ಹಚ್ಚಬೇಕು ಸ೦ಜೆಯ ವೇಳೆಗೆ ದೇವರ ಕೋಣೆಯ ದೀಪ!
ದೂರವಾಗಿ ಹೋಗುವುದಾಗ ನೀನು ಮಾಡಿದ ಎಲ್ಲ ಪಾಪ!!
ಸ್ವಚ್ಛಕೈಯಲಿ ಆರತಿ ಎತ್ತು ಬಿಚ್ಚು ಮನಸಿನಲೀ!
ದೇವರೆ ಬ೦ದು ಹರಸುವರಾಗ ನಿನಗೆ ಕನಸಿನಲೀ!!
*****
ಬ೦ಗಾಳಕೊಲ್ಲಿ ಅರಬೀಸಮುದ್ರ!
ತ೦ದೊಡ್ಡುತ್ತಿವೆ ಮಾನವ ಕುಲಕ್ಕೆ ದರಿದ್ರ!!
ಮಳೆ ನೀರೇ ಇಲ್ಲ ಬೇಕೆನಿಸಿದಾಗ!
ಬ೦ದ ಮಳೆ ನಿಲ್ಲುವುದೇ ಇಲ್ಲ ಸಾಕೆನಿಸಿದಾಗ!!
*******
ಎಲ್ಲೊ ಏನೋ ಏಕೋ ಆಕಾಶ ತೂತಾಗಿದೆ!
ಇಳೆಯ ಮೇಲೆ ಮಳೆಯ ನೀರು ಸುರಿದು ಸುರಿದು ಸಾಕಾಗಿದೆ!!
ಮಾನವ ಬೆಳೆದ ಬೆಳೆಗೆ ಒಣಗಲು ಬಿಸಿಲು ಬೇಕಾಗಿದೆ!
ಕಾರ್ಮುಗಿಲ ಸೆರೆಯಲ್ಲಿ ರವಿಯಾಟ ಸೋತಹಾಗಿದೆ!!
-ನಾರಾಯಣ ನಾಯ್ಕ ಕುದುಕೋಳಿ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