|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸುಶೀಲಾ ಚಿಟ್ಟಾಣಿಯವರಿಗೆ' ರಾಣಿ ಚೆನ್ನ ಭೈರಾದೇವಿ ಸ್ಮಾರಕ ಪ್ರಶಸ್ತಿ' ಪ್ರದಾನ

ಸುಶೀಲಾ ಚಿಟ್ಟಾಣಿಯವರಿಗೆ' ರಾಣಿ ಚೆನ್ನ ಭೈರಾದೇವಿ ಸ್ಮಾರಕ ಪ್ರಶಸ್ತಿ' ಪ್ರದಾನ


ಹೊನ್ನಾವರ: ಮುಂಬೈನ ಪ್ರತಿಷ್ಠಿತ ಮಯೂರವರ್ಮ ಸಾಂಸ್ಕ್ರತಿಕ ಪ್ರತಿಷ್ಠಾನವು ಕರಾವಳಿ ಕರ್ನಾಟಕವನ್ನು ಆಳಿದ ಶೂರ ಪರಾಕ್ರಮಿ ಮಹಾರಾಣಿ "ಕರಿಮೆಣಸಿನ ರಾಣಿ ಚೆನ್ನಬೈರಾದೇವಿ" ಹೆಸರಿನಲ್ಲಿ ನೀಡುವ ವಾರ್ಷಿಕ ಪ್ರಶಸ್ತಿಯ ಪ್ರಥಮ ಪ್ರಶಸ್ತಿಯನ್ನು ಶ್ರೀಮತಿ ಸುಶೀಲಾ ರಾಮಚಂದ್ರ ಹೆಗಡೆ ಚಿಟ್ಟಾಣಿಯವರಿಗೆ ಡಿಸೆಂಬರ್ 5, 2021ರಂದು ಕರ್ಕಿಯ ಬುರ್ಡೆ ಭಟ್ಟರ ಮನೆಯ 'ಕಲಾಶ್ರೀ' ಸಭಾಂಗಣದಲ್ಲಿ ಹಿರಿಯ ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರರ ಅಧ್ಯಕ್ಷತೆಯಲ್ಲಿ ಪ್ರದಾನ ಮಾಡಿ ಅಭಿನಂದಿಸಿತು.ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಾಡಿನ ಹಿರಿಯ ವಿದ್ವಾಂಸ ಉಮಾಕಾಂತ ಭಟ್ವ ಕೆರೆಕೈ ಭಾಗವಹಿಸಿ ರಾಣಿ ಚೆನ್ನಭೈರಾದೇವಿ ಕುರಿತು ಡಾ. ಗಜಾನನ ಶರ್ಮ ಅವರು ಬರೆದ ಕಾದಂಬರಿ ಉತ್ತರ ಕನ್ನಡಿಗರೆಲ್ಲರೂ ಓದಿ ತಿಳಿಯಲೇಬೇಕಾದ ಸತ್ಯ ಇತಿಹಾಸವಿರುವ ಅಪರೂಪದ ಕೃತಿ ಎಂದರು. ಮತ್ತೊಬ್ಬ ಅತಿಥಿ ಡಾ. ಗಜಾನನ ಶರ್ಮ, ದೇವಿ ಅಕಳಂಕ ಚರಿತೆಯ ವೀರವನಿತೆ. ವಾಸ್ತವದ ಆಧಾರವಿಲ್ಲದ ಆಪಾದನೆಗೆ ಒಳಗಾಗಿ ಅವಜ್ಞೆಗೆ ಒಳಗಾಗಿರುವ ಅವಳ ವ್ಯಕ್ತಿತ್ವ ಮತ್ತು ಜೀವನದ ಕುರಿತು ನಾವು ಇಂದು ಅರಿಯಬೇಕಾದ ಅವಶ್ಯಕತೆ ಇದ್ದು, ಸರ್ಕಾರ ಅವಳ ಚರಿತ್ರೆಯನ್ನು ಸರಿಯಾಗಿ ದಾಖಲಿಸಿ ಸ್ಮರಿಸುವಂತಹ ಸ್ಮಾರಕ ನಿರ್ಮಿಸಬೇಕಿದೆ ಎಂದರು.
ಉತ್ತರ ಕನ್ನಡ ಜಿಪಂ ಮಾಜಿ ಸದಸ್ಯರಾದ ಶ್ರೀಕಲಾ ಶಾಸ್ತ್ರಿಯವರು ಚಿಟ್ಟಾಣಿ ಎಂಬ ಊರ ಹೆಸರಿನಲ್ಲಿರುವ ಮೋಹಕತೆ ಮತ್ತು ಖ್ಯಾತಿಯನ್ನು ವಿವರಿಸಿ ಶ್ರೀಮತಿ ಸುಶೀಲಾ ಹೆಗಡೆಯವರ ಮೌನ ಸಾಧನೆಗೆ ಶುಭ ಹಾರೈಸಿದರು. ಖ್ಯಾತ ಪ್ರಾಧ್ಯಾಪಕ ಡಾ. ಜಿ.ಎಲ್. ಹೆಗಡೆ, ಕುಮಟಾ ಮಾತನಾಡಿ ಶ್ರೀಮತಿ ಸುಶೀಲಾ ಹೆಗಡೆಯವರು ಪದ್ಮಶ್ರೀ ರಾಮಚಂದ್ರ ಹೆಗಡೆಯವರ ಸಾಧನೆಯ ಹಿಂದಿರುವ ಮಹಾನ್ ಶಕ್ತಿಯಾಗಿದ್ದಾರೆ. ತಮ್ಮ ಮಮತೆ ಸೌಹಾರ್ದ ಪೂರ್ಣತೆ ಗಳಿಂದ ಇಡೀ ಕುಟುಂಬವನ್ನು ಪೊರೆದ ಮಹಾ ತಾಯಿಯಾಗಿದ್ದಾರೆ ಎಂದು ವರ್ಣಿಸಿ ಅಭಿನಂದಿಸಿದರು.


