|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಂಗೀತದ 'ದೀಕ್ಷೆ': ಸ್ಯಾಕ್ಸೋಫೋನ್ ವಾದಕಿ ದೀಕ್ಷಾ ದೇವಾಡಿಗ ಅಲೆವೂರು

ಸಂಗೀತದ 'ದೀಕ್ಷೆ': ಸ್ಯಾಕ್ಸೋಫೋನ್ ವಾದಕಿ ದೀಕ್ಷಾ ದೇವಾಡಿಗ ಅಲೆವೂರು


ಖ್ಯಾತ ನಾಗಸ್ವರ ಹಾಗೂ ಸ್ಯಾಕ್ಸೋಫೋನ್ ವಾದಕ ರಾಘವ ಶೇರಿಗಾರ ಅಲೆವೂರು ಮತ್ತು ಮೋಹಿನಿ ದಂಪತಿಗಳ ದ್ವಿತೀಯ ಪುತ್ರಿ ಮತ್ತು ನಿತೀಶ್ ಎ ದೇವಾಡಿಗ ಇವರ ಧರ್ಮ ಪತ್ನಿ ದೀಕ್ಷಾ ಅವರು 4 ನೇ ತರಗತಿಯಲ್ಲಿ ಇರುವಾಗ ಸ್ಯಾಕ್ಸೋಫೋನ್ ವಾದನವನ್ನು ಕರಗತ ‌‌‌‌‌‌‌‌‌‌‌‌‌‌‌‌‌‌‌‌‌‌‌‌‌ಮಾಡಿಕೊಂಡರು. ಬಿ.ಎಡ್ (B.Ed) ಪದವಿಯನ್ನು 2020ರಲ್ಲಿ ಪೂರ್ತಿಗೊಳಿಸಿದ್ದು (ಕರ್ನಾಟಕ ಸಂಗೀತ) ಸ್ಯಾಕ್ಸೋಫೋನ್ ನುಡಿಸುವುದು ಇವರ ವೃತ್ತಿ ಆಗಿರುತ್ತದೆ.


ದೀಕ್ಷಾ ಸುಮಾರು 17 ವರ್ಷಗಳಿಂದ ಸ್ಯಾಕ್ಸೋಫೋನ್ ವಾದನವನ್ನು ನುಡಿಸುತ್ತಾ ಹೀಗೆ ಕೃತಿಗಳನ್ನು ನುಡಿಸುವ ಮಟ್ಟಕ್ಕೆ ಬಂದಿರುತ್ತಾರೆ. ಅಲ್ಲದೇ ತ್ಯಾಗರಾಜರ ಅನೇಕ ಕೃತಿಗಳು, ಪಂಚ ರತ್ನ ಕೃತಿಗಳು, ವರ್ಣಗಳು, ದೇವರ ನಾಮಗಳು ಇವೆಲ್ಲವನ್ನು ನುಡಿಸುವ ಮಟ್ಟಕ್ಕೆ ಬೆಳೆದಿರುತ್ತಾರೆ. ದೀಕ್ಷಾಳ ಗುರು ಉಡುಪಿ ಕೆ. ರಾಘವೇಂದ್ರ ರಾವ್ ಕೊಳಲು ವಾದಕ, ಆಕಾಶವಾಣಿ ಕಲಾವಿದರು. ಅಂತೆಯೇ ಮೊದಲ ಎರಡು ವರ್ಷದ ಸಂಗೀತ ವಾದನ ಅಭ್ಯಾಸವನ್ನು ಅಲೆವೂರು ಶ್ರೀ ಸುಂದರ ಶೇರಿಗಾರ್ ಜೊತೆ ಕಲಿತರು. ಪ್ರಸ್ತುತ ಇವರು ವಾದನ ಅಭ್ಯಾಸವನ್ನು ವಿದುಷಿ ಮಾಧವಿ ಭಟ್ ಇವರಲ್ಲಿ ಕಲಿಯುತ್ತಿದ್ದಾರೆ.


