ಡಾ.ಮೀರಾ ಕುಮಾರ್ ಅವರಿಗೆ ಕರ್ನಾಟಕ ಲಲಿತಕಲಾ ಅಕಾಡೆಮಿಯ ಗೌರವ ಪ್ರಶಸ್ತಿ

Upayuktha
0

 

ವಿಜಯಪುರ: ಕರ್ನಾಟಕ ಲಲಿತಕಲಾ ಅಕಾಡೆಮಿಯ 2020ನೇ ಸಾಲಿನ ಗೌರವ ಪ್ರಶಸ್ತಿಯನ್ನು ಅಂತರಾಷ್ಟ್ರೀಯ ಖ್ಯಾತಿಯ ಮೈಸೂರು ಸಾಂಪ್ರದಾಯಿಕ ಚಿತ್ರಕಲಾವಿದೆ ಬೆಂಗಳೂರಿನ ಡಾ.ಮೀರಾ ಕುಮಾರ್‌ರವರಿಗೆ ವಿಜಯಪುರದ ಕಂದಗಲ ಶ್ರೀಹನುಮಂತರಾಯ ರಂಗಮಂದಿರದಲ್ಲಿ ನೀಡಿ ಗೌರವಿಸಲಾಯಿತು.


ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೀರಾಕುಮಾರ್ ಸಂಭ್ರಮದ ವಾತಾವರಣದಲ್ಲಿ ಕಲಾವಿದರಿಗೆ ಜೀವಮಾನ ಸಾಧನೆಗಾಗಿ ನೀಡುತ್ತಿರುವ ಈ ಗೌರವ ನಿಜಕ್ಕೂ ಸಂತಸ ತಂದಿದೆ. ವಿವಿಧ ಕಲಾಪ್ರಕಾರಗಳಲ್ಲಿ ಅಹಿನಿರ್ಶೀ ಕಲಾಕೃತಿ ರಚಸಿ ಕಲಾಕೈಂಕರ‍್ಯ ಮಾಡುತ್ತಿರುವ ಕಲಾವಿದರು ಇಂದು ಸಂಕಷ್ಟದಲ್ಲಿದ್ದಾರೆ. ಕರೋನ ಅಟ್ಟಹಾಸದಿಂದ ಕಂಗಾಲಾಗಿರುವ ಈ ದಿನಗಳಲ್ಲಿ ಕಲಾವಿದರ ಬಾಳಲ್ಲಿ ನವಚೈತನ್ಯ ಮೂಡಿಸುವಂತಹ ಅನೇಕ ಜನಪರ ಯೋಜನೆಯನ್ನು ಅಕಾಡೆಮಿ ರೂಪಿಸಿದೆ.


ನಾಡಿನ ಹಿರಿಯ ಸಾಧಕ ಶ್ರೇಷ್ಠರನ್ನು ಗುರುತಿಸಿವುದರ ಜೊತೆಗೆ ಯುವ ಕಲಾವಿದರನ್ನು ಗೌರವಿಸುತ್ತಿರುವುದು ಅಭಿನಂದನೀಯ. ಭಾರತೀಯ ಸಂಸ್ಕೃತಿಯ ಮುಕುಟಪ್ರಾಯವೆನಿಸಿದ ಮೈಸೂರು ಸಾಂಪ್ರದಾಯಿಕ ಶೈಲಿಯ ಚಿತ್ರಕಲೆಗೆ ಹಿಂದೆ ರಾಜಾಶ್ರಯವಿತ್ತು ಈ ಅದರ ಸ್ಥಾನವನ್ನು ಅಕಾಡೆಮಿ ವಹಿಸಿದ್ದು ಪಾರಂಪರಿಕ ಪ್ರಕಾರಕ್ಕೆ ಸೂಕ್ತ ಮನ್ನಣೆ ನೀಡಿ ಗೌರವಿಸುತ್ತಿರುವುದು ಅವರ ಕಾಳಜಿಯ ದ್ಯೋತಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಇದಲ್ಲದೆ ಹಿರಿಯ ಕಲಾವಿದರಾದ ಮಂಗಳೂರಿನ ಗಣೇಶ್ ಸೋಮಯಾಜಿ ಮತ್ತು ಧಾರವಾಡದ ಬಿ.ಮಾರುತಿ ರವರಿಗೂ ಲಲಿತಕಲಾ ಗೌರವಕ್ಕೆ ಪಾತ್ರರಾಗಿರುತ್ತಾರೆ. 49ನೇ ವಾರ್ಷಿಕ ಕಲಾ ಬಹುಮಾನಕ್ಕೆ 10 ಕಲಾಕೃತಿಗಳನ್ನು ಆಯ್ಕೆಯಾಗಿತ್ತು. ವೇದಿಕೆಯಲ್ಲಿ ಕರ್ನಾಟಕ ಚಿತ್ರಕಲಾ ಅಕಾಡೆಮಿ ಅಧ್ಯಕ್ಷ ಡಿ.ಮಹೇಂದ್ರ, ಜಮಖಂಡಿಯ ಹಿರಿಯ ಕಲಾವಿದ ವಿಜಯ ಸಿಂಧೂರ ಮುಂಬೈನ ವಾಸುದೇವೋ ಕಾಮತ್, ರಿಜಿಸ್ಟ್ರಾರ್ ಆರ್.ಚಂದ್ರಶೇಖರ್ ಉಪಸ್ಥಿತರಿದ್ದರು.


