|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 'ವಿಜಯೀಭವ- ಗೆಲುವಿಗೆ ನೂರಾರು ಮೆಟ್ಟಿಲು' ಸರಣಿ: ಹವ್ಯಕ ಮಹಾಸಭೆಯಲ್ಲಿ ವಿಜಯದ ಮಾರ್ಗ ಅನಾವರಣ

'ವಿಜಯೀಭವ- ಗೆಲುವಿಗೆ ನೂರಾರು ಮೆಟ್ಟಿಲು' ಸರಣಿ: ಹವ್ಯಕ ಮಹಾಸಭೆಯಲ್ಲಿ ವಿಜಯದ ಮಾರ್ಗ ಅನಾವರಣ


ಬೆಂಗಳೂರು: ನಾವು ಏನು ಮಾಡಬೇಕೋ ಅದನ್ನು ಮಾಡಿದರೆ ಯಶಸ್ಸು ತಾನಾಗಿಯೇ ಬರುತ್ತದೆ ಎಂದು ಲೆಫ್ಟಿನೆಂಟ್ ಜನರಲ್ ಡಾ.ಬಿ.ಎನ್.ಬಿ.ಎಂ ಪ್ರಸಾದ್ ಹೇಳಿದರು.


ಮಲ್ಲೇಶ್ವರದ ಹವ್ಯಕ ಭವನದಲ್ಲಿ ಅಖಿಲ ಹವ್ಯಕ ಮಹಾಸಭೆಯಿಂದ ಆಯೋಜಿತವಾದ 'ವಿಜಯೀ ಭವ' ಗೆಲುವಿಗೆ ನೂರಾರು ಮೆಟ್ಟಿಲು ಸರಣಿಯ ಡಿಸೆಂಬರ್ ತಿಂಗಳ ಕಾರ್ಯಕ್ರಮದಲ್ಲಿ ಮಹಾಸಭೆಯ ಸನ್ಮಾನ ಸ್ವೀಕರಿಸಿ ಮಾತನಾಡಿದ, ಲೆಫ್ಟಿನೆಂಟ್ ಜನರಲ್ ಡಾ.ಬಿ.ಎನ್.ಬಿ.ಎಂ ಪ್ರಸಾದ್, ನಾನು ವೈದ್ಯನಾಗಿದ್ದೆ, ಸೇನೆಯಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುವ ಅವಕಾಶ ದೊರೆಯಿತು, ಅನೇಕ ಸಂದರ್ಭಗಳಲ್ಲಿ ಪ್ರಾಣದ ಹಂಗು ತೊರೆದು ಅನೇಕ ಸೈನಿಕರ ಪ್ರಾಣ ಉಳಿಸುವ ಅವಕಾಶ ದೊರೆಯಿತು ಎಂದು ಸೇನೆಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡ ಅವರು, ಅಧ್ಯಾತ್ಮಿಕ ಶಕ್ತಿ ಇದ್ದಾಗ ಸವಾಲುಗಳನ್ನು ಎದುರಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.


ವಿಸ್ತಾರ್ ಫೈನಾನ್ಸ್ ನ ಸಂಸ್ಥಾಪಕ ಬ್ರಹ್ಮಾನಂದ ಹೆಗಡೆ ಮಾತನಾಡಿ, ನಕಾರಾತ್ಮಕ ಭಾವನೆಗಳನ್ನು ಮೊದಲು ನಮ್ಮ ಮನಸ್ಸಿನಿಂದ ತೆಗೆದು ಹಾಕಬೇಕು. ಗುರಿಯನ್ನು ನಿಗದಿಪಡಿಸಿಕೊಂಡರಷ್ಟೇ ಸರಿಯಾದ ದಾರಿಯಲ್ಲಿ ಸಾಗಿ ಯಶಸ್ಸನ್ನು ಪಡೆಯಲು ಸಾಧ್ಯ ಎಂದರು. ಯಶಸ್ಸನ್ನು ಪಡೆಯಲು ಕುಟುಂಬದವರ ಸಹಕಾರ ಅತ್ಯಗತ್ಯ ಎಂದ ಅವರು, ನಿರ್ಣಾಯಕ ಸಂದರ್ಭಗಳು ಎದುರಾದಾಗ ಧೈರ್ಯದಿಂದ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಹಿರಿಯ ಪತ್ರಕರ್ತರು, ಟಿವಿ 9 ಸಂಪಾದಕರಾದ ರಂಗನಾಥ್ ಭಾರದ್ವಾಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಧನೆ ಮಾಡಿದಾಗ ಜಗತ್ತು ನಮ್ಮನ್ನು ಗುರುತಿಸುತ್ತದೆ. ಆದರೆ ಸಾಧನೆ ಮಾಡಲು ಆ ವ್ಯಕ್ತಿಯಲ್ಲಿ ಇರುವ ಬದ್ಧತೆಯನ್ನು ಜಗತ್ತು ಗುರುತಿಸುವುದಿಲ್ಲ. ಬದ್ಧತೆಯನ್ನು ಅಳವಡಿಸಿಕೊಂಡಾಗ ಮಾತ್ರ ಸಾಧನೆ ಮಾಡಲು ಸಾಧ್ಯ. ಹಾಗೆಯೇ ಸಾಧನೆಯ ಹಾದಿಯಲ್ಲಿ ತಾತ್ಕಾಲಿಕ ಸೋಲಾದಾಗ ಆತ್ಮಹತ್ಯೆ ಮಾಡಿಕೊಳ್ಳುವ ಕುರಿತು ಎಂದಿಗೂ ಚಿಂತಿಸಬಾರದು, ಜಗತ್ತು ತಲೆಯೆತ್ತಿ ನೋಡುವಂತೆ ಬೆಳೆಯಬೇಕು ಎಂದು ತಿಳಿಸಿದರು.


