ತೆಲಂಗಾಣ: ಲಕ್ಷ ಕಂಠ ಭಗವದ್ಗೀತಾ ಪಠಣ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ ಉಪಸ್ಥಿತಿ

Chandrashekhara Kulamarva
0


ಭಾಗ್ಯನಗರ: ವಿಶ್ವಹಿಂದು ಪರಿಷತ್ ತೆಲಂಗಾಣ ರಾಜ್ಯ ಘಟಕದ ಆಶ್ರಯದಲ್ಲಿ ಭಾಗ್ಯನಗರದ ಬಶೀರ್ ಬಾಗ್ ನಲ್ಲಿರುವ ಎಲ್ ಬಿ ಸ್ಟೇಡಿಯಂನಲ್ಲಿ ಗೀತಾಜಯಂತಿಯ ಪ್ರಯುಕ್ತ ಮಂಗಳವಾರ ಆಯೋಜಿಸಿದ್ದ ಬೃಹತ್ ಲಕ್ಷ ಕಂಠ ಗೀತಾ ಪಠಣ ಕಾರ್ಯಕ್ರಮದಲ್ಲಿ ಉಡುಪಿ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಭಾಗವಹಿಸಿ ಅನುಗ್ರಹ ಸಂದೇಶ ನೀಡಿದರು.


ಗೀತಾ ಪರಿವಾರ ಸ್ಥಾಪಕ, ಅಯೋಧ್ಯೆ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಖಜಾಂಚಿ ಗೋವಿಂದ ದೇವ ಗಿರಿ ಮಹಾರಾಜ್, ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್, ಆಚಾರ್ಯ ರಾಮಾನುಜ ಪೀಠದ ತ್ರಿದಂಡಿ ಶ್ರೀ ಮನ್ನಾರಾಯಣ ಚನ್ನ ಜೀಯರ್ ಸ್ವಾಮೀಜಿ, ವಿ ಹಿಂ ಪ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಉಪಸ್ಥಿತರಿದ್ದರು.


ಸಮಾಜದಲ್ಲಿ ಭಗವದ್ಗೀತೆಯ ಅನುಸಂಧಾನ ದೊಂದಿಗೆ ಮೌಲಿಕ ಹಾಗೂ ಸಂತೃಪ್ತ ಜೀವನಕ್ರಮವನ್ನು ಸಾಧಿಸುವ ಉದ್ದೇಶದೊಂದಿಗೆ ಈ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಶ್ವಹಿಂದು ಪರಿಷತ್ತಿನ‌ ರಾಜ್ಯ ಘಟಕದ ಪ್ರಮುಖರು ಸಂಯೋಜನೆಯಲ್ಲಿ ಸಹಕರಿಸಿದರು.


(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

0 Comments
Post a Comment (0)
To Top