|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಮ್ಮ ನೆಮ್ಮದಿಯ ಹಿಂದೆ ಸೈನಿಕರ ತ್ಯಾಗ, ಬಲಿದಾನವಿದೆ: ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ

ನಮ್ಮ ನೆಮ್ಮದಿಯ ಹಿಂದೆ ಸೈನಿಕರ ತ್ಯಾಗ, ಬಲಿದಾನವಿದೆ: ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ

 

ಮಂಗಳೂರು: ನಮ್ಮ ನೆಮ್ಮದಿಯ ಹಿಂದೆ ದೇಶದ ಸೈನಿಕರ ತ್ಯಾಗ, ಬಲಿದಾನವಿದೆ. 'ವಿಜಯ ದಿವಸ' ಕೇವಲ 1971 ರಲ್ಲಿ ನಡೆದ ಬಾಂಗ್ಲಾ ಯುದ್ಧದಲ್ಲಿ ಪಾಕಿಸ್ಥಾನದ ವಿರುದ್ಧ ಜಯಿಸಿದ ನೆನಪಲ್ಲ, ಬದಲಾಗಿ ನಮ್ಮ ಸೈನಿಕರಿಗೆ ಸಲ್ಲಿಸುವ ಗೌರವ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಹೇಳಿದರು.


ಗುರುವಾರ 50 ನೇ ವರ್ಷದ 'ವಿಜಯ ದಿವಸ'ದ ಸವಿನೆನಪಿಗಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಶಹೀದ್‌ ಸ್ಥಳದಲ್ಲಿರುವ ಹುತಾತ್ಮರ ಚೌಕದಲ್ಲಿ ಹುತಾತ್ಮ ಸೈನಿಕರಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು ಭಾರತೀಯರ ಪಾಲಿಗೆ ಮನುಷ್ಯತ್ವವೇ ನಂಬಿಕೆ, ಜಾತಿ ಎಲ್ಲವೂ. ನಮಗೆ ಯಾವತ್ತಿಗೂ ದೇಶವೇ ಮೊದಲು. ನಾವು ಪರಸ್ಪರ ಗೌರವದಿಂದ ಬದುಕಲು ಡಾ. ಬಿ ಆರ್‌ ಅಂಬೇಡ್ಕರ್‌, ನಾರಾಯಣ ಗುರುಗಳ ಚಿಂತನೆಗಳು ನಮಗೆ ಮಾದರಿಯಾಗಬಲ್ಲವು ಎಂದು ಅಭಿಪ್ರಾಯಪಟ್ಟರು.


ಕುಲಸಚಿವ (ಆಡಳಿತ) ಡಾ. ಕಿಶೋರ್‌ ಕುಮಾರ್‌ ಸಿಕೆ, ಕುಲಸಚಿವ (ಪರೀಕ್ಷಾಂಗ) ಡಾ. ಪಿ ಎಲ್‌ ಧರ್ಮ, ಹಣಕಾಸು ಅಧಿಕಾರಿ ಡಾ. ಬಿ ನಾರಾಯಣ, ಬೋಧಕ- ಬೋಧಕೇತರ ಸಿಬ್ಬಂದಿ, ಸಂಶೋಧನಾರ್ಥಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎಲ್ಲರೂ ಹುತಾತ್ಮರಿಗೆ ಪುಷ್ಪನಮನ ಸಲ್ಲಿಸಿದರು.


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post