ಇಪ್ಪತ್ತೊಂದು ಮುಗಿಯಿತು
ಅಂದರೆ ಇಪ್ಪತ್ತೆರಡು ಬಂದಂತೆ
ತಪ್ಪ ಬಹುದೇ ಬವಣೆ
ಉರಿವ ಸೊಡರಲಿ ಚಿಟ್ಟೆಯಾಗಿ
ಬಿದ್ದಿರುವಾಗ!
ತಪ್ಪ ಬಹುದೇ ನೋವು
ಸೋಂಕು ಸಾಂಕ್ರಾಮಿಕ ದ
ಕಬಂಧ ಹಿಡಿತದ
ಬಗೆ ಹರಿಯದ ಯಾತನೆ
ಈಗ ತುಂಬಿರುವಾಗ
ತಪ್ಪ ಬಹುದೇ ಹಿಂಡಿ
ಹಿಪ್ಪೆ ಮಾಡುವ
ಅರ್ಧ ಕೆಟ್ಟಿಹ
ಪ್ರಾರಬ್ಧ ಕರ್ಮ
ಪೆಟ್ರೋಲು ಕುಡಿವಾಗ
ತಪ್ಪ ಬಹುದೇ ಹಳೆಯ
ಪೆಟ್ಟುಗಳ ಮಟ್ಟುಗಳು
ಎಲ್ಲೆಂದರಲ್ಲಿ ಬೀಸಿದ
ಚಾಟಿ ಏಟಿನಂತೆ
ದಿನವಹಿ ಹೊಡೆವಾಗ
ಒಪ್ಪವಾದರೆ ಸಾಕು
ಜೀವನದ ಗತಿ
ಸಂಗತಿಗಳ ಚಲನೆ
ಸ- ರಾಗ
ಬದುಕುತಿರುವಾಗ
ಒಪ್ಪೋಣ ಅಪ್ಪೋಣ
ನಡು ನೀರಲ್ಲಿ
ಕೈ ಬಿಡದ ಹಾಗೆ
ಉಸಿರುಳಿದು ನಗುವ
ಕನಸು ಇರುವಾಗ.
-ಡಾ. ಸುರೇಶ ನೆಗಳಗುಳಿ, ಮಂಗಳೂರು
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