ಡಿ.10 ಉಡುಪಿ ನಗರಸಭಾ ಕಚೇರಿ ವ್ಯವಹಾರ ಸ್ಥಗಿತ

Chandrashekhara Kulamarva
0

ಉಡುಪಿ: ಜಿಲ್ಲೆಯಲ್ಲಿ ಡಿಸೆಂಬರ್ 10 ರಂದು ನಡೆಯಲಿರುವ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರಗಳ ವಿಧಾನಪರಿಷತ್ ದ್ವೈವಾರ್ಷಿಕ ಚುನಾವಣೆಗೆ ಸಂಬಂಧಿಸಿದಂತೆ, ಉಡುಪಿ ನಗರಸಭಾ ಕಚೇರಿಯನ್ನು 105 ಮತಗಟ್ಟೆ ಕೇಂದ್ರವನ್ನಾಗಿ ಮಾಡಲಾಗಿರುತ್ತದೆ.


ಆದ್ದರಿಂದ ಮತದಾನ ನಡೆಯುವ ದಿನದಂದು ಉಡುಪಿ ನಗರಸಭಾ ಕಚೇರಿ, ನಗರಸಭಾ ಕಟ್ಟಡಕ್ಕೆ ಹೊಂದಿಕೊಂಡಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆ ಮತ್ತು ಗ್ರಂಥಾಲಯ ಕಟ್ಟಡದಲ್ಲಿ ಯಾವುದೇ ಕಚೇರಿ ವ್ಯವಹಾರಗಳು ನಡೆಯುವುದಿಲ್ಲ ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
To Top