ಅಧ್ಯಕ್ಷರಾದ ಡಾ ಗಿರಿಧರ ಕಜೆ ಮಾತನಾಡಿ, ಜೀವನದಲ್ಲಿ ಕಷ್ಟದ ಸಂದರ್ಭಗಳು ಬಂದೇ ಬರುತ್ತದೆ. ಸುಲಭವಾಗಿ ಸಾಧನೆ ಮಾಡಲು ಅಸಾಧ್ಯ. ನಾವು ಪೂಜಿಸುವ ರಾಮ-ಕೃಷ್ಣಾದಿಗಳೂ ಕೂಡ ಕಷ್ಟಗಳ ಮಧ್ಯೆಯೇ ಇದ್ದು, ಸಮಾಜಕ್ಕೆ ಆದರ್ಶವಾಗಿ ಬಾಳಿ ಪೂಜನೀಯವಾದವರು. ಈ ವಿಜಯೀಭವ ಕಾರ್ಯಕ್ರಮ ಸಾಧಕರ ಸಾಧನೆಯನ್ನು ಸಂಭ್ರಮಿಸುವುದಾಗಿದ್ದು, ಇದರ ಸ್ಪೂರ್ತಿಯಿಂದ ಇನ್ನೊಬ್ಬ ಸಾಧಕ ಉದಯವಾದರೆ ಈ ಕಾರ್ಯಕ್ರಮ ಸಾರ್ಥಕ ಎಂದರು.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಈ ಕಾರ್ಯಕ್ರಮ ಹವ್ಯಕರಿಗೆ ಮಾತ್ರವಲ್ಲ. ಸಮಸ್ತ ಸಮಾಜಕ್ಕೆ ಈ ಕಾರ್ಯಕ್ರಮಗಳು ಮುಕ್ತವಾಗಿದೆ. ಹವ್ಯಕ ಸಮಾಜದ ಸಾಧಕರನ್ನು ಸಮಷ್ಟಿ ಸಮಾಜಕ್ಕೆ ಪರಿಚಯಿಸುವುದು ಈ ಕಾರ್ಯಕ್ರಮದ ಉದ್ದೇಶಗಳಲ್ಲೊಂದು ಎಂದು ತಿಳಿಸಿದರು.


ಬ.ಲ ಸುರೇಶ್ ಮತ್ತು ಡಾ.ಶಾರದಾ ಜಯಗೋವಿಂದ ಅವರುಗಳು  ಡಾ.ಬಿ.ಎನ್.ಬಿ.ಎಂ ಪ್ರಸಾದ್   ಹಾಗೂ ಬ್ರಹ್ಮಾನಂದ ಹೆಗಡೆ ಅವರೊಂದಿಗೆ ಸಂವಾದ ನಡೆಸಿಕೊಟ್ಟರು.  

 

ಕಾರ್ಯಕ್ರಮದ ಕೊನೆಯಲ್ಲಿ ಗೌತಮ ಹೆಬ್ಬಾರ್ ಹಾಗೂ ಪೂರ್ಣಿಮಾ ಶಮಂತ್ ಅವರಿಂದ ವೇಣು ವಾದನ ಸಭಾಸದರ ಮನರಂಜಿಸಿತು.


ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಸಿಎ ವೇಣುವಿಘ್ನೇಶ್ ಸಂಪ ಸ್ವಾಗತಿಸಿದರು, ಉಪಾದ್ಯಕ್ಷ ಶ್ರೀಧರ್ ಭಟ್ ಕೆಕ್ಕಾರು, ಕಾರ್ಯದರ್ಶಿಗಳಾದ ಪ್ರಶಾಂತ್ ಭಟ್ ಯಲ್ಲಾಪುರ, ಸಾಲೆಕೊಪ್ಪ ಶ್ರೀಧರ್ ಭಟ್, ಸಂಚಾಲಕಾರದ ಆದಿತ್ಯ ಕಲಗಾರು, ರವಿನಾರಾಯಣ ಪಟ್ಟಾಜೆ ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದರು. ಕೃಷ್ಣಾನಂದ ಶರ್ಮಾ ಹಾಗೂ ಶ್ರೀಕಾಂತ ಹೆಗಡೆ ಅಂತ್ರವಌ ಕಾರ್ಯಕ್ರಮವನ್ನು ನಿರ್ವಹಿಸಿದರು.

ಸಂಪರ್ಕ: ಸಂದೇಶ ತಲಕಾಲಕೊಪ್ಪ 8970228945


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post