ಬೆಂಗಳೂರು: 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲು ಸಿದ್ಧತೆ ನಡೆಸಿದ್ದು ಇಂದಿನಿಂದಲೇ ವೆಬ್ಸೈಟ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಸೋಮವಾರದಿಂದ ಲಸಿಕಾ ಕಾರ್ಯ ಶುರುವಾಗಲಿದೆ.
ಮಕ್ಕಳ ಪೋಷಕರ ಮೊಬೈಲ್ ನಂಬರ್ ಮೂಲಕ ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆಗಳ ಜಂಟಿ ಸಂಯೋಜನೆಯಲ್ಲಿ ಮಕ್ಕಳಿಗೆ ಲಸಿಕೆ ನೀಡಲು ಸಿದ್ದವಾಗಿದೆ. ಶಾಲೆಯ ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್ ಬಳಸಿ ಫೋಟೋ ಐಡಿಯನ್ನು ಕೋವಿಡ್ ಪೋರ್ಟಲ್ ಮೂಲಕ ದಾಖಲಿಸಲಾಗಿದೆ.
ಆರೋಗ್ಯ ಇಲಾಖೆಯ ವಿಶೇಷ ತರಬೇತಿ ಪಡೆದುಕೊಂಡ ಸಿಬ್ಬಂದಿಯ ತಂಡ ಭಾಗವಹಿಸಲಿದೆ. ಇವರು ಮಕ್ಕಳ ಲಸಿಕೀಕರಣದಲ್ಲಿ ವೈದ್ಯಕೀಯ ಅರ್ಹತೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಮಕ್ಕಳಲ್ಲಿ ಯಾರಾದರೂ ಟಿಡಿ ಲಸಿಕೆ ಪಡೆದಿದ್ದರೆ 15 ದಿನಗಳ ಬಳಿಕ ಕೊವಾಕ್ಸಿನ್ ವಿತರಿಸಲಾಗುತ್ತದೆ.