ನಿವೃತ್ತ ಪ್ರಾಂಶುಪಾಲ ಎಸ್.ಜಿ. ಹೆಗಡೆ ಪ್ರಶಸ್ತಿ ಪುರಸ್ಕೃತರ ಪರವಾಗಿ ಸಂಘಟಕರನ್ನು ಮನದುಂಬಿ ಆಭಾರ ಮನ್ನಿಸಿದರು. 


ಸಭೆಯ ಆರಂಭದಲ್ಲಿ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ವಿಶ್ವನಾಥ್ ಹೆಗಡೆ ದೊಡ್ಡಮನೆ ಸರ್ವರನ್ನು ಸ್ವಾಗತಿಸಿದರು. ಸಂಚಾಲಕರಾದ ಕೇಶವ ಹೆಗಡೆ  ಕಿಬಳೆ ಸರ್ವರ ಅಭಾರ ಮನ್ನಿಸಿದರು. ಖ್ಯಾತ ಶಿಕ್ಷಕ ಟಿ.ಎನ್. ಭಟ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಸಮಾರಂಭದ ನಂತರ ಕು.ತೇಜ, ಕುಮಾರಿ ಶ್ರೀನಿಧಿ ಕುಮಾರಿ ಗಾಯತ್ರಿ ಅವರಿಂದ' ನೃತ್ಯ ಸಿಂಚನ, ನಡೆಯಿತು. ಹಾಗೂ 'ಶರಸೇತು ಬಂಧನ' ಯಕ್ಷಗಾನ ತಾಳಮದ್ದಲೆ ವಿದ್ವಾನ್ ಉಮಾಕಾಂತ ಭಟ್ ಕೆರೆಕೈ, ಡಾ. ಜಿಎಲ್ ಹೆಗಡೆ ಕುಮಟಾ, ದೊಡ್ಡಮನೆ ಟಿ ಎನ್. ಭಟ್ ಅವರ ಹಿರಿತನದಲ್ಲಿ ನಡೆದು ಜನರನ್ನು ರಂಜಿಸಿತು.


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post