ಹೊಸ ಹುರುಪಿಗೇಕೆ ಹೊಸ ವರುಷ ??

Arpitha
0

ಕಾಲಚಕ್ರ  ತಿರುಗುತ್ತಿರುತ್ತದೆ,  ಜೀವನ ಶೈಲಿ ಬದಲಾಗುತ್ತಿರುತ್ತದೆ. ಒಬ್ಬ ವ್ಯಕ್ತಿ ಅದೆಷ್ಟೇ ಶ್ರೀಮಂತನಾದರೂ ಓಡುತ್ತಿರುವ ಸಮಯವನ್ನು ಬಂಧಿಸಿದ ನಿದರ್ಶನ ಇದೆಯೇ? ಖಂಡಿತವಾಗಿಯೂ ಇಲ್ಲ. ಬದುಕು ಸಾಗುತ್ತಿದ್ದಂತೆ ಮನುಷ್ಯ ಎಂದುಕೊಂಡವನ ಜೀವನ ಶೈಲಿ ಏರುಪೇರಾಗುತ್ತಿರುತ್ತದೆ.

ವರ್ಷ ಬದಲಾಗುತ್ತಿರುವಾಗ ಅನೇಕ ಹೊಸ ಯೋಚನೆಗಳು, ರೆಕ್ಕೆ ಬಿಚ್ಚುವ ಕನಸುಗಳು, ಆಸೆ- ಆಕಾಂಕ್ಷೆಗಳು ದುಪ್ಪಟ್ಟಾಗುತ್ತಾ ಹೋಗುತ್ತದೆ. ಆದರೆ ಇಲ್ಲಿ ಮುಖ್ಯವಾಗುವುದು ಅದಲ್ಲ. ಸೃಷ್ಠಿಸಿಟ್ಟ ಗುರಿಗೆ , ರಚಿಸಿಕೊಂಡ ಆಸೆಗಳಿಗೆ ಒತ್ತು ಕೊಟ್ಟು ಶ್ರಮ ವಹಿಸಿ ನಾವೆಷ್ಟು ದುಡಿದಿದ್ದೇವೆ ಎಂಬುವುದು. ಒಂದು ವೇಳೆ ಇದ್ಯಾವುದೂ ಆಗದಿದ್ದಲ್ಲಿ ಹೊಸ ವರ್ಷದ ಹೊಸ ಕನಸಿಗೆ ಅರ್ಥವೆಲ್ಲಿದೆ.? ಕಾಲ ಹೋದಂತೆ 'ಹೊಸ' ಎನ್ನುವುದೂ ಹಳೆಯದಾಗುತ್ತದೆ ಅಲ್ಲವೇ...? ಅದರಂತೆ ನಮ್ಮ ಧ್ಯೇಯಗಳು ಆ ರೂಪ ಪಡೆದುಕೊಂಡರೆ ನಮ್ಮ ಕನಸೆಂಬುವುದು ಅನಿಶ್ಚಿತವೇ?

ಅದಕ್ಕೆ ಹೊಸ ಉತ್ಸಾಹಕ್ಕೆ ಹೊಸ ವರ್ಷದ ಅಗತ್ಯವಿಲ್ಲ ಅಂದದ್ದು. ಏಕೆಂದರೆ ಬದುಕು ಹರಿಯುವ ನದಿಯ ಹಾಗೆ. ಮಧ್ಯ ಸಿಕ್ಕ ಕಸಗಳನ್ನು ನೂಕಿ ಮುಂದಕ್ಕೆ ಹೋಗಬೇಕೇ ಹೊರತು ಹಿಂತಿರುಗಿ ನೋಡಬಾರದು. 

ಈ 2021 ರಲ್ಲಿ ಅನೇಕ ಅಹಿತಕರ ಘಟನೆಗಳನ್ನು ನೋಡಿರಬಹುದು, ನಮ್ಮವರು ಯಾರೆಂಬ ಪ್ರಶ್ನೆಗೆ ಸರಿಯಾದ ಉತ್ತರ ದೊರಕಿರಬಹುದು, ಏಳು- ಬೀಳುಗಳನ್ನು ಕಂಡಿರಬಹುದು. ಬದುಕಿಗೆ ಅರ್ಥವಿದ್ದ ಮೇಲೆ ಇವೆಲ್ಲ ಅದರ ನಾನಾ ಮಜಲುಗಳಾಗಿರಬೇಕು ಎಂದು ಊಹಿಸಬೇಕು. ಅನುಭವಕ್ಕಿಂತ ಜೀವನದಲ್ಲಿ ಬೇರೊಂದು ಶಿಕ್ಷಣ ಬೇಕೆ??

ಸಾಧಿಸುವುದು ಹಲವಾರಿದೆ. ಒಂದೇ ಲೈಫ್ ಇರೋದು. ಋಣಾತ್ಮಕ ವಿಷಯಗಳಿಂದ, ಋಣಾತ್ಮಕ ವ್ಯಕ್ತಿಗಳಿಂದ ದೂರವಿದ್ದು ಸದ್ವಿಚಾರಗಳ ಕಡೆ ಗಮನ ಹರಿಸೋಣ. ಇಲ್ಲಿ ವರ್ಷ ಮಾತ್ರ ಬದಲಾಗುತ್ತಿರುವುದು ಹೊರತು ಮತ್ತೇನಲ್ಲ. ಹೊಸ ಹುರುಪು, ನವೋತ್ಸಾಹ ನಿತ್ಯ ಮಹೋತ್ವವಾಗಿರಲಿ, ಜಂಜಾಟ, ಒತ್ತಡದ ನಡುವೆ ನಗು ಮಾತ್ರ ಕಾಣೆಯಾಗದಿರಲಿ.

ಹ್ಯಾಪಿ ನ್ಯೂ ಇಯರ್....

- ಅರ್ಪಿತಾ ಕುಂದರ್




Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top