ಉಜಿರೆ: ಎಸ್.ಡಿ.ಎಂ ಪದವಿ ಮಹಾವಿದ್ಯಾಯಲಯಕ್ಕೆ 1991 ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ತಂಡ ಭೇಟಿ ನೀಡಿ ಪ್ರಾಂಶುಪಾಲರ ಮತ್ತು ಪ್ರಾಧ್ಯಾಪಕರೊಂದಿಗೆ ಸಂವಾದ ನಡೆಸಿತು.
ಈ ಸಂದರ್ಭದಲ್ಲಿ 12 ಜನ ಹಳೆಯ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ಸತೀಶ್ಚಂದ್ರ ಅವರು ಬಹುಕಾಲದ ಬಳಿಕದ ಈ ಭೇಟಿ ಸಂತಸ ತಂದಿದೆ ಎಂದರು.
ವೃತ್ತಿಜೀವನದಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳು ಪ್ರಸ್ತುತ ಕಲಿಕೆಯಲ್ಲಿ ಇರುವ ವಿದ್ಯಾರ್ಥಿಗಳ ನಡುವೆ ಸಾಮರಸ್ಯದ ಸಂಬಂಧ ಬೆಸೆಯುವುದು ಬಹಳ ಮುಖ್ಯ. ಮತ್ತಷ್ಟು ಹಳೆ ವಿದ್ಯಾರ್ಥಿಗಳು ಸಮಯ ಹೊಂದಿಸಿಕೊಂಡು ಸಂಸ್ಥೆಗೆ ಬಂದು ಸಂಸ್ಥೆಯ ಪ್ರಗತಿಗೆ ಬೇಕಾದ ಸಲಹೆಗಳನ್ನು ನೀಡಬೇಕು. ಕಾಲೇಜಿನೊಂದಿಗಿನ ನಂಟು ಗಟ್ಟಿಗೊಳ್ಳುವುದರ ಜೊತೆಗೆ ಸಂಸ್ಥೆಯ ಬೆಳವಣಿಗೆಯೂ ಸಾಧ್ಯವಾಗುತ್ತದೆ ಹಳೆವಿದ್ಯಾರ್ಥಿ ಸಮೂಹಕ್ಕೆ ಎಸ್.ಡಿ.ಎಂ. ಸಂಸ್ಥೆ ಎಂದಿಗೂ ಆಸರೆಯಾಗಿರುತ್ತದೆ ಎಂದು ತಮ್ಮ ಹರ್ಷವನ್ನು ಹಂಚಿಕೊಂಡರು.
ವಿದ್ಯಾದಾನ ಮಾಡಿರುವಂತಹ ನೆಚ್ಚಿನ ಪ್ರಾಧ್ಯಾಪಕರನ್ನು ಭೇಟಿಯಾಗಿ ಹಳೆಯ ದಿನಗಳನ್ನು ನೆನಪಿಸಿಕೊಂಡರು. ತಾವು ಓಡಾಡಿದ ಜಾಗದಲ್ಲಿ ಕಾಲೇಜಿನ ನೆನಪುಗಳನ್ನು ಮತ್ತೆ ಮೆಲುಕು ಹಾಕಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಮೇ 1ರಂದು ಆಚರಿಸಲಿರುವಂತಹ ಹಳೆವಿದ್ಯಾರ್ಥಿಗಳ ದಿನಾಚರಣೆಗೆ ಪ್ರಾಂಶುಪಾಲರು ಎಲ್ಲರನ್ನು ಆಹ್ವಾನಿಸಿದರು. ಹಳೆವಿದ್ಯಾರ್ಥಿ ಸಂಘವನ್ನು ಮತ್ತಷ್ಟು ಸಧೃಡಗೊಳಿಸುವ ಆಶಾಭಾವನೆ ವ್ಯಕ್ತವಾಯಿತು. ಹಳೆ ವಿದ್ಯಾರ್ಥಿಗಳ ಪ್ರೀತಿ ಹಾಗೂ ಕಲಿತ ಸಂಸ್ಥೆಯ ಮೇಲಿನ ಗೌರವದಿಂದಾಗಿ ಸಂಸ್ಥೆ ಮತ್ತಷ್ಟು ಖುಷಿಪಟ್ಟಿತು. ವಿದ್ಯಾರ್ಥಿಗಳ ಸಾಮರಸ್ಯ ಸಂಸ್ಥೆಯ ಮೇಲಿರುವ ಪ್ರೀತಿಗೆ ಈ ಭೇಟಿ ಸಾಕ್ಷಿಯಾಯಿತು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