ಜ.14, ಮಕರ ಸಂಕ್ರಮಣದ ದಿನ ಬಾಲ ಭಾಗವತ ಅನೀಶ್ ಬಳ್ಳಂಬೆಟ್ಟು ರಂಗಪ್ರವೇಶ

Upayuktha
0


ಬದಿಯಡ್ಕ: ಬಾಲ ಭಾಗವತ ಅನೀಶ್ ಬಳ್ಳಂಬೆಟ್ಟು ಇವರ ರಂಗಪ್ರವೇಶ ಕಾರ್ಯಕ್ರಮವು ಜನವರಿ 14ರಂದು ಶುಕ್ರವಾರ ಬಳ್ಳಂಬೆಟ್ಟು ಶ್ರೀಪರಿವಾರ ಸಹಿತ ಶಾಸ್ತಾರ ದೇವಸ್ಥಾನದ ಮಕರ ಸಂಕ್ರಮಣ ಉತ್ಸವದ ಸಂದರ್ಭದಲ್ಲಿ ನಡೆಯಲಿದೆ.


ಡಾ. ಸತೀಶ ಪುಣಿಂಚತ್ತಾಯ ಪೆರ್ಲ ಅವರ ಶಿಷ್ಯನಾಗಿ ಯಕ್ಷಗಾನ ಭಾಗವತಿಕೆ ಅಭ್ಯಾಸ ಮಾಡುತ್ತಿರುವ 7ನೇ ತರಗತಿಯ ವಿದ್ಯಾರ್ಥಿ ಅನೀಶ್ ಬಳ್ಳಂಬೆಟ್ಟು ನಡೆಸಿಕೊಡುವ ತೆಂಕುತಿಟ್ಟಿನ ಯಕ್ಷಗಾನ ಭಾಗವತಿಕೆಯೊಂದಿಗೆ ಅಪರಾಹ್ನ 2:30ಕ್ಕೆ ಈ ರಂಗಪ್ರವೇಶ ಕಾರ್ಯಕ್ರಮ ನೆರವೇರಲಿದೆ.


ಯಕ್ಷಾಂತರಂಗ ಪೆರ್ಲ ಈ ಕಾರ್ಯಕ್ರಮ ಆಯೋಜಿಸಿದ್ದು, ಇದೇ ಸಂದರ್ಭದಲ್ಲಿ ಡಾ. ಸತೀಶ್ ಪುಣಿಂಚತ್ತಾಯ ಅವರಿಗೆ ಗುರುವಂದನೆ ಜರಗಲಿದೆ. ಬಳಿಕ 3 ಗಂಟೆಗೆ ಯಕ್ಷಗಾನ ತಾಳಮದ್ದಳೆ 'ಸಮರ ಸೌಗಂಧಿಕಾ'  ನಡೆಯಲಿದೆ.


ಅನೀಶ್ ಬಳ್ಳಂಬೆಟ್ಟು ಬದಿಯಡ್ಕದ ಶ್ರೀ ಭಾರತೀ ವಿದ್ಯಾಪೀಠದಲ್ಲಿ 7ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಯುವ ಪ್ರಸಂಗಕರ್ತ ಕೃಷ್ಣಪ್ರಕಾಶ ಬಳ್ಳಂಬೆಟ್ಟು ಮತ್ತು ವಸಂತಲಕ್ಷ್ಮಿ ದಂಪತಿಗಳ ಪುತ್ರ.


ಕೃಷ್ಣಪ್ರಕಾಶ ಬಳ್ಳಂಬೆಟ್ಟು ಅವರು ಬದಿಯಡ್ಕದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್ಸ್‌ ಉಪಕರಣಗಳ ಮಳಿಗೆಯನ್ನು ಹೊಂದಿದ್ದು, ಯಕ್ಷಗಾನ ಪ್ರಸಂಗಕರ್ತರಾಗಿ ಈ ವರೆಗೆ ತುಳು-ಕನ್ನಡ ಸೇರಿದಂತೆ 11 ಕೃತಿಗಳನ್ನು ರಚಿಸಿದ್ದಾರೆ. ಮಧುರ ಮದಾರೆ (ತುಳು), ಕಾಂಚನ ಕಾಮಾಕ್ಷಿ(ತುಳು), ಬಳ್ಳಂಬೆಟ್ಟು ಕ್ಷೇತ್ರ ಮಹಾತ್ಮೆ (ಕನ್ನಡ), ಸಿಂಧೂರ ಮಂದಾರೆ (ತುಳು), ಕಾನದ ಕಾಂತಿ (ತುಳು), ವಿಷಮ ವಿಪ್ಲವ (ಕನ್ನಡ), ಭಾರತ ದರ್ಶನ (ಕನ್ನಡ), ಶೃಂಗಾರ ಕೋಗಿಲೆ (ಕನ್ನಡ-ತುಳು), ಪಾರ್ವತಿ ಶಿವ ಪಾರ್ವತಿ (ಕನ್ನಡ- ತುಳು), ಮಾಂಗಲ್ಯ ಭಾಗ್ಯ (ತುಳು), ಕಾರ್ತಿಕ ದೀಪ- ಇವರ ಯಕ್ಷಗಾನ ಕೃತಿಗಳು.


ಕದ್ರಿ ಮೇಳ, ಕುಂಟಾರು ಮೇಳ, ಸಾಲಿಗ್ರಾಮ ಮೇಳ, ಮಂದಾರ್ತಿ ಮೇಳ ಮತ್ತು ಹಿರಿಯಡಕ ಮೇಳ ಸೇರಿದಂತೆ ಹಲವು ಮೇಳಗಳು ಈ ಕೃತಿಗಳನ್ನು ರಂಗದಲ್ಲಿ ಪ್ರದರ್ಶಿಸಿವೆ.


ಕೃಷ್ಣ ಪ್ರಕಾಶ ಬಳ್ಳಂಬೆಟ್ಟು ಅವರು ಕರ್ನಾಟಕ ಜಾನಪದ ಲೋಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.  ಅಲ್ಲದೆ ಹಲವು ವೇದಿಕೆಗಳಲ್ಲಿ ಗೌರವ-ಸಮ್ಮಾನಗಳನ್ನು ಪಡೆದಿದ್ದಾರೆ. ಇವರು ಕುಂಬಳೆ ಸೀಮೆಯ ಪೆರಡಾಲ ಗ್ರಾಮದ ಗುರಿಕಾರ ಮನೆತನದವರು. ನಿವೃತ್ತ ಅಧ್ಯಾಪಕ ಬಳ್ಳಂಬೆಟ್ಟು ಈಶ್ವರ ಭಟ್ ಮತ್ತು ಶಂಕರಿ ಭಟ್ ಅವರ ಪುತ್ರ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top