ಸ್ಯಾಕ್ಸೋಫೋನ್ ಕ್ಷೇತ್ರದಲ್ಲಿ ನೀವು ಎದುರಿಸಿದ ಸವಾಲುಗಳೇನು:-

ಶಾಲಾ ಕಾಲೇಜಿನಲ್ಲಿ ಓದುತ್ತಿದ್ದಾಗ ಪರೀಕ್ಷೆ ದಿನದಂದು ವಾದ್ಯ ಕಾರ್ಯಕ್ರಮ ಇದ್ದಾಗ ಅದು ಎರಡಕ್ಕೂ ಭಾಗವಹಿಸಿದ ಕೆಲವೊಂದು ದಿನ. ಈಗ ನಾನು ಶಾಲಾ ಶಿಕ್ಷಕಿಯಾಗಿ ಹಾಗೂ ವಾದ್ಯ ಕ್ಷೇತ್ರದಲ್ಲಿಯೂ ಶಿಕ್ಷಕಿಯಾಗಿ ಮತ್ತು ಈ ಮಧ್ಯೆ ಕಾರ್ಯಕ್ರಮ ಬಂದಾಗ ಅದನ್ನು ವಹಿಸಿಕೊಂಡು ಕಾರ್ಯಕ್ರಮಕ್ಕೆ ಹೋಗುವಾಗ ಎರಡು ಕ್ಷೇತ್ರದಲ್ಲಿ ಮಕ್ಕಳ ಶಿಕ್ಷಣದ ಬಗ್ಗೆ ನಿಗಾ ವಹಿಸುವಂತಹ ಸವಾಲುಗಳು. ಬಹಳ ಹೆದರಿಕೆ ಹಾಗೂ ಜಾಗ್ರತೆಯಿಂದ ನಿಭಾಯಿಸುವುದು ದೊಡ್ಡ ಸವಾಲು ಎಂದು ದೀಕ್ಷಾ ಅವರು ಹೇಳುತ್ತಾರೆ.


ಸ್ಯಾಕ್ಸೋಫೋನ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳ ಬಯಸುವವರಿಗೆ ನಿಮ್ಮ ಹಿತನುಡಿಗಳೇನು:-

ಮೊದಲಿಗೆ ಹೆಣ್ಣು ಮಕ್ಕಳಿಗೆ ಹೇಳುವುದೇನೆಂದರೆ ಈ ವಾದ್ಯ ಸಂಗೀತ ಅಥವಾ ಬೇರೆ ಯಾವುದೇ ಕ್ಷೇತ್ರವಾಗಲಿ, ಅದನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಯಾವುದೇ ಕಷ್ಟ ಬಂದರೂ, ಯಾರು ಏನೇ ಹೇಳಲಿ ಛಲದಿಂದ ಮುಂದುವರಿಯಿರಿ.

ಹೆಣ್ಣು ಮಕ್ಕಳಿಗೆ ತಮ್ಮ ಮನೆಯಲ್ಲಿ ಪ್ರೋತ್ಸಾಹ ಕಡಿಮೆ ನೀಡುವುದು. ಯಾಕೆಂದರೆ ನೀನು ಹೆಣ್ಣು ಎಂದು ಅಂತಹ ಯಾವುದೇ ಮಾತು‌ ಬಂದರೆ ಲೆಕ್ಕಿಸದೆ ಮುಂದೆ‌ ಬಂದು ಅವರ ಪ್ರಶ್ನೆಗೆ ನಮ್ಮ ಪ್ರಯತ್ನದ ಮೂಲಕ ಹಾಗೂ ಗೆಲುವು ಸಾಧಿಸಿ ಉತ್ತರ ನೀಡಬೇಕು.

(ನಾನು ಕೂಡ ಇಂತಹ ತುಂಬಾ ಸಮಸ್ಯೆಯನ್ನು ಎದುರಿಸಿಕೊಂಡು ಬಂದಿರುತ್ತೇನೆ)


