುಶ್ಮಿತಾ ಭಾರಧ್ವಾಜ್, ಕಾರ್ಯದರ್ಶಿಯಾಗಿ ಅನುಷಾ ಪಿ., ಜತೆಕಾರ್ಯದರ್ಶಿಯಾಗಿ ಶ್ರೀರಾಮ ಭಟ್ ಆಯ್ಕೆಯಾದರು.


ಪ್ರತೀಕ್ಷಾ ಬಿ ಪಿ (I BZC) ಪ್ರಾರ್ಥಿಸಿದರು. ಸುಶ್ಮಿತಾ ಭಾರಧ್ವಾಜ್ (III BZC) ಸ್ವಾಗತಿಸಿ, ಸ್ವಾತಿ ಕೆ (II BZC) ವಂದಿಸಿದರು. ನಿಶಿತಾ ಪ್ರಕಾಶ್ (III BZC) ಕಾರ್ಯಕ್ರಮ ನಿರೂಪಿಸಿದರು.


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top