ಮಂಗಳೂರು: ಹಿರಿಯ ಸಾಹಿತಿ, ಬಹುಭಾಷಾ ಕವಿ ಮತ್ತು ಹೃದಯವಂತ ಸಜ್ಜನ ಶ್ರೀ ಡಾ|| ಅಮೃತ ಸೋಮೇಶ್ವರ ಅವರು ಕನ್ನಡ ಸಾಹಿತ್ಯ ಕ್ಷೇತ್ರದ ಮೇರು ಸಾಹಿತಿಯಾಗಿದ್ದು ಅವರ ಮನೆಗೆ ಬೇಟಿ ನೀಡಿ ಪುಳಕಿತನಾಗಿದ್ದೇನೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನ ನೆಲೆಯಲ್ಲಿ, ಎಲ್ಲ ಹಿರಿಯ ಸಾಹಿತಿಗಳ ಮನೆ ಮನೆಗೆ ಭೇಟಿ ನೀಡಿ, ಆಶೀರ್ವಾದ ಪಡೆದು ಅವರ ಸಲಹೆಗಳನ್ನು ಮತ್ತು ಅನುಭವವನ್ನು ಆಡಳಿತದಲ್ಲಿ ಬಳಸಿಕೊಳ್ಳಲಾಗುವುದು.
ಕನ್ನಡ, ತುಳು, ಮಲಯಾಳ ಮೂರು ಭಾಷೆಗಳಲ್ಲಿ ಪ್ರೌಡಿಮೆ ಹಾಗೂ ಪಾಂಡಿತ್ಯ ಹೊಂದಿರುವ ಡಾ. ಸೋಮೇಶ್ವರ ಅವರು ಕನ್ನಡಿಗರ ಆಸ್ತಿಯಾಗಿದ್ದು, ಈಗಿನ ಯುವ ಸಾಹಿತಿಗಳಿಗೆ ಆದರ್ಶ ಪ್ರಾಯರಾಗಿ ಬದುಕುತ್ತಿದ್ದಾರೆ ಎಂದು ನಾಡೋಜ ಮಹೇಶ್ ಜೋಷಿ ಅಭಿಪ್ರಾಯಪಟ್ಟರು.
ದಿನಾಂಕ 22-12-2021ನೇ ಬುಧವಾರದಂದು ಮಂಗಳೂರಿನ ಸೋಮೇಶ್ವರದಲ್ಲಿರುವ ಡಾ. ಸೋಮೇಶ್ವರ ಅವರ ಮನೆ 'ಒಲುಮೆ'ಗೆ ಭೇಟಿ ನೀಡಿ ಅವರ ಜೊತೆ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾದ ಡಾ. ಎಂ.ಪಿ ಶ್ರೀನಾಥ್, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಡಾ. ಮಂಜುನಾಧ್ ರೇವಣ್‌ಕರ್, ಡಾ. ಮುರಲೀ ಮೋಹನ್ ಚೂಂತಾರು, ಶ್ರೀ ದಯಾನಂದ ಪೇರಾಜೆ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