ಸ್ಯಾಕ್ಸೋಫೋನ್ ಕ್ಷೇತ್ರದಲ್ಲಿ ನಿಮ್ಮ ಮುಂದಿನ ಯೋಜನೆಗಳು:-

ಈ ವಾದ್ಯ ಕ್ಷೇತ್ರದಲ್ಲಿ ಇನಷ್ಟು ಹೆಚ್ಚು ಪಾಠ ಅಭ್ಯಾಸ ಮಾಡಿ ವಿದ್ವಾನ್ ಪಾಠ ಜೊತೆಗೆ ಸ್ವಂತ ರಾಗ ಸಂಯೋಜನೆ ಮಾಡಬೇಕು ಮತ್ತು ನಾನು ಗುರುಗಳಿಂದ ಕಲಿತಿರುವ ವಾದ್ಯ ಸಂಗೀತದ ವಿದ್ಯೆಯನ್ನು ಆಸಕ್ತಿ ಇರುವ ಮಕ್ಕಳಿಗೆ ನನ್ನಲ್ಲಿ ಆಗುವಷ್ಟು ಕಲಿಸಬೇಕು, ಈ ಕ್ಷೇತ್ರದಲ್ಲಿ ಇನ್ನು ಒಳ್ಳೆಯ ಹೆಸರು ಮಾಡಬೇಕು ಪ್ರತಿಯೊಬ್ಬರಿಗೂ ನಾನು ನುಡಿಸುವ ವಾದನ ಖುಷಿ ಪಡಬೇಕು ಎಂದು ದೀಕ್ಷಾ ಅವರು ಹೇಳುತ್ತಾರೆ.


ದೀಕ್ಷಾ ಅವರಿಗೆ ಸಿಕ್ಕಿರುವ ಪ್ರಶಸ್ತಿ ಹಾಗೂ ಸನ್ಮಾನಗಳು:-

◆ 2006 ರಲ್ಲಿ ಉಡುಪಿ ಜಿಲ್ಲೆಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತು 74ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸ್ಯಾಕ್ಸೋಫೋನ್ ವಾದನವನ್ನು ನೀಡಿರುತ್ತಾರೆ.

◆ 2008 ರಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ.

◆ 2008 ರಲ್ಲಿ ಕನ್ನಡ ಸಾಂಸ್ಕೃತಿಕ ಇಲಾಖೆ ಶ್ರೀ ಚಕ್ರೇಶ್ವರಿ ದೇವಸ್ಥಾನ ಕೋಡಿ ಕನ್ಯಾನ ಸಾಸ್ತಾನ ಇಲ್ಲಿನ ಸಾಧನ ಪ್ರಶಸ್ತಿ ಪತ್ರ.

◆ ಸರ್ಟಿಫಿಕೇಟ್ ಅಫ್ ಮೆರಿಟ್ ಹ್ಯಾಸ್ ಬೀನ್ ಅವಾರ್ಡೆಡ್ ಸರ್ಟಿಫಿಕೇಟ್ ಇನ್ instrumental  ಮ್ಯೂಸಿಕ್ ಸ್ಯಾಕ್ಸೋಫೋನ್ ಫ್ರಮ್ ಗವರ್ನಮೆಂಟ್ ಆಫ್ ಇಂಡಿಯಾ.

◆ 2010 ರಲ್ಲಿ ಬೆಂಗಳೂರಿನಲ್ಲಿ ನೀಡಿದ ಧಾರ್ಮಿಕ ಕಾರ್ಯಕ್ರಮಕ್ಕೆ ಸ್ಯಾಕ್ಸೋಫೋನ್ ವಾದನದಲ್ಲಿ "ನಾದ ವೈಭವ ಬಿರುದು".

◆ 2010 ರಲ್ಲಿ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ವಾದ್ಯ ಸಂಗೀತದ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸ್ಥಾನ, ಕ್ಲಸ್ಟರ್ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಜಿಲ್ಲಾಮಟ್ಟದವರೆಗೂ ಪ್ರತಿನಿಧಿಸಿರುತ್ತಾರೆ.

◆ ಶ್ರೀ ಕೃಷ್ಣ ಮಠ ಉಡುಪಿ ಶ್ರೀ ಅದಮಾರು ಮಠದ ಸ್ವಾಮೀಜಿಯವರ ಪರ್ಯಾಯ ಮಹೋತ್ಸವಕ್ಕೆ ನೀಡಿದ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ.

◆ ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ಬೆಂಗಳೂರು ನಡೆಸಿದ 2017 ನೇ ಸಾಲಿನ ವಾದ್ಯ ಸಂಗೀತ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಗೆ ಈಕೆ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.