ಕಲಾಕಸ್ತೂರಿ ಮೀರಾಕುಮಾರ್


ವರ್ಣ ಸಂಯೋಜನೆ ಹಾಗು ಸೂಕ್ಷ್ಮ ಕುಸುರಿ ಕಲೆೆಯಿಂದ ಗಮನ ಸೆಳೆಯುವ ಮೈಸೂರು ಚಿತ್ರಕಲೆ, ಭಾರತೀಯ ಸಾಂಪ್ರದಾಯಿಕ ಚಿತ್ರಕಲೆಯಲ್ಲೆ ಒಂದು ವಿಶಿಷ್ಟ ಪ್ರಕಾರವಾದ ಈ ಶೈಲಿ ನೋಡುಗರಿಗೆ ಒಂದು ತ್ರಿ-ಆಯಾಮದ ಅನುಭವ ನೀಡುತ್ತದೆ. ಕಲೆ - ಕೌಶಲ - ಭಕ್ತಿ ಮತ್ತು ವೈಭವಗಳ ಒಟ್ಟು ಮೊತ್ತವೇ ಆಗಿರುವ ಈ ಪ್ರಕಾರದ ಚಿತ್ರ ರಚನೆ ಸುಲಭದ ವಿಷಯವಲ್ಲ ಎನ್ನುವ ಅಂತರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದೆ ಶ್ರೀಮತಿ ಮೀರಾಕುಮಾರ್ ಬೆಂಗಳೂರು ಕಲಾಮಂದಿರ ಸ್ಕೂಲ್ ಆಫ್ ಆರ್ಟ್ ಮೂಲಕ ಫೈನ್ ಆರ್ಟ್ ಡಿಪ್ಲೊಮಾ ಪಡೆದ ಕಲಾತಪಸ್ವಿ.


ಜೊಸ್ಸೋ ವರ್ಕ್ ಎಂಬೋಸ್ ಮೊದಲಾದ ಹಲವು ಕ್ಲಿಷ್ಟಕರ ಹಂತಗಳಲ್ಲಿ ಮೈದೆಳೆಯುವ ಈ ಕಲೆಯಲ್ಲಿ ನೈಜತೆಗಾಗಿ ಚಿನ್ನದ ತಗಡನ್ನು ಉಪಯೋಗಿಸುವುದರಿಂದ ಭಾರಿ ವೆಚ್ಚದಾಯಕ . ಇವರ ಚಿತ್ರಗಳಲ್ಲಿ ಕಂಡು ಬರುವ ಹಿನ್ನೆಲೆಯ 'ಪರದೆ' ಚಿತ್ರಕ್ಕೊಂದು ಮೆರೆಗು ನೀಡುತ್ತದೆ. ರಾಜ್ಯ ಮಟ್ಟದ 25, ರಾಷ್ಟ್ರ ಮಟ್ಟದ 10 , ಅಂತರಾಷ್ಟ್ರೀಯ ಮಟ್ಟದ 5 ಕಲಾಪ್ರದರ್ಶನಗಳಲ್ಲಿ ಪ್ರತ್ಯಕ್ಷ ಭಾಗಿ ಇವರ ಕಲಾ ಪ್ರೇಮಕ್ಕೆ ಸಾಕ್ಷಿ. ಕಲೆಯ ಅಧ್ಯಯನಕ್ಕೆ ಲಂಡನ್, ಪ್ಯಾರಿಸ್, ಆಸ್ಟ್ರಿಯಾ ದೇಶಗಳೂ ಸೇರಿದಂತೆ ಅನೇಕ ದೇಶ ವಿದೇಶಗಳ ಪ್ರವಾಸ. ಅಪರೂಪದ ಕಲಾಕೃತಿಗಳ ಸಂಗ್ರಹ ಇವರ ಮನೆ ಮನೆ ವಿಶ್ವಂಭರ ಕಲಾದೇಗುಲ. 'ಕಲಾಕಸ್ತೂರಿ' ಮುಂತಾದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಅಭಿಜಾತ ಕಲಾವಿದೆಯ ಅಪ್ರತಿಮ ಸಾಧನೆ ಗುರುತಿಸಿ ನ್ಯೂ ಕ್ರಿಶ್ಚಿಯನ್ ಯೂನಿವರ್ಸಿಟಿರವರು ಗೌರವ ಡಾಕ್ಟರೇಟ್ ಪದವಿ ನೀಡಿದೆ.


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top