ಒಂದು ಸಾವಿರ ಎಕರೆ ಅರಣ್ಯ ದತ್ತು ಪಡೆದ ತೆಲುಗು ನಟ ನಾಗಾರ್ಜುನ

Arpitha
0
ಹೈದರಾಬಾದ್: ತೆಲುಗು ಚಿತ್ರರಂಗದ ಜನಪ್ರಿಯ ನಟ ನಾಗಾರ್ಜುನ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುತ್ತಾರೆ. ಇದೀಗ ಅವರು 1 ಸಾವಿರ ಎಕರೆ ಅರಣ್ಯ ಪ್ರದೇಶವನ್ನು ದತ್ತು ಪಡೆದು ಅದರ ಪ್ರಗತಿಗೆ ಮುಂದಾಗಿದ್ದಾರೆ.

ಇವರ ಈ ಕಾರ್ಯಕ್ಕೆ ಪ್ರೇರಣೆಯಾದದ್ದು ರಾಜ್ಯಸಭಾ ಸದಸ್ಯ ಸಂತೋಷ್ ಕುಮಾರ್ ಜೋಗಿನಪಲ್ಲಿ. ಇವರು ಗಿಡ ಬೆಳೆಸಿ ಕಾಡು ಉಳಿಸಿ ಎನ್ನುತ್ತ ಗ್ರೀನ್ ಇಂಡಿಯಾ ಚಾಲೆಂಜ್ ಆಯೋಜಿಸಿ ಖ್ಯಾತಿ ಪಡೆದಿದ್ದಾರೆ. ಇವರು ಇತ್ತೀಚೆಗೆ ಬಿಗ್ ಬಾಸ್ ಗೆ ಆಗಮಿಸಿದ್ದರು. ಆ ವೇಳೆ ನಟ ನಾಗಾರ್ಜುನ ಒಂದು ಸಾವಿರ ಎಕರೆ ಅರಣ್ಯವನ್ನು ದತ್ತು ಪಡೆಯುವುದಾಗಿ ಘೋಷಿಸಿದರು.

ಅದಕ್ಕೆ ಅಗತ್ಯವಿರುವ ವ್ಯವಸ್ಥೆಗಳನ್ನು ಮಾಡಿಕೊಡುವಂತೆ ಎಂ ಪಿ ಸಂತೋಷ್ ಕುಮಾರ್ ಅವರಲ್ಲಿ ನಾಗಾರ್ಜುನ ಮನವಿ ಮಾಡಿಕೊಂಡರು. 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top