||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಂಗಳೂರಿಂದ ಜಮಖಂಡಿಗೆ ರಾಜಹಂಸ ಬಸ್ ಸಂಚಾರ ಆರಂಭ

ಮಂಗಳೂರಿಂದ ಜಮಖಂಡಿಗೆ ರಾಜಹಂಸ ಬಸ್ ಸಂಚಾರ ಆರಂಭ

 

ಮಂಗಳೂರು: ಇಲ್ಲಿನ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗದಿಂದ ಮಂಗಳೂರು -ಜಮಖಂಡಿಗೆ (ಮಂಗಳೂರಿನಿಂದ ವಯಾ ಉಡುಪಿ, ಅಂಕೋಲಾ, ಹುಬ್ಬಳ್ಳಿ, ಧಾರವಾಡ, ಸವದತ್ತಿ, ಮುಧೋಳ) ಮಾರ್ಗವಾಗಿ ಹೊಸ ರಾಜಹಂಸ ಸಾರಿಗೆಯು ಡಿ.24ರಿಂದ ಕಾರ್ಯಾಚರಣೆಯನ್ನು ಆರಂಭಿಸಿದೆ.


ಮಂಗಳೂರು ಬಸ್ ನಿಲ್ದಾಣದಿಂದ ಸಂಜೆ 6 ಗಂಟೆಗೆ ಹೊರಟು, ಉಡುಪಿಗೆ ರಾತ್ರಿ 7.30ಕ್ಕೆ ತಲುಪಲಿದೆ. ಕುಂದಾಪುರದಿಂದ ರಾತ್ರಿ 8.15ಕ್ಕೆ ಹೊರಟು, ಹುಬ್ಬಳ್ಳಿಗೆ ರಾತ್ರಿ 2.30ಕ್ಕೆ ತಲುಪಲಿದೆ. ರಾಮದುರ್ಗದಿಂದ ಬೆಳಿಗ್ಗೆ 4.30ಕ್ಕೆ ಜಮಖಂಡಿ ಮಾರ್ಗವಾಗಿ ಹೊರಟು, ಜಮಖಂಡಿಗೆ ಮರುದಿನ ಬೆಳಿಗ್ಗೆ 7.30 ಕ್ಕೆ ತಲುಪಲಿದೆ.


ಮರು ಪ್ರಯಾಣದಲ್ಲಿ ಜಮಖಂಡಿಯಿಂದ ಸಂಜೆ 6 ಗಂಟೆಗೆ ಹೊರಟು ರಾಮದುರ್ಗಕ್ಕೆ ರಾತ್ರಿ 7.30ಕ್ಕೆ ತಲುಪಲಿದೆ. ಹುಬ್ಬಳ್ಳಿಯಿಂದ ರಾತ್ರಿ 12.30 ಹೊರಟು, ಕುಂದಾಪುರಕ್ಕೆ ಬೆಳಿಗ್ಗೆ 5.30ಕ್ಕೆ ತಲುಪಲಿದೆ. ನಂತರ ಉಡುಪಿಯಿಂದ ಬೆಳಿಗ್ಗೆ 6.15ಕ್ಕೆ ಹೊರಟು ಮಂಗಳೂರಿಗೆ ಮರುದಿನ ಬೆಳಿಗ್ಗೆ 7.30ಕ್ಕೆ ತಲುಪುತ್ತದೆ.


ಮಂಗಳೂರಿನಿಂದ ಜಮಖಂಡಿಗೆ ಪ್ರತಿ ಪ್ರಯಾಣಿಕರಿಗೆ ಒಟ್ಟು ಪ್ರಯಾಣ ದರ 690ರೂ.ಗಳು. ಪ್ರಯಾಣಿಕರಿಗೆ ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರು www.ksrtc.in ಗೆ ಅಥವಾ ಹತ್ತಿರದ ರಿಸರ್ವೇಶನ್ ಕೌಂಟರ್ ಅನ್ನು ಸಂಪರ್ಕಿಸಬಹುದು.


ಹೆಚ್ಚಿನ ಮಾಹಿತಿಗೆ ಮಂಗಳೂರು ಬಸ್ ನಿಲ್ದಾಣ ಮೊ.ಸಂಖ್ಯೆ: 7760990720, ಮಂಗಳೂರು ಮುಂಗಡ ಬುಕ್ಕಿಂಗ್ ಕೌಂಟರ್ ಮೊ.ಸಂಖ್ಯೆ: 9663211553, ಉಡುಪಿ ಬಸ್ ನಿಲ್ದಾಣ ಮೊ.ಸಂಖ್ಯೆ: 9663266400, ಕುಂದಾಪುರ ಬಸ್ ನಿಲ್ದಾಣ ಮೊ.ಸಂಖ್ಯೆ: 9663266009, ಹುಬ್ಬಳ್ಳಿ ಬಸ್ ನಿಲ್ದಾಣ ಮೊ.ಸಂಖ್ಯೆ: 7760991682, ಜಮಖಂಡಿ ಘಟಕ ವ್ಯವಸ್ಥಾಪಕರ ಮೊ.ಸಂಖ್ಯೆ:7760991778, ಮಂಗಳೂರು - 2ರ ಘಟಕ ವ್ಯವಸ್ಥಾಪಕರ ಮೊ.ಸಂಖ್ಯೆ: 7760990714, ಮಂಗಳೂರು - 2ರ ಸಂಚಾರ ಅಧೀಕ್ಷಕರ ಮೊ.ಸಂಖ್ಯೆ: 7760990728, ಜಮಖಂಡಿ ಬಸ್ ನಿಲ್ದಾಣದ ದೂ.ಸಂಖ್ಯೆ: 08353220004 ಯನ್ನು ಸಂಪರ್ಕಿಸಬಹುದು ಎಂದು ಮಂಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post