||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಾಳೆ (ಡಿ.14) ರಾತ್ರಿ ಆಕಾಶ ನೋಡಿ... ! ಗಂಟೆಗೆ ಸುಮಾರು 120 ರಷ್ಟು ಉಲ್ಕೆಗಳು ಕಾಣಿಸ್ತವೆ

ನಾಳೆ (ಡಿ.14) ರಾತ್ರಿ ಆಕಾಶ ನೋಡಿ... ! ಗಂಟೆಗೆ ಸುಮಾರು 120 ರಷ್ಟು ಉಲ್ಕೆಗಳು ಕಾಣಿಸ್ತವೆ

 

ಡಿಸೆಂಬರ್ 14ರಂದು ಗೋಚರಿಸುವ ಜೆಮಿನಿಡ್‌ ಉಲ್ಕಾವೃಷ್ಟಿಯನ್ನು ತಪ್ಪದೇ ವೀಕ್ಷಿಸಿ. ಧೂಮಕೇತುವು ತನ್ನ ಕಕ್ಷೆಯಲ್ಲಿ ಸೂರ್ಯನನ್ನು ಸುತ್ತುವಾಗ, ಸೂರ್ಯನ ಶಾಖದಿಂದಾಗಿ ಅದರ ಅವಶೇಷಗಳು ತನ್ನ ಪಥದಲ್ಲಿ ಉಳಿಯುತ್ತವೆ. ಭೂಮಿಯು ತನ್ನ ಕಕ್ಷೆಯಲ್ಲಿ ಸೂರ್ಯನ ಸುತ್ತ ಸುತ್ತುತ್ತಾ ಈ ಪ್ರದೇಶವನ್ನು ತಲುಪಿದಾಗ ಆ ಅವಶೇಷಗಳು ಭೂಮಿಯ ವಾತಾವರಣದಲ್ಲಿ ಉಲ್ಕೆಗಳಾಗಿ ಗೋಚರಿಸುತ್ತವೆ.


ಭೂಮಿಯು ಈ ಪ್ರದೇಶವನ್ನು, ವರ್ಷಕ್ಕೆ ಒಂದು ಬಾರಿ ಮಾತ್ರ ಹಾದು ಹೋಗುವುದರಿಂದ ಪ್ರತೀ ವರ್ಷ ನಿರ್ದಿಷ್ಟ ಅವಧಿಯಲ್ಲಿ ಉಲ್ಕಾವೃಷ್ಟಿಯಾಗುತ್ತದೆ. ಉದಾಹರಣೆಗೆ, ಪ್ರತೀ ವರ್ಷ ನವೆಂಬರ್ ತಿಂಗಳಿನಲ್ಲಿ ಭೂಮಿಯು “ಟೆಂಪಲ್-ಟಟ್ಟಲ್" ಧೂಮಕೇತುವಿನ ಪಥವನ್ನು ಹಾದು ಹೋಗುವಾಗ ಸಿಂಹ ರಾಶಿಯಿಂದ ಲಿಯೊನಿಡ್‌ ಉಲ್ಕಾವೃಷ್ಟಿಯು ಗೋಚರಿಸುತ್ತದೆ.


ಆದರೆ ಮಿಥುನ ರಾಶಿಯಿಂದ ಆರಂಭವಾಗುವ ಜೆಮಿನಿಡ್‌ ಉಲ್ಕಾವೃಷ್ಟಿಯು "3200 ಫೆಥನ್" ಎಂಬ ಒಂದು ಕ್ಷುದ್ರಗ್ರಹದಿಂದ ಉಧ್ಭವಿಸುತ್ತದೆ, ಧೂಮಕೇತುವಿನ ಕಾರಣದಿಂದಲ್ಲ. ಈ ಕ್ಷುದ್ರಗ್ರಹದ ಅವಶೇಷಗಳು ತುಂಬಾ ಹೆಚ್ಚಾಗಿರುವುದರಿಂದ ಜೆಮಿನಿಡ್‌ ಉಲ್ಕಾವೃಷ್ಟಿಯೂ ಒಂದು ಕುತೂಹಲಕಾರಿ ವಿದ್ಯಮಾನವಾಗಿದೆ. ಇದನ್ನು ವೀಕ್ಷಿಸುವವರಿಗೆ ಸುಮಾರು ಗಂಟೆಗೆ 120 ರಷ್ಟು ಉಲ್ಕೆಗಳು ಗೋಚರಿಸುತ್ತವೆ. ಶುಭ್ರ ಆಕಾಶದಲ್ಲಿ ಪ್ರತಿ 30 ಸೆಕೆಂಡುಗಳಿಗೊಮ್ಮೆ ಕಾಣುವ ಈ ಉಲ್ಕಾಪಾತವು ಖಗೋಳಾಸಕ್ತರಿಗೆ ವರದಾನವಾಗಿದೆ.


ಡಿಸೆಂಬರ್ 14 ರಂದು, ಈ ವಿದ್ಯಮಾನದ ಸೌಂದರ್ಯವನ್ನು ವೀಕ್ಷಿಸಲು ಕತ್ತಲಿನ ಪ್ರದೇಶ ಅತೀ ಸೂಕ್ತವಾದುದು. ರಾತ್ರಿ ಸುಮಾರು 9 ರ ಹೊತ್ತಿಗೆ ಪೂರ್ವ-ಕ್ಷಿತಿಜದಿಂದ ಮಿಥುನ ರಾಶಿಯು ಉದಯವಾಗುತ್ತದೆ. ಇದೇ ದಿಕ್ಕಿನ ಸ್ವಲ್ಪ ಮೇಲ್ಭಾಗದಲ್ಲಿ ಪಂಚ ಕೋನಾಕೃತಿಯನ್ನು ಗುರುತಿಸಬಹುದು. ಇದೇ ವಿಜಯಸಾರಥಿ ನಕ್ಷತ್ರಪುಂಜ. ಈ ನಕ್ಷತ್ರಪುಂಜದಲ್ಲಿ ಅತೀ ಪ್ರಕಾಶಮಾನವಾಗಿ ಗೋಚರಿಸುವ ನಕ್ಷತ್ರವೇ ಬ್ರಹ್ಮ ಹೃದಯ. ಇದರ ಕೆಳಗಡೆ ಮಿಥುನ ರಾಶಿಯ ಪುನರ್ವಸು ನಕ್ಷತ್ರ (ಕ್ಯಾಸ್ಟರ್ ಹಾಗು ಪೋಲಕ್ಸ್ ಗಳ ಜೋಡಿ) ವನ್ನು ಗುರುತಿಸಬಹುದು. ಮಿಥುನ ರಾಶಿಯನ್ನು, ಕ್ಯಾಸ್ಟರ್ ಮತ್ತು ಪೋಲಕ್ಸ್ (ಲವ ಮತ್ತು ಕುಶ)ಗಳ ದೇಹಗಳಂತೆ ಕಲ್ಪಿಸಿಕೊಳ್ಳಬಹುದು. ಪುನರ್ವಸುವಿನಲ್ಲಿ ಮೇಲ್ಭಾಗದಲ್ಲಿರುವ ನಕ್ಷತ್ರವು ಕ್ಯಾಸ್ಟರ್‌ ಆಗಿರುತ್ತದೆ.


ಈ ನಕ್ಷತ್ರದ ಮೇಲಿನಿಂದ ಜೆಮಿನಿಡ್ ಉಲ್ಕಾವೃಷ್ಟಿ ಉಧ್ಭವಿಸುವುದನ್ನು ರಾತ್ರಿ 9 ರಿಂದ ಸೂರ್ಯೋದಯದವರೆಗೆ ಕಾಣಬಹುದು. ಅದರಲ್ಲೂ ಇದನ್ನು ವೀಕ್ಷಿಸಲು ಇನ್ನೂ ಸೂಕ್ತವಾದ ಸಮಯ ರಾತ್ರಿ 1 ಗಂಟೆ ಯಿಂದ ಮುಂಜಾನೆ 4 ಗಂಟೆಯವರೆಗಿನ ಅವಧಿ. ಯಾಕೆಂದರೆ, ಈ ಅವಧಿಯಲ್ಲಿ ನಕ್ಷತ್ರ ಪುಂಜವು ಕ್ಷಿತಿಜದಿಂದ ತುಂಬಾ ಮೇಲೆ ಕಾಣುವುದರಿಂದ ಈ ಸಮಯದಲ್ಲಿ ಹೆಚ್ಚು ಉಲ್ಕೆಗಳನ್ನು ವೀಕ್ಷಿಸಿ ಆನಂದಿಸಬಹುದು.


ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘವು, ಆಸಕ್ತಿವುಳ್ಳ ಪ್ರತಿಯೊಬ್ಬರೂ ಈ ವಿದ್ಯಮಾನವನ್ನು ನೋಡಿ ಆನಂದಿಸಬೇಕೆಂದು ಆಶಿಸುತ್ತದೆ.


ಅತುಲ್ ಭಟ್ ಉಡುಪಿ


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post