ವೀರ ರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ: ಪ್ರಶಸ್ತಿಗೆ ಅರ್ಜಿ ಆಹ್ವಾನ

Upayuktha
0

ಮಂಗಳೂರು: ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಉಳ್ಳಾಲ ವೀರರಾಣಿ ಅಬ್ಬಕ್ಕನ ಕುರಿತು ರಾಷ್ಟ್ರ ಜಾಗೃತಿ ಮೂಡಿಸುವ ಸಲುವಾಗಿ 2018ರಲ್ಲಿ ಸ್ಥಾಪನೆಯಾಗಿರುವ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದಿಂದ 'ನಮ್ಮ ಅಬ್ಬಕ್ಕ 2022' ಅಮೃತ ಸ್ವಾತಂತ್ರ್ಯ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ 2022 ಫೆಬ್ರವರಿ 5 - 6 ರಂದು ಮಂಗಳೂರಿನಲ್ಲಿ ಜರಗಲಿದೆ. ಈ ಸಂದರ್ಭ ನೀಡಲಾಗುವ 2 ಮಹತ್ವದ ಪ್ರಶಸ್ತಿಗಳಿಗೆ ಸಾಧಕರಿಂದ ಅಥವಾ ಪರಿಚಿತರಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ.


ರಾಣಿ ಅಬ್ಬಕ್ಕ ಸೇವಾ ಪ್ರಶಸ್ತಿ:


ಶಿಕ್ಷಣ, ಸಾಹಿತ್ಯ, ಸಂಸ್ಕೃತಿ,ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವಾ ಕಾರ್ಯದಿಂದ ಗುರುತಿಸಿಕೊಂಡಿರುವ 60 ವರ್ಷ ಮೇಲ್ಪಟ್ಟ ಮಹಿಳೆ / ಪುರುಷ ಸಾಧಕರೊಬ್ಬರಿಗೆ 'ರಾಣಿ ಅಬ್ಬಕ್ಕ ಸೇವಾ ಪುರಸ್ಕಾರ - 2022' ಮೀಸಲಾಗಿದೆ.


'ನಮ್ಮ ಅಬ್ಬಕ್ಕ' ಅಮೃತ ಸ್ವಾತಂತ್ರ್ಯ ಗೌರವ ಪ್ರಶಸ್ತಿ:


ಪ್ರಸ್ತುತ ವರ್ಷ ರಾಷ್ಟ್ರಾದ್ಯಂತ ಆಚರಿಸಲ್ಪಡುವ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಲುವಾಗಿ ವಿವಿಧ ರಂಗಗಳ ಜೀವಮಾನ ಸಾಧನೆಗಾಗಿ ಓರ್ವರಿಗೆ 'ನಮ್ಮ ಅಬ್ಬಕ್ಕ' ಅಮೃತ ಸ್ವಾತಂತ್ರ್ಯ ಗೌರವ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಅಂತಹ ಸಾಧಕರ ಬಗ್ಗೆ ಸೂಕ್ತ ದಾಖಲೆಗಳನ್ನು  ಸ್ವತಃ ಅಥವಾ ಸಾರ್ವಜನಿಕರು ಸಲ್ಲಿಸಬಹುದು. ವಿವರಗಳನ್ನು ಕೆಳಗಿನ ವಿಳಾಸಕ್ಕೆ ದಿನಾಂಕ 15.01. 2022 ರ ಮೊದಲು ತಲಪಿಸಲು ಕೋರಲಾಗಿದೆ.


ವಿಳಾಸ: ಭಾಸ್ಕರ ರೈ ಕುಕ್ಕುವಳ್ಳಿ, ಪ್ರಧಾನ ಕಾರ್ಯದರ್ಶಿ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ 'ವಿದ್ಯಾ' ಕದ್ರಿಕಂಬಳ, ಬಿಜೈ ಅಂಚೆ, ಮಂಗಳೂರು - 575004 (e-mail: kukkuvallibr@gmail.com )


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top