ಶಿರಡಿ ಸಾಯಿ ಮಂದಿರದಲ್ಲಿ ಬೆಳಗಿನ ಕಾಕಡ್ ಆರತಿ ಮತ್ತು ಶೇಜ್ ಆರತಿಗೆ ಭಕ್ತರಿಗೆ ಪ್ರವೇಶ ನೀಡಲಾಗುವುದಿಲ್ಲ. ಕೆಲವು ಪುರೋಹಿತರ ಸಮ್ಮುಖದಲ್ಲಿ ಈ ಆರತಿ ಪೂಜೆ ನಡೆಯಲಿದೆ. ಭಕ್ತಾದಿಗಳು ಕೋವಿಡ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ದೇವಸ್ಥಾನ ಮತ್ತು ಜಿಲ್ಲಾಡಳಿತ ಮನವಿ ಮಾಡಿದೆ.
ರಚಿಸಿದ ಹೊಸ ನಿಯಮಗಳ ಪ್ರಕಾರ ಭಕ್ತರು ಬೆಳಿಗ್ಗೆ 6 ರಿಂದ ರಾತ್ರಿ 9 ರವರೆಗೆ ದರ್ಶನ ಪಡೆಯಬಹುದು. ರಾತ್ರಿ 9 ಗಂಟೆಯ ನಂತರ ರಾಜ್ಯದಲ್ಲಿ ಕರ್ಫ್ಯೂ ಹೇರಲಾಗಿರುವುದರಿಂದ ದೇಗುಲವನ್ನು ಮುಚ್ಚಲಾಗುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ.