||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕವನ: ಶುಭ ಸ್ವಾಗತ - 2022

ಕವನ: ಶುಭ ಸ್ವಾಗತ - 2022ಇಪ್ಪತ್ತೊಂದು ಮುಗಿಯಿತು

ಅಂದರೆ ಇಪ್ಪತ್ತೆರಡು ಬಂದಂತೆ

ತಪ್ಪ ಬಹುದೇ ಬವಣೆ

ಉರಿವ ಸೊಡರಲಿ ಚಿಟ್ಟೆಯಾಗಿ

ಬಿದ್ದಿರುವಾಗ!


ತಪ್ಪ ಬಹುದೇ ನೋವು

ಸೋಂಕು ಸಾಂಕ್ರಾಮಿಕ ದ

ಕಬಂಧ ಹಿಡಿತದ

ಬಗೆ ಹರಿಯದ ಯಾತನೆ

ಈಗ ತುಂಬಿರುವಾಗ


ತಪ್ಪ ಬಹುದೇ ಹಿಂಡಿ

ಹಿಪ್ಪೆ ಮಾಡುವ 

ಅರ್ಧ ಕೆಟ್ಟಿಹ 

ಪ್ರಾರಬ್ಧ ಕರ್ಮ

ಪೆಟ್ರೋಲು ಕುಡಿವಾಗ


ತಪ್ಪ ಬಹುದೇ ಹಳೆಯ

ಪೆಟ್ಟುಗಳ ಮಟ್ಟುಗಳು

ಎಲ್ಲೆಂದರಲ್ಲಿ ಬೀಸಿದ

ಚಾಟಿ ಏಟಿನಂತೆ

ದಿನವಹಿ ಹೊಡೆವಾಗ


ಒಪ್ಪವಾದರೆ ಸಾಕು

ಜೀವನದ ಗತಿ

ಸಂಗತಿಗಳ ಚಲನೆ

ಸ- ರಾಗ

ಬದುಕುತಿರುವಾಗ


ಒಪ್ಪೋಣ ಅಪ್ಪೋಣ

ನಡು ನೀರಲ್ಲಿ

ಕೈ ಬಿಡದ ಹಾಗೆ

ಉಸಿರುಳಿದು ನಗುವ

ಕನಸು ಇರುವಾಗ.

-ಡಾ. ಸುರೇಶ ನೆಗಳಗುಳಿ, ಮಂಗಳೂರು


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post