◆ 2020‌ ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ನವರಾತ್ರಿ ಆಚರಣೆ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಯಾಕ್ಸೋಫೋನ್ ವಾದನ ನೀಡಿದ ಸಂದರ್ಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆಯವರಿಂದ ಗೌರವ ಕಾಣಿಕೆ.

◆ 2021 ರಲ್ಲಿ ಸುವರ್ಣ ಸೂಪರ್ ಸ್ಟಾರ್ ಟಿವಿಯಲ್ಲಿ (young achievers) ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ಯಾಕ್ಸೋಫೋನ್ ವಾದನವನ್ನು ನೀಡಿರುತ್ತಾರೆ.

◆ 2021 ರಲ್ಲಿ ದೇವಾಡಿಗ ಯುವ ವೇದಿಕೆ (ರಿ.), ಉಡುಪಿ ಇವರು ನಡೆಸಿದ ಯುವ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದೀಕ್ಷಾಳಿಗೆ "ದೇವಾಡಿಗ ಯುವ ಮಹಿಳಾ ಸ್ಯಾಕ್ಸೋಫೋನ್ ರತ್ನ" ಪ್ರಶಸ್ತಿ.

◆ ಕರ್ನಾಟಕ ರಾಜ್ಯ ದೇವಾಡಿಗ ಸಂಘ (ರಿ) ಮಂಗಳೂರು ಹಾಗೂ ಕೆ.ವಿ.ದೇವಾಡಿಗ ಚಾರಿಟೇಬಲ್ ಟ್ರಸ್ಟ್ (ರಿ) ಮಂಗಳೂರು ಇವರು 2021 ನೇ ಸಾಲಿನ ಶ್ರೀ ಹರೀಶ್ ಶೇರಿಗಾರ್ ಅತ್ಯುತ್ತಮ ಸಂಗೀತ ಪ್ರಶಸ್ತಿ.


ಕರ್ನಾಟಿಕ್ ಸಂಗೀತವನ್ನು ಆಲಿಸುವುದು, ಗೀತೆಗಳನ್ನು ಮತ್ತು ಇತರ ಅರ್ಥ ಪೂರ್ಣವಾದ ಹಾಡನ್ನು ಕೇಳಿ‌ ನುಡಿಸುವುದು ಇವರ ಹವ್ಯಾಸಗಳು.

ದೀಕ್ಷಾ ಇವರು ಉಡುಪಿಯಲ್ಲಿ ಹಲವಾರು ಕಡೆ ಸ್ಯಾಕ್ಸೋಫೋನ್ ವಾದನ ಕಾರ್ಯಕ್ರಮವನ್ನು ನೀಡಿರುತ್ತಾರೆ. ಅಲ್ಲದೆ ಧರ್ಮಸ್ಥಳ, ಮಂಗಳೂರು, ಮೂಡಬಿದಿರೆ, ಬೆಂಗಳೂರು, ಮೈಸೂರು, ಮುಂಬಯಿ, ತಮಿಳುನಾಡು, ಚೆನೈ, ಹಾಸನ, ಬಳ್ಳಾರಿ, ಕೇರಳ, ಹುಬ್ಬಳ್ಳಿ, ಕೋಲಾರ, ಕುಮಟಾ, ಶಿವಮೊಗ್ಗ, ಹೊನ್ನಾವರ, ಕಡಬ, ಕೊಪ್ಪಳ, ಯಲ್ಲಾಪುರ, ಮಲ್ಲಾಪುರ, ಗೋವಾ ಮುಂತಾದ ಕಡೆಗಳಲ್ಲಿ ಸಾವಿರಾರು ಕಾರ್ಯಕ್ರಮಗಳನ್ನು ನೀಡಿರುತ್ತಾರೆ.

ದೀಕ್ಷಾ ಇವರು ಆಸಕ್ತಿ ಇರುವ ಮಕ್ಕಳಿಗೆ ಸ್ಯಾಕ್ಸೋಫೋನ್ ವಾದನವನ್ನು ಮುಚ್ಚಿಲ್ ಕೋಡು ಸುಬ್ರಹ್ಮಣ್ಯ ದೇವಸ್ಥಾನದ ಹತ್ತಿರದ‌‌‌ ಶಾಲೆಯಲ್ಲಿ ನೀಡುತ್ತಿದ್ದಾರೆ.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

-ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

8971275651


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم